Daily Horoscope: ಸಿಂಹವಿಂದು ಸುಮ್ಮನಿರುವುದೇ ಜಾಣತನ!

Published : Dec 08, 2021, 06:17 AM IST
Daily Horoscope: ಸಿಂಹವಿಂದು ಸುಮ್ಮನಿರುವುದೇ ಜಾಣತನ!

ಸಾರಾಂಶ

8 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಯಾರು ಎಚ್ಚರವಾಗಿರಬೇಕು?

ಮೇಷ(Aries): ಇಂದು ನೀವು ಕೈಗೊಳ್ಳುವ ಪ್ರಯಾಣದಿಂದ ಲಾಭ ದೊರಕಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷವಿದೆ. ಮನೆಯ ಸದಸ್ಯರೆಲ್ಲರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಕ್ಕಲಿದೆ. ಹೊಸ ಅವಕಾಶವೂ ಬರಬಹುದು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ವೃಷಭ(Taurus): ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ, ಸ್ವಂತದ ಕೆಲಸಗಳಿಗೆ ಎದುರಾಗುವ ಅಡೆತಡೆಗಳು. ಸಂಯಮ ಕಾಯ್ದುಕೊಳ್ಳಿ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ, ತಂದೆ-ಮಕ್ಕಳಲ್ಲಿ ಸಾಮರಸ್ಯ. ಕುಟುಂಬದ ವಿಚಾರದಲ್ಲಿ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ದೂರವಿಡಿ. ಗಣಪತಿ ಪ್ರಾರ್ಥನೆ ಮಾಡಿ.

ಮಿಥುನ(Gemini): ಬಹಳ ದಿನದಿಂದ ತಲೆಯಲ್ಲಿ ಕೊರೆಯುತ್ತಿರುವ ವಿಚಾರಕ್ಕೆ ಆತಂಕ ಬೇಡ, ಎಲ್ಲವೂ ಒಳಿತೇ ಆಗಿ ಸಮಾಧಾನ ಇರಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಏಕಾಗ್ರತೆ ಭಂಗವಾಗುತ್ತದೆ. ಇದರಿಂದ ಕೆಲಸಗಳು ಅಪೂರ್ಣವಾಗುತ್ತವೆ. ಲಲಿತಾ ಸಹಸ್ರನಾಮ ಪಠಿಸಿ. 

ಕಟಕ(Cancer): ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ಮನಸ್ಸಿಗೆ ಬೇಸರ. ಮಧ್ಯಾಹ್ನದ ನಂತರ ಸಮಾಧಾನ ಫಲವಿದೆ. ಬುದ್ಧಿ ಬಲವಿದೆ. ಘಟನೆಯ ಬಗ್ಗೆ ಪರಾಮರ್ಶಿಸಿ ತಪ್ಪನ್ನು ಬೊಟ್ಟು ಮಾಡದೆ ಮಾತುಕತೆ ನಡೆಸಿ. ಮಕ್ಕಳಿಗೆ ಸಂತಸ. ವಿದ್ಯಾರ್ಥಿಗಳಿಗೆ ಪ್ರಗತಿ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

Career Horoscope 2022: ಹೊಸ ವರ್ಷಕ್ಕೆ ಈ ರಾಶಿಯವರ ಲಕ್ ತಿರುಗ್ತು ಅಂತಾನೇ ಲೆಕ್ಕ!

ಸಿಂಹ(Leo): ವ್ಯವಹಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಆತಂಕ, ವೃತ್ತಿಯಲ್ಲಿ ಎಚ್ಚರ ಇರಲಿ. ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುಮ್ಮನಿರುವುದೇ ಜಾಣತನ. ವ್ಯಾಜ್ಯಗಳಲ್ಲಿ ಹಿನ್ನಡೆ. ನಾಗ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಮನೆ ಹಿರಿಯರ ಮಾತಿಗೆ ಬೆಲೆ ಕೊಡಿ. ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಹಿರಿಯರ, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ. ವೈದ್ಯರ ಬಳಿ ಪರಿಶೀಲಿಸುವುದೂ ಒಳ್ಳೆಯದು. ನಿರುದ್ಯೋಗಿಗಳು ತಾಳ್ಮೆ ಕಳೆದುಕೊಳ್ಳಬೇಡಿ. ಧನ್ವಂತರಿ ಪ್ರಾರ್ಥನೆ ಮಾಡಿ.

