Numerology Today: ಈ ನಂಬರ್ ಇದ್ದವರು ಆಸ್ತಿ ಖರೀದಿಸುವಲ್ಲಿ ಎಚ್ಚರದಿಂದ ಇರಿ..!

By Chirag DaruwallaFirst Published Jul 17, 2023, 9:04 AM IST
Highlights

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು. 

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದವರು)

ನೀವು ಕಾರು ಅಥವಾ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಂದೇ ಅದರ ಬಗ್ಗೆ ಗಂಭೀರವಾಗಿ ಯೋಚಿಸಿ. ಗ್ರಹಗಳ ಸ್ಥಿತಿಯು ತುಂಬಾ ಅನುಕೂಲಕರವಾಗಿದೆ. ಅನುಭವಿ ವ್ಯಕ್ತಿಯ ಸಲಹೆ ಕೂಡ ಇರುತ್ತದೆ‌. ಕೋಪವು ನಿಮ್ಮನ್ನೂ ಹಾಳುಮಾಡುತ್ತದೆ, ಎಚ್ಚರ ವಹಿಸಬೇಕು. ಖರ್ಚು ಮಾಡುವಾಗ ನಿಮ್ಮ ಬಜೆಟ್ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ.

Latest Videos

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದವರು)

ನೀವು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಸಭೆ ಮತ್ತು ಪರಸ್ಪರ ಸಂವಹನವು ಅನೇಕ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಬಹುದು. ಹಣಕಾಸಿನ ಸ್ಥಿತಿ ಉತ್ತಮ ಇರಬಹುದು. ಹೂಡಿಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು, ಯಾಕೆಂದರೆ  ಕೆಲವು ರೀತಿಯ ವಂಚನೆ ಆಗಲಿದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆಯೂ ಚಿಂತೆ ಮಾಡುವಿರಿ.
ಇಂದು ಷೇರು ಮಾರ್ಕೆಟ್'ನಲ್ಲಿ ಹಿನ್ನಡೆ ಆಗಲಿದೆ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದವರು)

ಇಂದು ಕೆಲವು ಬಾಕಿ ಉಳಿದ ಹಳೆಯ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಆದ್ದರಿಂದ ನಿಮ್ಮ ಕಾರ್ಯಗಳ ಮೇಲೆ ಏಕಾಗ್ರತೆಯಿಂದಿರಿ. ದೀರ್ಘಕಾಲದವರೆಗೆ ವಿಳಂಬವಾಗಿರುವ ಪಾವತಿಯನ್ನು ಸಹ ಸ್ವೀಕರಿಸಬಹುದು‌. ಇದರಿಂದ  ಆರ್ಥಿಕ ಸ್ಥಿತಿ ಉತ್ತಮ ಆಗಲಿದೆ.  ಒತ್ತಡದಿಂದ ಮುಕ್ತರಾಗುತ್ತೀರಿ. ಅಕ್ಕಪಕ್ಕದವರೊಂದಿಗೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ.

Daily Horoscope: ಇಂದು ರಾಶಿಯವರು ಹುಷಾರ್; ನಿಮ್ಮ ಮನೆಯಲ್ಲಿ ಕಳ್ಳತನ ಸಾಧ್ಯತೆ..!

 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದವರು)

ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಯೋಜನೆಯಲ್ಲಿ ಕೆಲಸ ಮಾಡಲು ಸಮಯವು ತುಂಬಾ ಅನುಕೂಲಕರವಾಗಿದೆ.  ಈ ಸಮಯದಲ್ಲಿ ಗ್ರಹಗಳ ಸ್ಥಾನವು ನಿಮಗೆ ತುಂಬಾ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಉಲ್ಲಾಸ ಮತ್ತು ವಿನೋದದಲ್ಲಿ ಸಮಯ ಕಳೆಯುವ ಬದಲು, ನಿಮ್ಮ ಕೆಲಸದ ಬಗ್ಗೆ ಗಮನ ಕೊಡಿ. ಇಲ್ಲದಿದ್ದರೆ ನಿಮ್ಮ ಪ್ರಮುಖ ಅನೇಕ
ಕಾರ್ಯಗಳು ಸ್ಥಗಿತಗೊಳ್ಳಬಹುದು.

