
ಬೆಳ್ತಂಗಡಿ (ಆ.28) ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪದೊಂದಿಗೆ ಮುಸುಕುದಾರಿ ಚಿನ್ನಯ್ಯ ಪ್ರತ್ಯಕ್ಷಗೊಂಡ ಬೆನ್ನಲ್ಲೇ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳಧಲ್ಲಿ ಕಾಣೆಯಾಗಿದ್ದಾಳೆ ಎಂದು ಅಚಾನಕ್ಕಾಗಿ ಪ್ರತ್ಯಕ್ಷಗೊಂಡ ಸುಜಾತಾ ಭಟ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಜಾತಾ ಭಟ್ ಪ್ರಕರಣ ಎಸ್‌ಐಟಿ ಕೈಗೆತ್ತಿಕೊಳ್ಳುತ್ತಿದ್ದಂತೆ ಬುರುಡೆ ಗ್ಯಾಂಗ್ ಸದಸ್ಯರ ಢವಢವ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳ ತಂಡ ಮಾಡುತ್ತಿದೆ. ಈ ಪ್ರಕರಣದಲ್ಲಿ ಇದೀಗ ಮಹತ್ವವದ ಬೆಳವಣಿಗೆಯಾಗಿದ್ದು, ಸುಜಾತಾ ಭಟ್ ಬಂಧನವಾಗುವ ಸಾಧ್ಯತೆ ಇದೆ.
ಅನನ್ಯಾ ಭಟ್ ತನ್ನ ಮಗಳು ಎಂದು ಬಿಂಬಿಸಲು ಹೋಗಿರುವ ಸುಜಾತಾ ಭಟ್ ಸಂಪೂರ್ಣ ಎಡವಿದ್ದಾರೆ. ಬುರುಡೆ ಗ್ಯಾಂಗ್ ಹೇಳಿಕೊಟ್ಟ ಕತೆಯನ್ನು ಅಚ್ಚುಕಟ್ಟಾಗಿ ಪ್ರಸುತಪಡಿಸಿದರೂ ಸುಳ್ಳು ಬಯಲಾಗಿದೆ. ಅನನ್ಯಾ ಭಟ್ ಪ್ರಕರಣ ಮೂಲಕ ಧರ್ಮಸ್ಥಳ ವಿರುದ್ದ ಅಪಪ್ರಚಾರ ಮಾಡಲಾಗಿತ್ತು. ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಲಾಗಿತ್ತು. ಧರ್ಮಸ್ಥಳ ವಿರುದ್ದ ಅಪಪ್ರಚಾರದ ಸಂಚು ಸೇರಿದಂತೆ ಹಲವು ಆರೋಪಗಳ ಕಾರಣದಿಂದ ಸುಜಾತಾ ಭಟ್ ಬಂಧನವಾಗು ಸಾಧ್ಯತೆ ಇದೆ.
ಬುರುಡೆ ಗ್ಯಾಂಗ್ ಜೊತೆ ಸೇರಿದ ಸುಜಾತಾ ಭಟ್ ತನ್ನ ಕತೆಗೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ ಯೂಟ್ಯೂಬ್ ಚಾನೆಲ್ ಮುಂದೆ ಪ್ರತ್ಯಕ್ಷರಾಗಿದ್ದರು. ಇದರ ಜೊತೆಗೆ ಬಿಬಿಸಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಖ್ಯಾತಿ ಮಾಧ್ಯಮಗಳು ಸುಜಾತಾ ಭಟ್ ಕಣ್ಣೀರನ್ನು ವಿಶ್ವ ಮಟ್ಟದಲ್ಲಿ ಪ್ರಸಾರ ಮಾಡಿತ್ತು. ಈ ಮೂಲಕ ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಸುಜಾತಾ ಭಟ್ ಮೂಲಕ ಬುರುಡೆ ಗ್ಯಾಂಗ್ ಕೂಡ ಭಾರಿ ಮೈಲೇಜ್ ಪಡೆದುಕೊಂಡಿತ್ತು. ಆದರೆ ಏಷ್ಯಾನೆಟ್ ಸುವರ್ಣನ್ಯೂಸ್ ಸುಜಾತಾ ಭಟ್‌ಗೆ ಅನನ್ಯಾ ಅನ್ನೋ ಮಗಳೇ ಇರಲಿಲ್ಲ. ಸುಜಾತಾ ದೂರಿನಲ್ಲಿ ಹೇಳಿರುವಂತೆ ಮಣಿಪಾಲ ಮಡಿಕಲ್ ಕಾಲೇಜಿನಲ್ಲಿ ಅನನ್ಯಾ ಭಟ್ ಇರಲೇ ಇಲ್ಲ ಅನ್ನೋ ಮಾಹಿತಿಯನ್ನು ಸಾಕ್ಷ್ಯ ಸಮೇತ ಬಹಿರಂಗಪಡಿಸಿತ್ತು. ಇಷ್ಟೇ ಅಲ್ಲ ಕೋಲ್ಕತಾದಲ್ಲಿ ಸ್ಟೆನೋಗ್ರಾಫರ್ ಆಗಿದ್ದೆ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ಅಸಲಿ ಕತೆಯನ್ನೂ ಸುವರ್ಣನ್ಯೂಸ್ ಬಹಿರಂಗಪಡಿಸಿತ್ತು.
