ಸೈಕ್ಲೋನ್ ಎಫೆಕ್ಟ್: ಕೊಡಗಿನ ಮಳೆಗೆ ಕಂಗಾಲಾದ ಕಾಫಿ ಬೆಳೆಗಾರರು

Published : Oct 26, 2019, 01:16 PM IST
ಸೈಕ್ಲೋನ್ ಎಫೆಕ್ಟ್: ಕೊಡಗಿನ ಮಳೆಗೆ ಕಂಗಾಲಾದ ಕಾಫಿ ಬೆಳೆಗಾರರು

ಸಾರಾಂಶ

ಕೊಡಗಿನಲ್ಲಿ ಸೈಕ್ಲೋನ್ ಕ್ಯಾರ್ ಪ್ರಭಾವ ಮುಂದುವರಿದಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದೆ. ಕೊಡಗಿನಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ

ಕೊಡಗು(ಅ.26): ಕೊಡಗಿನಲ್ಲಿ ಸೈಕ್ಲೋನ್ ಕ್ಯಾರ್ ಪ್ರಭಾವ ಮುಂದುವರಿದಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದೆ. ಕೊಡಗಿನಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಸೈಕ್ಲೋನ್ ಕ್ಯಾರ್ ಪ್ರಭಾವ ಕೊಡಗಿನಲ್ಲಿ ಮುಂದುವರಿದಿದೆ. ಮಡಿಕೇರಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನಬ ಮಳೆಯಾಗುತ್ತಿದ್ದು ಕಾಫಿ ಬೆಲೆಗಾರರು ಕಂಗಾಲಾಗಿದ್ದಾರೆ. ಕಾಫಿ ಹಣ್ಣಾಗುವ ಸಮಯವಾಗಿದ್ದು, ಹಣ್ಣಾದ ಬೀಜಗಳು ಉದುರಿ ಹೋಗುವ ಸಾಧ್ಯತೆ ಇದ್ದು ರೈತರು ಆತಂಕಕ್ಕೊಳಗಾಗಿದ್ದಾರೆ.

ಕೆರಳಿದ ಕ್ಯಾರ್: ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಇನ್ನೂ ಕೆಲವೆಡೆ ಎಡೆಬಿಡದೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ತುಂತುರು ಮಳೆ, ಚಳಿ ಗಾಳಿಗೆ ಜನತೆ ತತ್ತರಿಸಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹೆಚ್ಚಿನ ಅವಾಂತರಗಳಾಗುತ್ತಿದ್ದು, ಮಳೆ ಮುಂದುವರಿದಲ್ಲಿ ಕಾಫಿ, ಕಾಳುಮೆಣಸು ನಷ್ಟವಾಗಲಿದೆ. ಬಿರುಸಿನ ಮಳೆಗೆ ಕಾಫಿ ಬೀಜ, ಕರಿಮೆಣಸು ಉದುರಿ ಬೀಳುವ ಸಾಧ್ಯತೆ ಇದ್ದು, ಇದು ರೈತರನ್ನು ಆತಂಕಕ್ಕೆ ದೂಡಿದೆ.

ಅರಬ್ಬೀ ಸಮುದ್ರದಲ್ಲಿ ಕ್ಯಾರ್ ಹಾವಳಿ; ಅಬ್ಬರಕ್ಕೆ ಬೆಚ್ಚಿಬಿತ್ತು ಕರಾವಳಿ

PREV
click me!

Recommended Stories

ಬನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ!
ಮುಗಿದ ವಿದ್ಯುದೀಕರಣ ಪ್ರಕ್ರಿಯೆ, ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಸಿಕ್ತು ಗ್ರೀನ್‌ಸಿಗ್ನಲ್‌!