ಮಂಗಳೂರು ವಲಯದ ಅಂಚೆ ಕಚೇರಿಗಳು ಈಗ ಗೂಗಲ್ ಮ್ಯಾಪ್‌ಗೂ ಕಾಲಿಟ್ಟಿವೆ. ವಲಯದ ಅಧೀನದಲ್ಲಿರುವ ಎಲ್ಲ 153 ಅಂಚೆ ಕಚೇರಿಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಪ್ರಸ್ತುತ ಎಲ್ಲ ಊರಿನಲ್ಲಿರುವ ಅಂಚೆ ಕಚೇರಿಗಳ ಫೋನ್ ನಂಬರ್ ಮತ್ತು ಆಯಾ ಅಂಚೆ ಕಚೇರಿ ಕಾರ್ಯ ನಿರ್ವಹಿಸುವ ಸಮಯವನ್ನು ಗೂಗಲ್ ಮ್ಯಾಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಮಂಗಳೂರು(ಅ.23): ಮಂಗಳೂರು ವಲಯದ ಅಂಚೆ ಕಚೇರಿಗಳು ಈಗ ಗೂಗಲ್ ಮ್ಯಾಪ್‌ಗೂ ಕಾಲಿಟ್ಟಿವೆ. ವಲಯದ ಅಧೀನದಲ್ಲಿರುವ ಎಲ್ಲ 153 ಅಂಚೆ ಕಚೇರಿಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಜಿಯೋ ಟ್ಯಾಗಿಂಗ್ ಮಾಡಲಾಗಿದೆ.
ಪ್ರಸ್ತುತ ಎಲ್ಲ ಊರಿನಲ್ಲಿರುವ ಅಂಚೆ ಕಚೇರಿಗಳ ಫೋನ್ ನಂಬರ್ ಮತ್ತು ಆಯಾ ಅಂಚೆ ಕಚೇರಿ ಕಾರ್ಯ ನಿರ್ವಹಿಸುವ ಸಮಯವನ್ನು ಗೂಗಲ್ ಮ್ಯಾಪ್‌ನಲ್ಲಿ ಅಪ್‌ಲೋಡ್ ಮಾಡಿದ್ದೇವೆ. ಇದರಿಂದ ಗ್ರಾಹಕರಿಗೆ ಉಪಯೋಗವಾಗಲಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
undefined
ಸೇವೆಗಳ ವಿವರ ಸಿಗಲಿದೆ:
ಈಗ ದೂರವಾಣಿ ಸಂಖ್ಯೆ ಮತ್ತು ಕಚೇರಿ ವೇಳೆಯನ್ನು ಮಾತ್ರ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಅಂಚೆ ಕಚೇರಿಯಿಂದ ಜನರಿಗೆ ಸಿಗುವ ಸೇವೆಗಳ ವಿವರಗಳನ್ನೂ ಅಪ್‌ಲೋಡ್ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
10 ಲಕ್ಷ ರು. ಸಂಗ್ರಹ:
ಮಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಮೇಳ ಯಶಸ್ವಿಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರೋತ್ಸಾಹ ಲಭಿಸಿದೆ. ಇದರಿಂದ ಇಲಾಖೆಗೆ 10 ಲಕ್ಷ ರು. ಆದಾಯ ಬಂದಿದೆ. ಇದರಲ್ಲಿ ಬಹುತೇಕ ಮೊತ್ತ ಬಂದದ್ದು ಅಂಚೆ ಚೀಟಿಗಳ ಮಾರಾಟದಿಂದಲೇ. ಉಳಿದಂತೆ ವಿಶೇಷ ಅಂಚೆ ಕವರ್‌ಗಳ ಮಾರಾಟವೂ ಉತ್ತಮ ರೀತಿಯಲ್ಲಿ ನಡೆದಿದೆ. ವಿಶೇಷವಾಗಿ 20 ಶಾಲೆಗಳಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಆಗಮಿಸಿದ್ದು, ಮಕ್ಕಳಲ್ಲಿ ಅಂಚೆ ಬಾಂಧವ್ಯ ವೃದ್ಧಿಗೆ ಕಾರಣವಾಗಿದೆ ಎಂದು ಶ್ರೀಹರ್ಷ ಹೇಳಿದ್ದಾರೆ.
ಭಾರಿ ಮಳೆ : ಕರಾವಳಿಯಲ್ಲಿ ರೆಡ್ ಅಲರ್ಟ್
ಕರ್ನಾಪೆಕ್ಸ್ ಮೇಳದಲ್ಲಿ ಒಟ್ಟು 10 ವಿಶೇಷ ಕವರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿಯೊಂದನ್ನೂ 2,000 ಪ್ರತಿಗಳಷ್ಟುಮುದ್ರಿಸಿದೆ. ಅದರಲ್ಲಿ 1,000 ಪ್ರತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು ಮತ್ತು ಅವುಗಳಲ್ಲಿ ಹೆಚ್ಚಿನವು ಸಂಪೂರ್ಣವಾಗಿ ಮಾರಾಟವಾಗಿವೆ.
ಅಲ್ಲದೆ, ಸ್ಟ್ಯಾಂಪ್‌ನಲ್ಲಿ ತಮ್ಮ ಝಾಯಾಚಿತ್ರ ಮುದ್ರಿಸುವ ‘ನನ್ನ ಅಂಚೆಚೀಟಿ’ಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನನ್ನ ಅಂಚೆ ಚೀಟಿಗಳನ್ನು ಪ್ರತಿದಿನವೂ ಮಂಗಳೂರಿನ ಮುಖ್ಯ ಅಂಚೆ ಕಚೇರಿಯಲ್ಲಿ ಸ್ಥಳದಲ್ಲೇ ಮುದ್ರಿಸಿ ನೀಡಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.
ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..
ಮದುವೆ, ವಾರ್ಷಿಕೋತ್ಸವ, ಹುಟ್ಟುಹಬ್ಬದ ಆಚರಣೆಗಳಿಗೆ ಜನರು ‘ನನ್ನ ಅಂಚೆಚೀಟಿ’ಗಳನ್ನು ಉಡುಗೊರೆಯಾಗಿ ನೀಡಬಹುದು. ಕೇವಲ 300 ರು. ಪಾವತಿಸುವ ಮೂಲಕ ಒಬ್ಬರು 12 ಅಂಚೆ ಚೀಟಿಗಳುಳ್ಳ ಹಾಳೆಯನ್ನು ಪಡೆಯಬಹುದು ಎಂದಿದ್ದಾರೆ.
ಶಾಲೆಗಳಲ್ಲಿ ಸ್ಟ್ಯಾಂಪ್ ಕ್ಲಬ್ ಸದಸ್ಯರಾಗುವ ಮೂಲಕ ವಿದ್ಯಾರ್ಥಿಗಳು ದೀನ್ ದಯಾಳ್ ಸ್ಪಶ್‌ರ್ (ಅಂಚೆ ಚೀಟಿಗಳಲ್ಲಿ ಯೋಗ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ವಿದ್ಯಾರ್ಥಿವೇತನ) ಸ್ಕಾಲರ್‌ಶಿಪ್ ಪಡೆಯಬಹುದು. ಕಳೆದ ವರ್ಷ ರಾಜ್ಯದಲ್ಲಿ 40 ಮಂದಿಗೆ ಈ ವಿದ್ಯಾರ್ಥಿ ವೇತನ ಲಭಿಸಿದ್ದು, ಅವರಲ್ಲಿ ಮಂಗಳೂರಿನ ಇಬ್ಬರು ಸೇರಿದ್ದಾರೆ ಎಂದು ಹೇಳಿದ್ದಾರೆ.