
ಬೆಳ್ತಂಗಡಿ (ಆ.28) ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದ ದೊತೆಗೆ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕೂಡ ರೋಚಕ ತಿರುವು ಪಡೆದುಕೊಂಡಿದೆ. ತಾನು ಮಾಡಿದ ಆರೋಪ ಸುಳ್ಳು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದ ಸುಜಾತಾ ಭಟ್ ಬಳಿಕ ಉಲ್ಟಾ ಹೊಡೆದಿದ್ದರು. ಇದೀಗ ಎಸ್ಐಟಿ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಮೂರನೇ ದಿನದ ವಿಚಾರಣೆ ಎದುರಿಸುತ್ತಿರುವ ಸುಜಾತಾ ಭಟ್, ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ತಾನು ದೂರು ವಾಪಸ್ ಪಡೆಯುತ್ತೇನೆ ಎಂದಿದ್ದಾರೆ. ಇದಕ್ಕೆ ಎಸ್ಐಟಿ ಅಧಿಕಾರಿಗಳು ಒಪ್ಪಿಲ್ಲ. ಹೀಗಾಗಿ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ನಾನು ಮಾಡಿದ ಆರೋಪ ಎಲ್ಲಾ ಸುಳ್ಳು. ಇಲ್ಲಿಗೆ ಬಿಟ್ಟು ಬಿಡಿ ಎಂದು ಸುಜಾತಾ ಭಟ್ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ತಾನು ಹೇಳಿದ್ದು ಎಲ್ಲವೂ ಸುಳ್ಳು ಎಂದು ಸುಜಾತಾ ಭಟ್ ಎಸ್ಐಟಿ ವಿಚಾರಣೆಯಲ್ಲಿ ಹೇಳಿದ್ದಾರೆ. ಇದೇ ವೇಳೆ ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಹೆಸರನ್ನು ಸುಜಾತಾ ಭಟ್ ಬಹಿರಂಗಪಡಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಮುಂದೆ ಧರ್ಮಸ್ಥಳ ವಿರುದ್ಧ ಸುಳ್ಳಿನ ರಹಸ್ಯ ಹೆಣೆದು ಆರೋಪ ಹೊರಿಸಲು ಹೇಳಿದವರ ಹೆಸರನ್ನು ತಿಳಿಸಿದ್ದಾರೆ. ಎಸ್ಐಟಿ ತನಿಖಾಧಿಕಾರಿ ಗುಣಪಾಲ್ ನಡೆಸುತ್ತಿರುವ ವಿಚಾರಣೆಯಲ್ಲಿ ಸುಜಾತಾ ಭಟ್ ಸುಳ್ಳಿನ ಕಂತೆಗಳು ಹೊರಬಂದಿದೆ. ಇಂದಿನ ವಿಚಾರಣೆಗ ಹಾಜರಾಗುವ ವೇಲೆ ಕೆಲ ದಾಖಲೆಗಳನ್ನು ಹಾಜರುಪಡಿಸುವಂತೆ ಸುಜಾತಾ ಭಟ್‌ಗೆ ಸೂಚನೆ ನೀಡಲಾಗಿದೆ.
ಎಸ್ಐಟಿ ಅಧಿಕಾರಿಗಳಿಗೆ ಸುಜಾತಾ ಭಟ್ ವಿಚಾರಣೆ ಸವಾಲಾಗಿದೆ. ಪದೇ ಪದೇ ಕಣ್ಣೀರು ಹಾಕುತ್ತಿರುವ ಸುಜಾತಾ ಭಟ್ ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸುಜಾತಾ ಭಟ್ ಸಮಾಧಾನಪಡಿಸಿ ಮತ್ತೆ ವಿಚಾರಣೆ ನಡೆಸುವುದು ಎಸ್ಐಟಿ ಅಧಿಕಾರಿಗಳು ತಲೆನೋವಿನ ಕೆಲಸವಾಗುತ್ತಿದೆ.
ಧರ್ಮಸ್ಥಳ ವಿರುದ್ದ ಬುರುಡೆ ಕತೆ ಹೆಣೆದ ಷಡ್ಯಂತ್ರ ತಂಡಕ್ಕೆ ಮೊದಲು ಮಗ್ಗುಲ ಮುಳ್ಳಾಗಿದ್ದು ಇದೇ ಸುಜಾತಾ ಭಟ್. ಸುಜಾತಾ ಭಟ್ ಹೆಣೆದ ಕೆತೆಗಳೆಲ್ಲವೂ ಸುಳ್ಳು ಅನ್ನೋದು ಬಯಲಾಗುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಅಂತರ ಕಾಯ್ದುಗೊಳ್ಳಲು ಆರಂಭಿಸಿತ್ತು. ಇದೀಗ ಸುಜಾತಾ ಭಟ್‌ನಿಂದ ಸಂಪೂರ್ಣ ದೂರ ಉಳಿದುಕೊಂಡಿದ್ದಾರೆ. ಆರಂಭದಲ್ಲೇ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಆಶ್ರಯ ಪಡೆದಿದ್ದ ಸುಜಾತಾ ಭಟ್ ಇದೀಗ ಎಸ್ಐಟಿ ವಿಚಾರಣೆ ವೇಳೆ ಉಜಿರೆಯ ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾರೆ. ಉಜಿರೆಯಿಂದ ಬೆಳ್ತಂಗಡಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಶವ ಹೂತಿಟ್ಟ ಪ್ರಕರಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ತಾಯಿಯ ಕಣ್ಣೀರಿನ ಕತೆಯ ಅವಶ್ಯಕತೆ ಇತ್ತು. ಇದಕ್ಕೆ ತಕ್ಕಂತೆ ಸುಜಾತಾ ಭಟ್ ಕೂಡ ಎಂಟ್ರಿಯಾಗಿದ್ದರು. ಹೀಗಾಗಿ ಸುಜಾತಾ ಭಟ್ ಅವರನ್ನು ಬಳಸಿಕೊಂಡು ಅನನ್ಯಾ ಭಟ್ ನಾಪತ್ತೆ ಪ್ರಕಣ, ತಾಯಿ ಕಣ್ಣೀರು, ಅಸ್ಥಿಗಾಗಿ ಹುಡುಕಾಟದ ಕತೆ ಹೆಣೆಯಲಾಗಿತ್ತು. ಆದರೆ ಈ ಕತೆ ಅಷ್ಟೇ ವೇಗದಲ್ಲಿ ಕುಸಿದು ಬಿದ್ದ ಕಾರಣ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಅಂತರ ಕಾಯ್ದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇತ್ತ ಶವ ಹೂತಿಟ್ಟ ಪ್ರಕರಣವೂ ಅತೀ ದೊಡ್ಡ ಷಡ್ಯಂತ್ರ ಭಾಗವಾಗಿತ್ತು ಅನ್ನೋದು ಬಯಲಾಗಿದೆ.
ಶವ ಹೂತಿಟ್ಟ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಚಿನ್ನಯ ವಿಚಾರಣೆ ನಡೆಲಾಗಿದೆ. ವಿಚಾರಣೆಯಲ್ಲಿ ಹೇಳಿದ ಸ್ಫೋಟಕ ಮಾಹಿತಿ ಆಧರಿಸಿ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಎಸ್ಐಟಿ ದಾಳಿ ನಡೆಸಿ ಹಲವು ಸಾಕ್ಷ್ಯ ಸಂಗ್ರಹಿಸಲಾಗಿದೆ.