ತಪ್ಪಾಯ್ತು, ನಾನು ಹೇಳಿದ್ದೆಲ್ಲಾ ಸುಳ್ಳು ನನ್ನನ್ನು ಬಿಟ್ಟುಬಿಡಿ; ವಿಚಾರಣೆ ವೇಳೆ ಕಣ್ಣೀರಿಟ್ಟ ಸುಜಾತಾ
ಅನನ್ಯಾ ಭಟ್ ಮಗಳೇ ಇರಲಿಲ್ಲ ಅನ್ನೋ ಸಾಕ್ಷ್ಯವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಹಿರಂಗಪಡಿಸಿದ ಬೆನ್ನಲ್ಲೇ ಸುಜಾತಾ ಭಟ್ ಹಾಗೂ ಆಕೆಯ ವಕೀಲ ಮಂಜುನಾಥ್ ಮತ್ತೊಂದು ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದರು. ತನ್ನ ಮಗಳು ಅನನ್ಯಾ ಭಟ್ ಎಂದು ಫೋಟೋ ಒಂದನ್ನು ಬಹಿರಂಗಪಡಿಸಿದ್ದರು. ಆದರೆ ಈ ಫೋಟೋ ಕೊಡಗಿನ ವಸಂತಿ ಫೋಟೋ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ದಾಖಲೆ ಸಮೇತ ಬಹಿರಂಗಪಡಿಸಿತ್ತು. ಅಷ್ಟರಲ್ಲೇ ಸುಜಾತಾ ಭಟ್ ಪ್ರಕರಣ ಎಸ್ಐಟಿಗೆ ವರ್ಗಾವಣೆಗೊಂಡಿತ್ತು. ಇತ್ತ ಸುಜಾತಾ ಭಟ್ ಕಂಗಾಲಾಗಿದ್ದರು. ಇಷ್ಟೇ ಅಲ್ಲ ತಾನು ಹೇಳಿದ್ದು ಸುಳ್ಳು, ತನಗೆ ಅನನ್ಯಾ ಭಟ್ ಅನ್ನೋ ಮಗಳೇ ಇರಲಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದರು. ಇದೀಗ ವಿಚಾರಣೆಯಲ್ಲೂ ಸುಜಾತಾ ಭಟ್ ಸತ್ಯ ಒಪ್ಪಿಕೊಂಡಿದ್ದಾರೆ. ತಾನು ಹೇಳಿದ್ದು ಸುಳ್ಳು, ನನ್ನನ್ನು ಬಿಟ್ಟುಬಿಡಿ ಎಂದು ಎಸ್‌ಐಟಿ ಮುಂದೆ ಕಣ್ಣೀರಿಟ್ಟಿದ್ದಾರೆ.
ಕಳೇಬರ ಸಿಕ್ಕಾಗ ಪಾರ್ಟಿ, ಸಿಗದಿದ್ದಾಗ ಚಾಟಿ, ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಕೊಟ್ಟ ಟಾರ್ಚರ್ ಬಹಿರಂಗ
ಕಳೆದ ಮೂರು ದಿನಗಳಿಂದ ಸುಜಾತಾ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಇದೀಗ ಸಂಕಷ್ಟದಲ್ಲಿದೆ. ಇಷ್ಟೇ ಅಲ್ಲ ಸುಜಾತಾ ಭಟ್ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್‌ಗೆ ತೀವ್ರ ಹಿನ್ನಡೆ ತಂದಿತ್ತು.ಇಷ್ಟೇ ಅಲ್ಲ ಸುಜಾತಾ ಭಟ್ ಮೂಲಕ ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ಒಂದೊಂದಾಗಿ ಬಯಲಾಗಿತ್ತು. ಹೀಗಾಗಿ ವಿಚಾರಣೆಗೆ ಆಗಮಿಸಿರುವ ಸುಜಾತಾ ಭಟ್ ಏಕಾಂಗಿಯಾಗಿದ್ದಾರೆ, ಅತ್ತ ವಕೀಲ ಮಂಜುನಾಥ ಗೌಡ ಇಲ್ಲ, ಇತ್ತ ಮಹೇಶ್ ಶೆಟ್ಟಿ ತಿಮರೋಡಿಯೂ ಇಲ್ಲ. ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದ ಸುಜಾತಾ ಭಟ್ ಇದೀಗ ಉಜಿರೆಯ ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾರೆ.