ಬೇಕಲ ಶಾಲೆಗೆ ಶೀಘ್ರ ಕನ್ನಡಿಗ ಶಿಕ್ಷಕರ ನೇಮಕ

By Kannadaprabha News  |  First Published Oct 19, 2019, 9:40 AM IST

ಶೀಘ್ರದಲ್ಲಿಯೇ ಕನ್ನಡ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದು ಬೇಕಲ ಫಿಶರೀಸ್‌ ಸೆಕೆಂಡರಿ ಹೈಯರ್‌ ಸ್ಕೂಲ್‌ ಮುಖ್ಯಗುರು ಜಯಪ್ರಕಾಶ್‌ ಹೇಳಿದ್ದಾರೆ. ಮಲಯಾಳಿ ಶಿಕ್ಷಕರ ಬದಲಿಗೆ ಕನ್ನಡ ಶಿಕ್ಷಕರನ್ನು ನೇಮಿಸಲು ಹೆಚ್ಚಿನ ಒತ್ತಡ ಕೇಳಿ ಬಂದಿತ್ತು.


ಮಂಗಳೂರು(ಅ.19): ಕೇರಳ ಗಡಿನಾಡು ಕಾಸರಗೋಡಿನ ಬೇಕಲ ಫಿಶರೀಸ್‌ ಸೆಕೆಂಡರಿ ಹೈಯರ್‌ ಸ್ಕೂಲ್‌ನಲ್ಲಿ ಮಲಯಾಳಿ ಶಿಕ್ಷಕರ ನೇಮಕದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಂಟಾದ ತೊಂದರೆಯ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಹಾಗೂ ರಕ್ಷಕರ ಸಭೆ ಶುಕ್ರವಾರ ನಡೆಯಿತು.

ಬೇಕಲ ಹಾಗೂ ಉದುಮ ಶಾಲಾ ಕನ್ನಡ ಶಾಲೆ ಉಳಿಸಿ ಹೋರಾಟಗಾರ ಶಂಕರ್‌ ಮತ್ತು ಬೇಕಲ ಶಾಲಾ ಮುಖ್ಯಗುರು ಜಯಪ್ರಕಾಶ್‌ ಇವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

Tap to resize

Latest Videos

ಮಲಯಾಳಿ ಶಿಕ್ಷಕರ ವಿರುದ್ಧ ಮುಂದುವರಿದ ಪ್ರತಿಭಟನೆ

ಸಭೆಯಲ್ಲಿ ಈ ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಿ ಶಿಕ್ಷಕರ ನೇಮಕದಿಂದ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿ, ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ, ಪ್ರತಿಭಟನೆ ಬಗ್ಗೆ ಚರ್ಚಿಸಲಾಯಿತು. ಪ್ರಸಕ್ತ ಕನ್ನಡಿಗರ ವಿರೋಧದಿಂದ ಮಲಯಾಳಿ ಭಾಷಾ ಶಿಕ್ಷಕಿ ರಜೆ ಮೇಲೆ ತೆರಳಿದ್ದಾರೆ. ಹಾಗಾಗಿ ಖಾಲಿ ಇರುವ ಹುದ್ದೆಗೆ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಭಾಷೆ ಹೊತ್ತಿರುವ ಗೌರವ ಶಿಕ್ಷಕರನ್ನು ನೇಮಿಸಲು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸೋಮವಾರ ವೇಳೆಗೆ ಗೌರವ ಶಿಕ್ಷಕರ ನೇಮಕಗೊಳ್ಳುವ ಸಂಭವ ಇದೆ ಎಂದು ಮುಖ್ಯಗುರು ಜಯಪ್ರಕಾಶ್‌ ಹೇಳಿದ್ದಾರೆ.

ಕಾಸರಗೋಡು : ಕನ್ನಡ ಬಾರದ ಶಿಕ್ಷಕಿಯನ್ನು ವಾಪಸ್‌ ಕಳುಹಿಸಿದ ವಿದ್ಯಾರ್ಥಿಗಳು!.

ಇದೇ ರೀತಿ ಉದುಮ ಶಾಲೆಗೆ ಆಗಮಿಸಿದ ಮಲಯಾಳಿ ಭಾಷಿಕ ಶಿಕ್ಷಕರೂ ರಜೆ ಮೇಲೆ ತೆರಳಿದ್ದಾರೆ. ಅಲ್ಲಿಗೂ ಶೀಘ್ರವೇ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಭಾಷೆಯ ಗೌರವ ಶಿಕ್ಷಕರ ನೇಮಕ ನಡೆಯಲಿದೆ ಎಂದು ಶಂಕರ್‌ ತಿಳಿಸಿದ್ದಾರೆ.

click me!