Weekly Horoscope: ಆಸ್ತಿ ವ್ಯವಹಾರಗಳು ಈ ರಾಶಿಯವರಿಗೆ ಭಾರೀ ಲಾಭ ತಂದುಕೊಡಲಿವೆ!

ತುಲಾ(Libra): ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದು ಭವಿಷ್ಯದಲ್ಲಿ ಭಾಗ್ಯದ ಬಾಗಿಲನ್ನು ತೆರೆಯಬಹುದು. ಗೃಹಸೌಖ್ಯ, ವಾಹನ ಸೌಖ್ಯ, ವ್ಯವಹಾರಗಳು ಸುಲಲಿತವಾಗುತ್ತವೆ. ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ವಿವಾಹಾಕಾಂಕ್ಷಿಗಳಿಗೆ ಅನಿರೀಕ್ಷಿತ ಸಂಬಂಧ ಅರಸಿ ಬರುವುದು. ನವಗ್ರಹ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಳ್ಳಿ. ಸಹೋದರರ ಸಹಕಾರದಿಂದ ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿ.  ಪ್ರಯಾಣದಲ್ಲಿ ಎಚ್ಚರ ಅಗತ್ಯ. ಶಿವಸ್ಮರಣೆಯಿಂದ ಒಳಿತಾಗುವುದು. 

ಧನುಸ್ಸು(Sagittarius): ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ನೆಂಟರಿಷ್ಟರ ಆಗಮನದಿಂದ ಸಂತಸ. ಆಹಾರ ಸಮೃದ್ಧಿ, ಹಣಕಾಸಿನ ಲಾಭ. ಶಿಕ್ಷಕರಿಗೆ ಸಂತಸದ ದಿನ. ಐಟಿ ಉದ್ಯೋಗಿಗಳಿಗೆ ಶ್ರಮ ಹೆಚ್ಚಾಗಲಿದೆ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.

ಮಕರ(Capricorn): ಉದ್ಯೋಗಿಗಳಿಗೆ ಬಲ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ. ಕೋರ್ಟು ಕಚೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ. ಹೊಸ ಹೂಡಿಕೆಯಿಂದ ಫಲವಿದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಮಾತು ನಯವಾಗಿರಲಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಕುಂಭ(Aquarius): ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ, ಕೈಕೆಳಗಿನವರನ್ನು ಆಪ್ತರಾಗಿಸಿಕೊಳ್ಳಿ.  ಆರೋಗ್ಯದಲ್ಲಿ  ಕೊಂಚ ಏರುಪೇರು. ಆಯಾಸ. ಕ್ರೀಡಾಳುಗಳಿಗೆ ಮನ್ನಣೆ. ಪ್ರಯಾಣಕ್ಕೆ ಮುನ್ನ ಮನೆದೇವರನ್ನು ಸ್ಮರಿಸಿ. ರೈತರಿಗೆ ಸಮಾಧಾನದ ದಿನ. ಸುಬ್ರಹ್ಮಣ್ಯನನ್ನು ಸ್ಮರಿಸಿ. 

ಮೀನ(Pisces): ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ. ಧನ ನಷ್ಟ ಹಾಗೂ ವ್ಯಯ ಹೆಚ್ಚು. ವ್ಯಾಪಾರಿಗಳಿಗೆ ತಟಸ್ಥ ದಿನ. ಉದ್ಯೋಗದಲ್ಲಿ ಏರುಪೇರಿಲ್ಲ. ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗ. ಆರೋಗ್ಯ ಸುಧಾರಿಸಲಿದೆ. ಪಕ್ಷಿಗಳಿಗೆ ಧಾನ್ಯ ತಿನ್ನಿಸಿ. 

PREV
Read more Articles on
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು