ಶಿವಕುಮಾರ್ ಅವರಿಗೆ ಜೈಲಿನ ಕನವರಿಕೆ ಆರಂಭಗೊಂಡಿದೆ ಎಂದು ಡಿ.ಕೆ.ಶಿವಕುಮಾರ್ ಅವರ ಎದುರಾಳಿ ಎಂದೇ ಕರೆಸಿಕೊಳ್ಳುವ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣ [ಆ.30]: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಜೈಲಿನ ಕನವರಿಕೆ ಆರಂಭಗೊಂಡಿದೆ. ಮುಂದೆ ಏನಾಗುತ್ತದೆ ಎಂದು ನೀವೇ ಕಾಯ್ದು ನೋಡಿ.., ಇದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಮ್ಮ ರಾಜಕೀಯ ಎದುರಾಳಿ ಡಿಕೆಶಿ ಕುರಿತ ಮಾತು.
ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಗರದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ಬಂಧನದ ಭಯ ಎದುರಾಗಿದೆ. ಇದರಿಂದಾಗಿ ಜೈಲು, ಸಿಬಿಐ ಎಂದು ಕನವರಿಸುತ್ತಿದ್ದಾರೆ, ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಕೆಶಿ ತಮ್ಮ ಮನೆಯಲ್ಲಿ ಫೋನ್‌ಟ್ಯಾಪಿಂಗ್ ಯಂತ್ರ ಇರಿಸಿಕೊಂಡಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್ ಮಿಷನ್ ಇದ್ದರೆ ಸಿಬಿಐನಿಂದ ನನ್ನದು ಅವರದ್ದು ಎಲ್ಲವನ್ನೂ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದನ್ನು ಸ್ಮರಿಸಬಹುದು.
ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರು:
ಸಿದ್ದರಾಮಯ್ಯ ಅವರು ಯಾವಾಗ ಜೋತಿಷ್ಯ ಹೇಳಲು ಆರಂಭಿಸಿದ್ದಾರೋ ಗೊತ್ತಿಲ್ಲ, ಮಧ್ಯಂತರ ಚುನಾವಣೆ ಬರುತ್ತೆ ಎಂದು ಕನವರಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ನಮ್ಮ ಪಕ್ಷ ಮತ್ತು ಸರ್ಕಾರ ಸುಭದ್ರವಾಗಿದ್ದು, ಮಧ್ಯಂತರ ಚುನಾವಣೆ ಯಾವುದೇ ಕಾರಣಕ್ಕೂ ಎದುರಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧ ಪಕ್ಷದವರು ಸರ್ಕಾರ ಬೀಳುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಇದು ನನಸಾಗುವುದಿಲ್ಲ, ರಾಜ್ಯದ ಜನತೆಯ ಆಶೋತ್ತರಗಳಿಗೆ ತಕ್ಕಂತೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಅಭಿವೃದ್ಧಿಗೆ ನಮ್ಮ ಪಕ್ಷದ ನೇತೃತ್ವದ ಸರ್ಕಾರ ಆದ್ಯತೆ ನೀಡಲಿದೆ ಎಂದರು.