ಧರ್ಮಸ್ಥಳ ಬುರುಡೆ ಷಡ್ಯಂತ್ರದ ಸ್ಪೋಟಕ ಸಾಕ್ಷ್ಯ ಲಭ್ಯ, ಗ್ಯಾಂಗ್ ಸದಸ್ಯರಿಗೆ SIT ನೋಟಿಸ್ ಸಾಧ್ಯತೆ

Published : Aug 27, 2025, 08:33 AM ISTUpdated : Aug 27, 2025, 08:34 AM IST
Mahesh And Girish

ಸಾರಾಂಶ

ಧರ್ಮಸ್ಥಳ ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರದ ಕುರಿತು ಎಸ್ಐಟಿಗೆ ಸ್ಫೋಟಕ ಸಾಕ್ಷ್ಯಗಳು ಲಭ್ಯವಾಗಿದೆ. ತಿಮರೋಡಿಯ ಐದು ಮೊಬೈಲ್, ತಿಮರೋಡಿ ಬಂಟನ ಮೊಬೈಲ್ ಮಾಹಿತಿಯನ್ನು ಎಸ್ಐಟಿ ರಿಟ್ರೀವ್ ಮಾಡಲು ಮುಂದಾಗಿದೆ.

ಬೆಳ್ತಂಗಡಿ (ಆ.27) ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ಇದೀಗ ಸಂಕಷ್ಟ ಹೆಚ್ಚಾಗಿದೆ. ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್ ಬಂಧನ ಬಳಿಕ ಬುರುಡೆ ಗ್ಯಾಂಗ್ ಸದಸ್ಯರ ಒಬ್ಬೊಬ್ಬರಾಗಿ ನಮ್ಮದು ಸೌಜನ್ಯ ಹೋರಾಟ ಎಂದು ಬುರುಡೆ ಆರೋಪಗಳಿಂದ ದೂರ ಉಳಿಯಲು ಯತ್ನಿಸುತ್ತಿದ್ದಾರೆ.ಇದರ ಬೆನ್ನಲ್ಲೇ ಬಂಧಿತ ಚಿನ್ನಯ್ಯ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.ಈ ಮಾಹಿತಿಗಳ ಆಧಾರದಲ್ಲಿ ನಿನ್ನೆ ಎಸ್ಐಟಿ ತಂಡ ನೇರವಾಗಿ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ನಡೆಸಿತ್ತು. ಮನೆ ಪರಿಶೋಧನೆ ನಡೆಸಿದ ಎಸ್ಐಟಿ ತಂಡ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದೆ. ಇದೀಗ ಮಹೇಶ್ ಶೆಟ್ಟಿ ತಿಮರೋಡಿಯ ಐದು ಮೊಬೈಲ್ ಹಾಗೂ ತಿಮರೋಡಿ ಬಂಟ ಗಣೇಶ್ ಎಂಬಾತನ ಮೊಬೈಲ್‌ನಲ್ಲಿನ ಮಹತ್ವದ ಮಾಹಿತಿ ರಿಟ್ರೀವ್ ಮಾಡಲು ಎಸ್ಐಟಿ ಮುಂದಾಗಿದೆ.

ಬುರುಡೆ ಗ್ಯಾಂಗ್ ಗೆ ಎಸ್ಐಟಿ ನೊಟೀಸ್ ಫಿಕ್ಸ್

ಧರ್ಮಸ್ಥಳ ವಿರುದ್ಧ ಬುರುಡೆ ಪ್ರಕರಣ ಮಂದಿಟ್ಟು ಬೇಳೆ ಬೇಯಿಸಿಕೊಳ್ಳಲು ಮುುದಾಗಿದ್ದ ಗ್ಯಾಂಗ್ ಸದಸ್ಯರಿಗೆ ಎಸ್‌ಐಟಿ ವಿಚಾರಣೆ ನೋಟಿಸ್ ನೀಡುವ ಸಾಧ್ಯತೆ ಇದೆ. ಬುರುಡೆ ಷಡ್ಯಂತ್ರದ ಕುರಿತು ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ. ಕೆಲ ವಿಡಿಯೋ, ಆಡಿಯೋ ರೆಕಾರ್ಡ್ ಸಹಿತ ಹಲವು ದಾಖಲೆಗಳು ಲಭ್ಯವಾಗಿದೆ. ತಿಮರೋಡಿಗೆ ಸೇರಿದ ಐದು ಮೊಬೈಲ್ ಹಾಗೂ ತಿಮರೋಡಿ ಬಂಟ ಗಣೇಶ್ ಬಳಿಯಿರೋ ಮೊಬೈಲ್ ನಲ್ಲೇ ಸಿದ್ಧವಾಗಿತ್ತು ಬುರುಡೆ ಪ್ಲಾನ್ ಅನ್ನೋ ಮಾಹಿತಿ ಲಭ್ಯವಾಗಿದೆ. ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಬುರುಡೆ ಗ್ಯಾಂಗ್ ಸದಸ್ಯರಿಗೆ ಖೆಡ್ಡಾ ತೋಡಿದ್ದಾರೆ.

