Numerology Today: ಈ ಸಂಖ್ಯೆ ಇದ್ದವರು ಬೇರೆಯವರ ಸ್ವಾರ್ಥಕ್ಕೆ ಬಲಿ ಆಗಲಿದ್ದಾರೆ..!

By Chirag Daruwalla  |  First Published Jul 18, 2023, 8:57 AM IST

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು. 


ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)

ಇಂದು ನೀವು ವಿಶೇಷವಾದದ್ದನ್ನು ಸಾಧಿಸಲು ಶ್ರಮಿಸುತ್ತೀರಿ, ಅದು ಕೂಡ ಸಾಧ್ಯ ಆಗಲಿದೆ. ಕಷ್ಟದಲ್ಲಿರುವ ಪ್ರೀತಿಪಾತ್ರರಿಗೆ ಸಹಾಯ ಮಾಡುವುದರಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಇದ್ದಕ್ಕಿದ್ದಂತೆ ಕೆಲವು ಖರ್ಚುಗಳು ಉಂಟಾಗಬಹುದು. 

Tap to resize

Latest Videos

undefined

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)

ಇಂದು ನೀವು ತೆಗೆದುಕೊಳ್ಳುವ ಯಾವುದೇ ಪ್ರಮುಖ ನಿರ್ಧಾರವು ಒಳ್ಳೆಯದು. ಕುಟುಂಬದ ಸದಸ್ಯರ ಸಹಕಾರ ಸಿಗಲಿದೆ. ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಹೂಡಿಕೆಗೆ ಸಮಯ ಅನುಕೂಲಕರವಾಗಿಲ್ಲ..

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)

ಆತುರಪಡುವ ಬದಲು ನಿಮ್ಮ ಕೆಲಸವನ್ನು ಶಾಂತವಾಗಿ ಮುಗಿಸಲು ಪ್ರಯತ್ನಿಸಿ. ಅಹಂಕಾರದಿಂದ ವರ್ತಿಸುವುದು ಸರಿಯಲ್ಲ. ಮಾರ್ಕೆಟಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಉತ್ತಮ ಸಮಯ.

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)

ನಿಮ್ಮ ಮನಸ್ಸಿಗೆ ಅನುಗುಣವಾಗಿ ಚಟುವಟಿಕೆಗಳಲ್ಲಿ ಉತ್ತಮ ಸಮಯವನ್ನು ಕಳೆಯುವುದು ನಿಮಗೆ ಶಾಂತಿಯನ್ನು ನೀಡುತ್ತದೆ. ನೌಕರರು ಮತ್ತು ಉದ್ಯೋಗಿಗಳು ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವರು. ಕೌಟುಂಬಿಕ ವಾತಾವರಣ ಶಾಂತವಾಗಿರುತ್ತದೆ.

ರಾಹು-ಕೇತು ಸಂಕ್ರಮಣ; ಈ ಮೂರು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ..!

 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)

ಇಂದು ಮಹಿಳೆಯರಿಗೆ ವಿಶೇಷವಾಗಿ ವಿಶ್ರಾಂತಿಯ ದಿನವಾಗಿದೆ. ಅತಿಯಾದ ಕೆಲಸವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲಸದ ಹೊರೆ ಹೆಚ್ಚಾಗಲಿದೆ, ಆದರೆ ಕುಟುಂಬದೊಂದಿಗೆ ಸಮಯ ಕಳೆಯಿರಿ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)

ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಿರಿ. ಇಂದು ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ. ವ್ಯಾಪಾರ ಚಟುವಟಿಕೆಗಳು ಸುಧಾರಿಸಬಹುದು.
ದಾಂಪತ್ಯದಲ್ಲಿ ಸಂಬಂಧಗಳು ಮಧುರವಾಗಿರಬಹುದು.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)

ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ನಿರ್ಧಾರವು ಪ್ರಮುಖವಾಗಿರುತ್ತದೆ. ಯಾವುದೇ ರೀತಿಯ ಕಲಹಕ್ಕೆ ಅವಕಾಶ ನೀಡಬೇಡಿ. ಅತಿಯಾದ ದೈಹಿಕ ಚಟುವಟಿಕೆಯು ಹಾನಿಕಾರಕವಾಗಿದೆ. 
ಹೊರಗಿನವರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಕೆಲವು ಜನರು ನಿಮ್ಮನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು.

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)

ಕೆಲವು ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಬೇರೆಯವರನ್ನು ನಂಬುವುದು ನಿಮಗೆ ನೋವುಂಟು ಮಾಡಬಹುದು. ತೀವ್ರ ಮಾನಸಿಕ ಮತ್ತು ದೈಹಿಕ ಆಯಾಸ ಇರಬಹುದು.

Guru Vakri: ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!

 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)

ಇಂದು ಯೋಚಿಸುವ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ವರ್ಗಾವಣೆಯ ಯಾವುದೇ ಯೋಜನೆ ಇದ್ದರೆ ಸಮಯ ಸರಿಯಾಗಿದೆ. ಆತ್ಮೀಯ ಗೆಳೆಯನೊಂದಿಗೆ ಪ್ರವಾಸವಿರುತ್ತದೆ. ಇಂದು ವ್ಯವಹಾರದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು.


ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!