ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅನ್ ವಾಂಟೆಡ್ ಚೈಲ್ಡ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಏನೇನು ಹೇಳಿದ್ರು ಎಂದು ತಿಳಿಯೋಕೆ ಈ ಸುದ್ದಿ ಓದಿ.
ಮಂಗಳೂರು(ಅ.18): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅನ್ ವಾಂಟೆಡ್ ಚೈಲ್ಡ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಮೋದಿ, ಶಾ ಅವರ ಅನ್ ವಾಂಟೆಡ್ ಚೈಲ್ಡ್. ಬಿಜೆಪಿ ಸರ್ಕಾರ ಟ್ರಾನ್ಸ್‌ಫರ್ ದಂಧೆ ಬಿಟ್ಟರೆ ಒಂದೇ ಒಂದು ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ನಳಿನ್ ರಿಮೋಟ್ ಸಂತೋಷ್ ಕೈಯಲ್ಲಿ
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ರಿಮೋಟ್ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಬಳಿ ಇದೆ. ಅವರು ಸ್ವಿಚ್ ಅದುಮಿದ್ರೆ ನಳಿನ್ ಕುಮಾರ್ ಡ್ಯಾನ್ಸ್ ಮಾಡ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ನಳಿನ್ ಕುಮಾರ್‌ಗೆ ಎಷ್ಟು ಜಿಲ್ಲೆಅಂತಾನೆ ಗೊತ್ತಿಲ್ಲ. ಇವರೂ ಒಬ್ಬ ರಾಜ್ಯಾಧ್ಯಕ್ಷರಾ..? ಎಂದು ಪ್ರಶ್ನಿಸಿದ್ದಾರೆ.
ವಿಕಾಸ್ ಅಲ್ಲ ಸಬ್ ಕಾ ವಿನಾಶ್ ಆಗಿದೆ:
ಜನವರಿ ಫೆಬ್ರವರಿ ಒಳಗೆ ಎಲೆಕ್ಷನ್ ಬರಲಿದೆ. ಹಸಿವಿನ ರೇಟಿಂಗಲ್ಲಿ 118 ರಲ್ಲಿ ದೇಶ 102ಕ್ಕೆ ಕುಸಿದಿದೆ. ಸಬ್ ಕಾ ಸಾಥ್ ವಿಕಾಸ್ ಎಂದರು. ಈಗ ಸಬ್ ಕಾ ವಿನಾಶ್ ಆಗಿದೆ ಎಂದಿದ್ದಾರೆ. ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ ವೀರ್ ಸಾವರ್ಕರ್‌ಗೆ ಭಾರತರತ್ನ ನೀಡ್ತಾರೆ. ಇಂಥವರು ಅಧಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದ್ದಾರೆ.
ಮದುವೆಗೂ ಮುಂಚೆ ಗರ್ಭಿಣಿ, ನವ ವಿವಾಹಿತೆ ಪತ್ನಿಯನ್ನೇ ಬರ್ಬರವಾಗಿ ಕೊಂದ ಪತಿ