ಚುನಾವಣೆಗೆ ಅಗ್ರೆಸಿವ್ ಪ್ರಚಾರ ಮಾಡಿ ಎಂದ ಸಿದ್ದು

By Kannadaprabha NewsFirst Published Oct 19, 2019, 8:51 AM IST
Highlights

ಮಂಗಳೂರಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪಾಲಿಕೆ ಚುನಾವಣೆಗೆ ಟಿಪ್ಸ್ ಹೇಳಿ ಕೊಟ್ಟಿದ್ದಾರೆ. ಅಗ್ರೆಸಿವ್ ಚುನಾವಣಾ ಪ್ರಚಾರ ಮಾಡಿ ಎಂದು ಸಿದ್ದು, ಕಾರ್ಯಕರ್ತರಿಗೆ ಇನ್ನೇನೇನು ಟಿಪ್ಸ್ ಕೊಟ್ರು ಎಂದು ತಿಳಿಯೋಕೆ ಈ ಸುದ್ದಿ ಓದಿ.

ಮಂಗಳೂರು(ಅ.19): ವಿಧಾನಸಭೆ ಪ್ರತಿಪಕ್ಷ ನಾಯಕರಾದ ಮೇಲೆ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿರುವ ಸಿದ್ದರಾಮಯ್ಯ, ಮುಂಬರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಗೆಲ್ಲಲು ಕಾರ್ಯಕರ್ತರಿಗೆ ಟಿಫ್ಸ್‌ ಹೇಳಿಕೊಟ್ಟಿದ್ದಾರೆ.

ಪ್ರಸ್ತುತ ರಾಜ್ಯದಲ್ಲೂ, ದೇಶದಲ್ಲೂ ಬಿಜೆಪಿಯವರ ಸುಳ್ಳುಗಳೇ ಮೇಲುಗೈ ಪಡೆಯುತ್ತಿವೆ. ತಾವೇ ದೇಶಭಕ್ತರು, ಕಾಂಗ್ರೆಸ್‌ ಧರ್ಮ ವಿರೋಧಿ ಎಂದು ಸುಳ್ಳು ಹೇಳ್ತಿದ್ದಾರೆ. ಇದನ್ನು ಗಂಭೀರವಾಗಿ, ಅಗ್ರೆಸಿವ್‌ ಆಗಿ ಕಾಂಗ್ರೆಸ್‌ ಕಾರ್ಯಕರ್ತರು ಕೌಂಟರ್‌ ಮಾಡ್ತಿಲ್ಲ. ಅವರ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಮನೆ ಮನೆಗಳಿಗೂ ತಲುಪಿಸಬೇಕು ಎಂದಿದ್ದಾರೆ.

BSY ಮೋದಿ, ಅಮಿತ್ ಶಾ ಅವರ ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು

 ಹಿಂದೆ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಆರೋಪಗಳನ್ನು ಸರಿಯಾಗಿ ಕೌಂಟರ್‌ ಮಾಡದಿದ್ದುದರಿಂದಲೇ ಸೋಲಬೇಕಾಯ್ತು ಎಂದು ವಿಮರ್ಶಿಸಿದ್ದಾರೆ.

ಈ ಬಾರಿ ಹಾಗಾಗಬಾರದು, ಮನೆ ಮನೆಗೆ ಹೋಗಿ ಕುಳಿತುಕೊಳ್ಳಿ, ಬಿಜೆಪಿಯವರ ಸುಳ್ಳುಗಳಿಗೆ ಬಲವಾದ ಪ್ರತ್ಯುತ್ತರ ರೆಡಿ ಮಾಡಿಟ್ಟುಕೊಳ್ಳಿ. ಅವರು ಹೇಗೆ ಡೋಂಗಿಗಳು, ಅಭಿವೃದ್ಧಿ ವಿರೋಧಿಗಳು, ಬಡವರ ವಿರೋಧಿಗಳು ಎಂಬುದನ್ನು ಜನರಿಗೆ ಮನದಟ್ಟು ಮಾಡಿ ಎಂದು ಸಲಹೆ ನೀಡಿದರು. ಮಂಗಳೂರಲ್ಲಿ ಈಗ ರಸ್ತೆಗಳು ಕಾಂಕ್ರಿಟಿಕರಣಗೊಂಡು ಸಂಚಾರಯೋಗ್ಯವಾಗಿರುವುದಕ್ಕೆ ಕಾಂಗ್ರೆಸ್‌ ಆಡಳಿತವೇ ಕಾರಣವಾಗಿದೆ. ಅದನ್ನು ಜನರಿಗೆ ತಲುಪಿಸಿ ಎಂದು ಸಲಹೆ ನೀಡಿದ್ದಾರೆ.

ಕದ್ರಿ ಗೋಪಾಲನಾಥ್‌ ಮನೆಗೆ ಸಿದ್ದು ಭೇಟಿ

click me!