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದವರು)

ಇಂದು ನೀವು ತೆಗೆದುಕೊಂಡ ನಿರ್ಧಾರವು ಸರಿ ಎಂದು ಸಾಬೀತು ಆಗಲಿದೆ. ನಿಮ್ಮ ಸ್ವಂತ ದಕ್ಷತೆಯ ಮೇಲೆ ನಂಬಿಕೆ ಇರಿಸಿ. ಸಂಬಂಧಿಕರೊಂದಿಗೆ ವಿವಾದವಿದ್ದರೆ, ಅದನ್ನು ಪರಿಹರಿಸಲು ಇಂದು ಸರಿಯಾದ ಸಮಯ ಇದೆ. ಕೆಲವೊಮ್ಮೆ ನಿಮ್ಮ ಬಲ ಮತ್ತು ಕೋಪದ ಸ್ವಭಾವ ಕೆಲಸಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ನಿಮ್ಮ ಸ್ವಭಾವವನ್ನು ಶಾಂತವಾಗಿ ಮತ್ತು ಸಂಯಮದಿಂದ ಇಟ್ಟುಕೊಳ್ಳುವುದು ಅವಶ್ಯಕ.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರು)

ಇಂದು ನೀವು ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವಿರಿ. ಮೋಜಿನಲ್ಲಿ ಸಮಯ ಕಳೆದರೂ, ನಿಮ್ಮ ಅಗತ್ಯ ಕಾರ್ಯಗಳನ್ನು ನೀವು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಯಾವುದೇ ಗುರಿ ಆಯ್ಕೆಮಾಡುವಾಗ ಜಾಗರೂಕರಾಗಿರಿ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದವರು)

ಕುಟುಂಬ ಮತ್ತು ಸಮಾಜದಲ್ಲಿ ನಿಮಗೆ ಗೌರವ ಮತ್ತು ಖ್ಯಾತಿ ಇರುತ್ತದೆ. ನೀವು ಎಲ್ಲಾ ರೀತಿಯ ವೈಯಕ್ತಿಕ ಚಟುವಟಿಕೆಗಳಲ್ಲಿ ನಿರತರಾಗಬಹುದು. ಸಣ್ಣ ಸುಳ್ಳನ್ನು ಹೇಳುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು, ಆದ್ದರಿಂದ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಾಲ ಅಥವಾ ಬಾಡಿಗೆಗೆ ಸಂಬಂಧಿಸಿದ ವಿಷಯಗಳಲ್ಲಿ ತೊಂದರೆಗಳು ಆಗಬಹುದು. 

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದವರು)

ದಿನವು ಅತ್ಯುತ್ತಮವಾಗಿದೆ. ನೀವು ಚಿಂತಿಸದೆ ನಿಮ್ಮ ಕೆಲಸವನ್ನು ಮುಂದುವರಿಸುತ್ತೀರಿ. ವಿದ್ಯಾರ್ಥಿಗಳು ಮತ್ತು ಯುವಕರು ಈ ಸಮಯದಲ್ಲಿ ಅವರ ಕೆಲಸ ಮತ್ತು ಗುರಿಗಳಿಗೆ ಆದ್ಯತೆ ನೀಡುವರು. ಈ ಸಮಯದಲ್ಲಿ ಅಪಾಯಕಾರಿ ಚಟುವಟಿಕೆಗಳನ್ನು ತಪ್ಪಿಸಿ. ಮಧ್ಯಾಹ್ನ ಸ್ವಲ್ಪ ಅಶುಭವಾಗಲಿದೆ.
ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

Weekly Tarot Readings: ಈ ರಾಶಿಯವರಿಗೆ ವೃತ್ತಿ ಜೀವನದ ಚಿಂತೆ ಕಾಡಲಿದೆ..!

 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದವರು)

ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಹೋದರರ ಸಹಾಯದಿಂದ ನಿಮ್ಮ ಕೆಲವು ಕೆಲಸವನ್ನು ಸರಿಯಾಗಿ ಮಾಡಬಹುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನ. ಆಸ್ತಿಯ ವಿಷಯದಲ್ಲಿ ವಿವಾದಗಳು ಉಂಟಾಗಬಹುದು, ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸಿ. ವ್ಯಾಪಾರ ಚಟುವಟಿಕೆಗಳು ಲಾಭದಾಯಕವಾಗಬಹುದು. ನೀವು ಕುಟುಂಬದಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ.
 

click me!