
ಮೇಷ(Aries): ಬಹು ದಿನಗಳ ನಿಮ್ಮ ಬಯಕೆ ಕಾರ್ಯರೂಪಕ್ಕೆ ಇಳಿಯಲಿದ್ದು, ಅಭಿವೃದ್ಧಿ ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ, ಗೃಹ ನಿರ್ಮಾಣ ಯೋಗ ಕೂಡಿ ಬರಲಿದೆ. ಅವಿವಾಹಿತರಿಗೆ ವಿವಾಹ ಯೋಗವೂ ಇದೆ. ನೀವು ಹಾಕಿದ ಬಂಡವಾಳ ವಾಪಾಸ್ ಬರುತ್ತದೆ. ಮಹಾಲಕ್ಷ್ಮೀ ಆರಾಧನೆ ಮಾಡಿ.
ವೃಷಭ(Taurus): ಕೆಲಸ ಕಾರ್ಯಕ್ಕೆ ಅಡ್ಡಿ ಆತಂಕ ಎದುರಾಗುವುದು. ಉದಾಸೀನತೆ ಸಲ್ಲದು. ಋಣಾತ್ಮಕ ಚಿಂತನೆಗಳು ಸಲ್ಲವು. ಆರೋಗ್ಯ ಸಮಸ್ಯೆಗಳು ಕಂಡು ಬರುವುವು. ಕೌಟುಂಬಿಕವಾಗಿ ಸಂತೃಪ್ತಿ ಇರುತ್ತದೆ. ನಿಮ್ಮ ಮನಸ್ಸಿನ ಕ್ಲೇಶಗಳನ್ನು ಕುಟುಂಬದವರೊಡನೆ ಹಂಚಿಕೊಳ್ಳಿ. ಲಲಿತಾ ಸಹಸ್ರನಾಮ ಪಠಿಸಿ.
ಮಿಥುನ(Gemini): ಹಣದ ಮುಗ್ಗಟ್ಟು, ದುಪ್ಪಟ್ಟು ಖರ್ಚುವೆಚ್ಚಗಳು ಕಂಡು ಬಂದರೂ ಸಧ್ಯದಲ್ಲೇ ಹಂತ ಹಂತದ ಅಭಿವೃದ್ಧಿ ಇರಲಿದೆ. ಪಾಲುದಾರಿಕೆ ವ್ಯವಹಾರಗಳು ಉತ್ತಮ ಫಲ ಕೊಡಲು ಆರಂಭಿಸಲಿವೆ. ನಿಮ್ಮ ವಾಕ್ಚಾತುರ್ಯವನ್ನು ಎಲ್ಲರೂ ಮೆಚ್ಚುವರು. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ.
ಕಟಕ(Cancer): ವಾಹನ ಸಂಚಾರ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯ ಅಗತ್ಯ. ಏನೇ ಕಾರ್ಯವಿದ್ದರೂ ಪ್ರಯತ್ನ ಬಲದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಕಾರ್ಯ ವಿಳಂಬದಿಂದ ಮಾನಸಿಕ ಅಶಾಂತಿ ಕಾಣುತ್ತದೆ. ತಾಯಿ ಶಾರದಾಂಬೆಯ ಸ್ಮರಣೆ ಮಾಡಿ.
ಸಿಂಹ(Leo): ಖರ್ಚು ವೆಚ್ಚಗಳ ಹಿಡಿತ ತಪ್ಪಿ ಆರ್ಥಿಕ ವಿಚಾರದಲ್ಲಿ ಗೊಂದಲ ತೋರಿಬಂದೀತು. ಕಾರ್ಯಕ್ಷೇತ್ರದಲ್ಲಿ ವ್ಯಾವಹಾರಿಕವಾಗಿ ಉತ್ತಮ ಪ್ರಗತಿ ಕಂಡು ಬರಲಿದೆ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಿ.
ಕನ್ಯಾ(Virgo): ಸಮಸ್ಯೆಗಳು ಹೆಚ್ಚಿದಂತೆನಿಸಬಹುದು. ಬಂದದ್ದೆಲ್ಲ ಬರಲಿ, ಆ ಭಗವಂತನ ದಯೆಯೊಂದಿರಲಿ ಎಂಬ ಸಂಯಮದಿಂದ ಅವನ್ನು ಎದುರಿಸಿ. ವ್ಯಾವಹಾರಿಕವಾಗಿ ಕಿರಿಕಿರಿ ಹೆಚ್ಚಲಿವೆ. ಜಡ ಕಾಡಲಿದೆ. ವಾಹನಗಳು, ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ರಿಪೇರಿಗೆ ಬರಲಿವೆ. ಮಹಾಲಕ್ಷ್ಮೀ ಪೂಜೆ ಮಾಡಿ.
ತುಲಾ(Libra): ಹೊಸ ವ್ಯವಹಾರ, ವ್ಯಾಪಾರಗಳಿಗೆ ಸಕಾಲ. ಧೀರ್ಘಯೋಜನೆಯ ಕಾರ್ಯಗಳಿಗೆ ಪೂರಕ ಆರ್ಥಿಕ ಲಾಭಗಳಿವೆ. ದೂರ ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಅವಿವಾಹಿತರಿಗೆ ಅನಿರೀಕ್ಷಿತ ಕಂಕಣಬಲ ಒದಗಿ ಬರುವುದು. ನಿಮ್ಮ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ.
ವೃಶ್ಚಿಕ(Scorpio): ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರೇಮ ವ್ಯವಹಾರಗಳಿಗೆ ಜಯ ಸಿಗಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
ಧನುಸ್ಸು(Sagittarius): ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಿ ಪರಿಶ್ರಮ ಹಾಕಿದರೆ ದಿನಾಂತ್ಯಕ್ಕೆ ನಷ್ಟ ತುಂಬಿಕೊಳ್ಳಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ಸಾಹ, ಗೌರವ, ಮನ್ನಣೆ. ಪ್ರಯಾಣ ಯೋಗವಿದೆ. ಸಹೋದರರ ಸಹಕಾರ ಸಿಗಲಿದೆ. ದುರ್ಗಾ ಅಷ್ಟೋತ್ತರ ಪಠಿಸಿ.
ಮಕರ(Capricorn): ಹಿರಿಯರೊಡನೆ ಯಾವುದೇ ವಿಷಯ ವಾದಿಸಲು ಹೋಗದಿರಿ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರಗಳು ಮನಸ್ಸಿನ ನೆಮ್ಮದಿ ಕೆಡಿಸಲಿವೆ. ತಾಳ್ಮೆ- ಸಂಯಮದಿಂದ ಮುಂದುವರಿಯಿರಿ. ಸ್ನೇಹಿತರ ಸಹಕಾರ ಸಿಗಲಿದೆ. ಲಲಿತಾ ಸಹಸ್ರನಾಮ ಪಠಿಸಿ.
ಕುಂಭ(Aquarius): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವ ಮೂಲಕ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯೆನಿಸುವುದು. ಹೊಸ ಹೊಸ ವಸ್ತುಗಳನ್ನು ಕೊಳ್ಳಲಿರುವಿರಿ. ನಿಮ್ಮ ಹಾಗೂ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವಿರಿ. ಮುತ್ತೈದೆಗೆ ಬಾಗೀನ ನೀಡಿ.
ಮೀನ(Pisces): ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ ಇರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸಿ. ಆರ್ಥಿಕವಾಗಿ ಭಾಗ್ಯೋದಯದ ಕಾಲ. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಬೆಳವಣಿಗೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.