ಮಂಗಳೂರು: ಎರಡು ಬೋಟ್‌ಗಳ 18 ಮಂದಿ ರಕ್ಷಣೆ

By Kannadaprabha NewsFirst Published Oct 27, 2019, 10:32 AM IST
Highlights

ಕಾರವಾರ ಮತ್ತು ಗೋವಾದ ಗಡಿಯಲ್ಲಿ ತೂಫಾನಿಗೆ ಸಿಲುಕಿ ಒಳಬರಲು ಶ್ರಮಿಸುತ್ತಿದ್ದ ಮಲ್ಪೆಯ ರಾಜ್‌ಕಿರಣ್‌ ಮತ್ತು ಮಂಗಳೂರಿನ ಮಹೇಲಿ ಬೋಟ್‌ನಲ್ಲಿ ಇದ್ದ 18 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರು(ಅ.27): ಕಾರವಾರ ಮತ್ತು ಗೋವಾದ ಗಡಿಯಲ್ಲಿ ತೂಫಾನಿಗೆ ಸಿಲುಕಿ ಒಳಬರಲು ಶ್ರಮಿಸುತ್ತಿದ್ದ ಮಲ್ಪೆಯ ರಾಜ್‌ಕಿರಣ್‌ ಮತ್ತು ಮಂಗಳೂರಿನ ಮಹೇಲಿ ಬೋಟ್‌ನಲ್ಲಿ ಇದ್ದ 18 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರವಾರ ಜಿಲ್ಲಾಧಿಕಾರಿಗೆ ತುರ್ತು ಸೂಚನೆ ನೀಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರ ಮೂಲಕ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ, ಕರ್ನಾಟಕದ ಮೀನುಗಾರರಿಗೆ ನಿಯಮದ ಹೆಸರಿನಲ್ಲಿ ಕಿರುಕುಳವಾಗದಂತೆ ಮತ್ತು ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಗತ್ಯ ಬಿದ್ದರೆ ಹೆಲಿಕಾಪ್ಟರ್‌ ಸೇವೆ ಬಳಸಿಕೊಳ್ಳುವಂತೆಯೂ ಸಚಿವರು ಸೂಚಿಸಿದ್ದರು.

ಕ್ಯಾರ್‌ ಚಂಡಮಾರುತಕ್ಕೆ ಕರಾವಳಿ ತತ್ತರ : ಬಿರುಗಾಳಿ ಸಹಿತ ಭಾರಿ ಮಳೆ

ಇದೀಗ ಎರಡು ಬೋಟ್‌ನಲ್ಲಿ ಇದ್ದ ಎಲ್ಲ 18 ಮೀನುಗಾರರನ್ನು ರಕ್ಷಿಸಿ ಮಂಗಳೂರು ಮತ್ತು ಮಲ್ಪೆಗೆ ಕರೆತರಲಾಗುತ್ತಿದೆ. ಶುಕ್ರವಾರದಿಂದ ನಿರಂತರವಾಗಿ ಕಾರವಾರ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸಂಪರ್ಕದಲ್ಲಿದ್ದು, ಮೀನುಗಾರರ ರಕ್ಷಣೆಗೆ ತಕ್ಷಣ ಸ್ಪಂದಿಸಿದ ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸೈಕ್ಲೋನ್ ಎಫೆಕ್ಟ್: ಕೊಡಗಿನ ಮಳೆಗೆ ಕಂಗಾಲಾದ ಕಾಫಿ ಬೆಳೆಗಾರರು

click me!