ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

By Kannadaprabha NewsFirst Published Oct 19, 2019, 8:35 AM IST
Highlights

ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

ಮಂಗಳೂರು(ಆ.19): ಮೂಡುಬಿದಿರೆಯ ಸ್ವರಾಜ್ಯ ಮೈದಾನ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ಎರಡು ದಿನಗಳ ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

ಒಟ್ಟು 9 ಹೊಸ ಕೂಟದಾಖಲೆಗಳ ಪೈಕಿ 8 ಆಳ್ವಾಸ್‌, ಶಿರ್ತಾಡಿ ಮೌಂಟ್‌ ಕಾರ್ಮೆಲ್‌ 1 ದಾಖಲೆ ತನ್ನದಾಗಿಸಿಕೊಂಡಿದೆ. 62 ಚಿನ್ನ, 45 ಬೆಳ್ಳಿ ಹಾಗೂ 16 ಕಂಚಿನ ಪದಕ ಸಹಿತ ಒಟ್ಟು 123 ಪದಕಗಳೊಂದಿಗೆ ಎಲ್ಲ ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿಗಳು ಆಳ್ವಾಸ್‌ ಪಾಲಾಗಿವೆ.

BSY ಮೋದಿ, ಅಮಿತ್ ಶಾ ಅವರ ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ ಆಂಗ್ಲಮಾಧ್ಯಮ ಶಾಲೆ (32ಅಂಕ), 14 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆ (61 ಅಂಕ), ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ ಆಂಗ್ಲ ಮಾಧ್ಯಮ ಶಾಲೆ (29 ಅಂಕ), 17 ವರ್ಷದೊಳಗಿನ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆ (98 ಅಂಕ) ಹಾಗೂ ಬಾಲಕಿಯರಲ್ಲಿ ಆಳ್ವಾಸ್‌ ಆಂಗ್ಲಮಾಧ್ಯಮ ಶಾಲೆ (15 ಅಂಕ) ತಂಡ ಪ್ರಶಸ್ತಿ ಗಳಿಸಿವೆ.

ಕದ್ರಿ ಗೋಪಾಲನಾಥ್‌ ಮನೆಗೆ ಸಿದ್ದು ಭೇಟಿ...

ಪ್ರಾ. ಶಾಲಾ ಬಾಲಕರ ವಿಭಾಗದಲ್ಲಿ ಆಳ್ವಾಸ್‌ ಕ.ಮಾ.ಶಾಲೆಯ ಶಿವಾನಂದ ಪೂಜಾರಿ (10), ಬಾಲಕಿಯರಲ್ಲಿ ಆಳ್ವಾಸ್‌ ಆ. ಮಾ. ಶಾಲೆಯ ಗೌತಮಿ ಹಾಗೂ ಅದೇ ಶಾಲೆಯ ಹರ್ಷಿತಾ ಆರ್‌. (ಇಬ್ಬರೂ 13 ಅಂಕ) ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿ ಗಳಿಸಿದರು. 14 ವರ್ಷದ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್‌ ಕ.ಮಾ. ಶಾಲೆಯ ಸಂಜು, ಸುಜಲ್‌, ಮಂಜುನಾಥ, ಸೌರಭ್‌ (ಇಬ್ಬರೂ 10 ಅಂಕ), ಬಾಲಕಿಯರಲ್ಲಿ ಆಳ್ವಾಸ್‌ ಆ. ಮಾ. ಶಾಲೆಯ ಕೀರ್ತನಾ ಮತ್ತು ಪೂರ್ವಿ ಸತ್ಯಪ್ಪ (ಇಬ್ಬರೂ 10 ಅಂಕ), 17 ವರ್ಷದ ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಆಳ್ವಾಸ್‌ ಕ.ಮಾ. ಶಾಲೆಯ ಕಿರಣ (15), ಬಾಲಕಿಯರಲ್ಲಿ ಆಳ್ವಾಸ್‌ ಆ.ಮಾ.ಶಾಲೆಯ ಬಿ.ಎಂ. ಹರ್ಷಿತಾ ಮತ್ತು ಪ್ರಣಮ್ಯ (ಇಬ್ಬರೂ 15 ಅಂಕ) ವೈಯಕ್ತಿಕ ಕ್ರೀಡಾಗ್ರಣಿ ಪ್ರಶಸ್ತಿ ಎತ್ತಿಕೊಂಡು ಆಳ್ವಾಸ್‌ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತಂದಿದ್ದಾರೆ.

ಒಂದೇ ದಿನ ಮಂಗಳೂರಿನಲ್ಲಿ 72 ಕಡೆ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ!

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಲಂಗಾರು ಸಂತ ಥೋಮಸ್‌ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭ ಆತಿಥೇಯ ಸಂತ ಥೋಮಸ್‌ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ವಾಲ್ಟರ್‌ ಡಿಸೋಜ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಜರಗಿತು.

ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮುನ್ನಾ ರಾವ್‌, ಗೋಲ್ಡನ್‌ ಗೇಟ್‌ ಫ್ಯಾಮಿಲಿ ರೆಸ್ಟಾರೆಂಟ್‌ನ ಪ್ರಬಂಧಕ ಶ್ಯಾಮ್‌ಪ್ರಸಾದ್‌ ಹೆಗ್ಡೆ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್‌, ಕೂಟದ ಎಲ್ಲ ನಗದು ಬಹುಮಾನ ಪ್ರಾಯೋಜಿಸುತ್ತ ಬಂದಿರುವ ಪ್ರಾಂತ್ಯ ಪ್ರೌಢಶಾಲಾ ದೈ.ಶಿ. ಶಿಕ್ಷಕ ವಿನಯ ಕುಮಾರ್‌, ತಮ್ಮ ಮಾತಾಪಿತರ ಹೆಸರಿನಲ್ಲಿ ಸಮಗ್ರ ಪ್ರಶಸ್ತಿ ಪರ್ಯಾಯ ಟ್ರೋಫಿಗಳನ್ನು ಪ್ರಾಯೋಜಿಸಿರುವ ಅಳಿಯೂರು ಸ.ಪ್ರೌ.ಶಾಲಾ ದೈ.ಶಿ.ಶಿ. ವಸಂತ ಜೋಗಿ ಭಾಗವಹಿಸಿದ್ದರು. ದೈ.ಶಿ. ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಸಿ. ಹೆಲೆನ್‌ ಗೋವಿಯಸ್‌ ಇದ್ದರು.

ಸಂತ ಥೋಮಸ್‌ ಶಾಲಾ ಮುಖ್ಯಶಿಕ್ಷಕಿ ಸಿಲ್ವಿಯಾ ಡೆಸಾ ಸ್ವಾಗತಿಸಿ, ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು. ಆತಿಥೇಯ ಶಾಲಾ ದೈ.ಶಿ.ಶಿ. ಉದಯಕುಮಾರ್‌ ವಂದಿಸಿದ್ದಾರೆ.

click me!