ಗುಡ್ಡ ಕುಸಿತ ಪ್ರಕರಣ, ಗೋಡೆ ಬಿದ್ದರೂ ಮಕ್ಕಳ ರಕ್ಷಿಸಿದ ತಾಯಿ ಅಸ್ವಸ್ಥ, ರಕ್ಷಣಾ ಕಾರ್ಯಕ್ಕೆ ಹಲವು ಅಡ್ಡಿ

Published : May 30, 2025, 11:53 AM IST
Mangaluru Landslide

ಸಾರಾಂಶ

ಮಂಗಳೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮನೆ ಅವಶೇಷದಡಿ ಸಿಲುಕಿರುವ ಇಬ್ಬರು ಮಕ್ಕಳು ಹಾಗೂ ತೀವ್ರವಾಗಿ ಗಾಯಗೊಂಡಿರುವ ತಾಯಿ ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿಯಾಗಿದೆ. ಇಬ್ಬರು ಮಕ್ಕಳನ್ನು ಮನೆ ಗೊಡೆಯಿಂದ ರಕ್ಷಿಸಿದ ತಾಯಿ ಕೂಗಿದ್ದಾರೆ. 

ಮಂಗಳೂರು(ಮೇ.30) ಮಂಗಳೂರಿ ಮೋಂಟೆಪದವು ಗುಡ್ಡೆ ಕುಸಿತ ಪ್ರಕರಣದ ಭಯಾನಕ ದೃಶ್ಯಗಳು ಕರಳು ಹಿಂಡುತ್ತಿದೆ. ಮನೆ ಮೇಲೆ ಗುಡ್ಡ ಕುಸಿದ ವೇಳೆ ಇಬ್ಬರು ಮಕ್ಕಳನ್ನು ತಾಯಿ ರಕ್ಷಿಸಿದ್ದಾಳೆ. ಆದರೆ ತೀವ್ರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಮನೆ ಅವಶೇಷಗಳಿಡಿಯಿಂದ ರಕ್ಷಿಸುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಕ್ಕಳನ್ನು ರಕ್ಷಿಸಿದ ತಾಯಿ, ಕಾರ್ಯಾಚರಣೆ ವೇಳೆ ಕೂಗಿಕೊಂಡಿದ್ದಾರೆ. ಇಬ್ಬರು ಮಕ್ಕಳ ರಕ್ಷಿಸಲು ಅಂಗಲಾಚಿದ್ದಾರೆ. ಬಳಿಕ ಕೆಲವೇ ಕ್ಷಣದಲ್ಲಿ ತಾಯಿ ಆಸ್ವಸ್ಥಗೊಂಡ ಕರಳು ಹಿಂಡುವ ಘಟನೆ ನಡೆದಿದೆ.

ಮನೆಯಡಿ ಸಿಲುಕಿರುವ ತಾಯಿ ಹಾಗೂ ಇಬ್ಬರು ಮಕ್ಕಳು

ಮಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮೋಂಟೆಪದವಿನಲ್ಲಿರುವ ಮನೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. 6 ಮಂದಿ ಇದ್ದ ಕುಟುಂಬದ ಮನೆ ಮೇಲೆ ಗುಡ್ಡ ಕುಸಿದು ಭಾರಿ ಅನಾಹುತವಾಗಿದೆ. ಕಾಂತಪ್ಪ ಪೂಜಾರಿ ಮನೆ ಮೇಲೆ ಗುಡ್ಡ ಕುಸಿದಿದೆ. ಈ ಘಟನೆಯಲ್ಲಿ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಮೃತಪಟ್ಟಿದ್ದಾರೆ. ಇನ್ನು ಕಾಂತಪ್ಪ ಪೂಜಾರಿ ಕಾಲು ಮುರಿದಿದೆ. ಇವರ ಮಗ ಸೀತಾರಾಮ ಇಬ್ಬರನ್ನು ರಕ್ಷಿಸಲಾಗಿದೆ. ಆದರೆ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಇನ್ನೂ ಮನೆಯ ಅವಶೇಷಗಳಡಿ ಸಿಲುಕಿದ್ದಾರೆ. ತಾಯಿ ಅಶ್ವಿನಿ(33) ಹಾಗೂ ಮಕ್ಕಳಾದ ಆರ್ಯನ್(3) ಹಾಗೂ ಆರುಷ್(2) ರಕ್ಷಣೆಗೆ ಕಾರ್ಯಾಚರಣೆ ತೀವ್ರಗೊಂಡಿದೆ.

ಮಕ್ಕಳ ರಕ್ಷಿಸಲು ಕೂಗಿಕೊಂಡ ತಾಯಿ

ಗೋಡೆ ಕುಸಿದು ಬೀಳುತ್ತಿದ್ದಂತೆ ತಾಯಿ ಅಶ್ವಿನಿ ಇಬ್ಬರು ಮಕ್ಕಳನ್ನು ಅವಶೇಷ ಮಕ್ಕಳ ಮೇಲ ಬೀಳದಂತೆ ತಡೆದಿದ್ದಾರೆ. ಈ ವೇಳೆ ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತ ಇಬ್ಬರ ಮಕ್ಕಳನ್ನು ತಾಯಿ ರಕ್ಷಿಸಿದ್ದಾರೆ. ಮತ್ತೊಂದೆಡೆ ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳುತ್ತಿದ್ದಂತೆ ತಾಯಿ ಕೂಗಿಕೊಂಡಿದ್ದಾರೆ. ಇಬ್ಬರು ಮಕ್ಕಳ ರಕ್ಷಿಸಲು ಅಂಗಲಾಚಿದ್ದಾರೆ. ಕೆಲವೇ ಕ್ಷಣಗಳಲ್ಲಿ ತಾಯಿ ಅಸ್ವಸ್ಥಗೊಂಡಿದ್ದಾರೆ. ಇದೀಗ ತಾಯಿ ಹಾಗೂ ಮಕ್ಕಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.ನಿರಂತರ ಮಳೆ ಸುರಿಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ಸದ್ಯ ತಾಯಿ ಹಾಗೂ ಇಬ್ಬರು ಮಕ್ಕಳು ಮನೆಯ ಅವಶೇಷದಡಿ ಸಿಲುಕಿದ್ದಾರೆ. ಇದುವರೆಗೂ ರಕ್ಷಣೆ ಸಾಧ್ಯವಾಗಿಲ್ಲ. ನಿರಂತರವಾಗಿ ಗುಡ್ಡ ಕುಸಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅವಶೇಷ ಸರಿಸಿದರೆ ಮಕ್ಕಳು ಹಾಗೂ ತಾಯಿ ಮೇಲೆ ಬೀಳವ ಸಾಧ್ಯತೆ ಇರುವ ಕಾರಣ ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯರ ನೆರವಿನಲ್ಲಿ ಅತ್ಯಂತ ಸೂಕ್ಷ್ಮವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ. ಸ್ಥಳೀಯರ ಪ್ರಕಾರ ಶೀಘ್ರದಲ್ಲೇ ಮೂವರನ್ನು ರಕ್ಷಿಸಲಾಗುತ್ತದೆ ಎಂದಿದ್ದಾರೆ.

PREV
Read more Articles on
click me!

Recommended Stories

ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?