ಯಡಿಯೂರಪ್ಪ ಇಳಿಸಲು ಬಿಜೆಪಿಯಿಂದಲೇ ಕುತಂತ್ರ: ಸಿದ್ದು

Published : Nov 07, 2019, 12:06 PM IST
ಯಡಿಯೂರಪ್ಪ ಇಳಿಸಲು ಬಿಜೆಪಿಯಿಂದಲೇ ಕುತಂತ್ರ: ಸಿದ್ದು

ಸಾರಾಂಶ

ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬೇರೆ ಯಾರೂ ಅಲ್ಲ, ಬಿಜೆಪಿಯವರೇ ಕುತಂತ್ರ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಕೋರ್‌ ಕಮಿಟಿಯಲ್ಲಿ ಇದ್ದವರೇ ಯಡಿಯೂರಪ್ಪ ಅವರ ಆಡಿಯೊ ಮಾಡಿ ಲೀಕ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.  

ಮಂಗಳೂರು(ನ.07): ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಬಿಜೆಪಿಯವರಿಂದಲೇ ಕುತಂತ್ರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಬಿಜೆಪಿ ಕೋರ್‌ ಕಮಿಟಿಯಲ್ಲಿ ಇದ್ದವರೇ ಯಡಿಯೂರಪ್ಪ ಅವರ ಆಡಿಯೊ ಮಾಡಿ ಲೀಕ್‌ ಮಾಡಿದ್ದಾರೆ. ಯಡಿಯೂರಪ್ಪ ಮೇಲೆ ಗೂಬೆ ಕೂರಿಸಬೇಕು ಮತ್ತು ಅಮಿತ್‌ ಶಾ ಅವರಿಗೆ ಮುಜುಗರ ಆಗಬೇಕು ಎನ್ನುವುದೇ ಅವರ ಉದ್ದೇಶ. ಅದರಲ್ಲಿ ಅವರು ಸಫಲರಾಗ್ತಾರೋ, ಬಿಡ್ತಾರೋ ಗೊತ್ತಿಲ್ಲ. ಆದರೆ ಕುತಂತ್ರ ನಡೆಯುತ್ತಿರುವುದಂತೂ ಸತ್ಯ ಎಂದು ಹೇಳಿದ್ದಾರೆ.

BJP ಅನ್ವರ್ಥನಾಮವೇ ಸುಳ್ಳು: ಸಿದ್ದು ವ್ಯಂಗ್ಯ

ಯಡಿಯೂರಪ್ಪ ಮತ್ತು ದೇವೇಗೌಡ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಮಾತನಾಡಲಿ. ಅದಕ್ಕೆ ನಮ್ಮ ಯಾವ ಆಕ್ಷೇಪವೂ ಇಲ್ಲ. ಮುಂಬರುವ ಉಪಚುನಾವಣೆಯಲ್ಲಿ 8 ಕ್ಷೇತ್ರ ಗೆಲ್ಲದಿದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಬೇಕಾಗಬಹುದು. ಆದರೆ ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ ಎನ್ನತೊಡಗಿದ್ದಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ.

ಕಾಂಗ್ರೆಸ್‌ ಮುಗಿಸೋದು ಭ್ರಮೆ: ಜಾರಿ ನಿರ್ದೇಶನಾಲಯ, ಐಟಿಯನ್ನು ಬಳಸಿ ದೇಶಾದ್ಯಂತ ಕಾಂಗ್ರೆಸ್‌ ನಾಯಕರನ್ನು ಕೇಂದ್ರ ಸರ್ಕಾರ ಟಾರ್ಗೆಟ್‌ ಮಾಡುತ್ತಿದೆ. ಹೀಗೆ ಮಾಡಿ ಕಾಂಗ್ರೆಸ್‌ನ್ನು ಮುಗಿಸ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೆ ‘ನೋ ಕಾಮೆಂಟ್‌’:

ತಮ್ಮ ವಿರುದ್ಧ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ಮತ್ತೆ ನಿರಾಕರಿಸಿದರು. ಅದರ ಬಗ್ಗೆ ನೋ ರಿಯಾಕ್ಷನ್‌. ಪಾಲಿಕೆ ಚುನಾವಣಾ ಪ್ರಣಾಳಿಕೆ ಬಗ್ಗೆ ಬೇಕಾದರೆ ಕೇಳಿ ಎಂದಿದ್ದಾರೆ.

3 ತಿಂಗಳ ಹಸುಗೂಸನ್ನೇ ಭದ್ರಾ ನಾಲೆಗೆ ಎಸೆದ ತಾಯಿ

PREV
click me!

Recommended Stories

ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ
ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