ಗಣೇಶ್ ಮೊಬೈಲ್ ಮೂಲಕ ಬುರುಡೆ ತಂಡದ ಜೊತೆ ಸಂಪರ್ಕ

ತಿಮರೋಡಿಯ ಆಪ್ತನಾಗಿರುವ ಗಣೇಶ್ ಮೊಬೈಲ್ ಮೂಲಕ ತಿಮರೋಡಿ ಹಾಗೂ ಸದಸ್ಯರು ಬುರೆಡೆ ತಂಡವನ್ನು ಸಂಪರ್ಕ ಮಾಡಿ ಮಾಹಿತಿ ನೀಡುತ್ತಿತ್ತು. ಚಿನ್ನಯ್ಯ ಸೇರಿ ಇಡೀ ಬುರುಡೆ ಟೀಂ ಜೊತೆ ಗಣೇಶ್ ಮೊಬೈಲ್ ನಲ್ಲೇ ಮೀಟಿಂಗ್ ಮಾಡಲಾಗಿತ್ತು. ಬುರುಡೆ ಷಡ್ಯಂತ್ರಗಳ ಕುರಿತ ಪ್ಲಾನ್ ರೂಪಿಸಲು, ಈ ಪ್ಲಾನ್ ಬುರುಡೆ ತಂಡ ಸೇರಿದಂತೆ ಇತರರ ಜೊತೆ ಹಂಚಿಕೊಳ್ಳಲು ಗಣೇಶ್ ಮೊಬೈಲ್ ಬಳಕೆ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಸದ್ಯ ಕೆಲವು ನಂಬರ್ ಟ್ರೇಸ್ ಮಾಡಿ ಮೊಬೈಲ್ ವಶಕ್ಕೆ ಪಡೆಯಲು ಎಸ್ಐಟಿ ಪ್ಲಾನ್ ಮಾಡಿದೆ.

ಚಿನ್ನಯ್ಯನ ವಿಡಿಯೋ ರೆಕಾರ್ಡ್ ಮಾಡಿದ್ದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ

ದೂರುದಾರನಾಗಿ ಬಂದ ಚಿನ್ನಯ್ಯನ ಎಸ್ಐ‌ಟಿಯಿಂದ ಅರೆಸ್ಟ್ ಆಗಿದ್ದಾರೆ. ಈತನನ್ನು ಬಳಸಿಕೊಂಡು ಬುರುಡೆ ಗ್ಯಾಂಗ್ ಬಹುದೊಡ್ಡ ಷಡ್ಯಂತ್ರ ನಡೆಸಿತ್ತು. ದೂರು ನೀಡುವ ಮೊದಲೇ ಚಿನ್ನಯ್ಯನನ್ನು ಬುರುಡೆ ಗ್ಯಾಂಗ್‌ನಲ್ಲಿರುವ ಕೆಲ ಯೂಟ್ಯೂಬರ್ಸ್ 25 ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿದ್ದ ಸ್ಥಳದಿಂದಲೂ ಎಸ್ಐಟಿ ಕೆಲ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದೆ. 25 ವಿಡಿಯೋಗಳ ಪೈಕಿ ಬುರುಡೆ ಗ್ಯಾಂಗ್‌ನ ಯೂಟ್ಯೂಬ್ ಚಾನೆಲ್ ಮೂಲಕ ಮೂರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಇನ್ನುಳಿದ ವಿಡಿಯೋ ಪೋಸ್ಟ್ ಮಾಡುವ ಮುನ್ನವೇ ಕೇಸ್ ಉಲ್ಟಾ ಹೊಡೆದಿತ್ತು. ಇಷ್ಟೇ ಅಲ್ಲ 23 ವಿಡಿಯೋ ಇನ್ನೂ ಪೋಸ್ಟ್ ಮಾಡಿಲ್ಲ.

ತಿಮರೋಡಿ ಮನೆ, ತೋಟದಿಂದ ಸಾಕ್ಷ್ಯ ಸಂಗ್ರಹ

ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿ ಕೆಲ ಸಾಕ್ಷ್ಯ ಸಂಗ್ರಹಿಸಿದೆ. ತಿಮರೋಡಿ ಮನೆ, ತೋಟ, ತಿಮರೋಡಿ ಸಹೋದರ ಮೋಹನ್ ಶೆಟ್ಟಿ ಮನೆ ತೋಟಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ರಹಸ್ಯ ಕೊಠಡಿಗಳು ಸೇರಿ ಮನೆಯ ಕೆಲವು ಜಾಗಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಸದ್ಯ ಸಿಕ್ಕ ಸಾಕ್ಷ್ಯ ಬಳಸಿ ಬುರುಡೆ ಟೀಂಗೆ ನೊಟೀಸ್ ನೀಡಲು ಎಸ್ಐಟಿ ಸಜ್ಜಾಗಿದೆ.

 

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಕರಾವಳಿಯಲ್ಲಿ ಶಿವಗಿರಿ ಮಠ ಶಾಖೆಗೆ 5 ಎಕರೆ: ಸಿಎಂ ಸಿದ್ದರಾಮಯ್ಯ ಭರವಸೆ