Daily Horoscope: ಮೇಷಕ್ಕೆ ನಾಲಿಗೆ ಬುದ್ಧಿಯ ಹಿಡಿತದಲ್ಲಿದ್ದರಷ್ಟೇ ನೆಮ್ಮದಿ, ಉಳಿದ ರಾಶಿಗಳ ಫಲವೇನು?

By Suvarna News  |  First Published Dec 7, 2021, 5:20 AM IST

7 ಡಿಸೆಂಬರ್ 2021, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಧನ ನಷ್ಟದಿಂದ ಸಿಂಹ ರಾಶಿಯವರಲ್ಲಿ ಹೆಚ್ಚುವ ವ್ಯಾಕುಲತೆ, ಉಳಿದ ರಾಶಿಗಳ ಫಲವೇನು?


ಮೇಷ(Aries): ಅಧಿಕ ವ್ಯಯದಿಂದ ಮನಸ್ಸಿಗೆ ಕಸಿವಿಸಿ. ಮಾತಿನ ಚಕಮಕಿಯಿಂದ ಆಪ್ತರು ದೂರಾಗುತ್ತಾರೆ. ಸಮಾಜದಲ್ಲಿ ಎಲ್ಲರಿಗೂ ಅವರದ್ದೇ ಆದ ಸ್ಥಾನಮಾನಗಳಿವೆ ಎಂಬದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ. ಇನ್ನೊಬ್ಬರ ಕಡೆ ಬೊಟ್ಟು ಮಾಡುವ ಮುನ್ನ ಆತ್ಮವಿಮರ್ಶೆ ಅಗತ್ಯ. ಎಳ್ಳು-ಅಕ್ಕಿ ದಾನ ಮಾಡಿ.

ವೃಷಭ(Taurus): ಲಾಭ ಸಮೃದ್ಧಿ, ನಿಮ್ಮೆಲ್ಲ ಕಾರ್ಯ ಹಾಗೂ ಮಾತಿಗೆ ಸಂಗಾತಿಯ ಸಹಕಾರ, ಮಕ್ಕಳ ಸಹಕಾರ ಸಿಕ್ಕು ಮನಸ್ಸಿಗೆ ಸಮಾಧಾನ ತರುವುದು. ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಅವುಗಳನ್ನು ಕಳೆದುಕೊಳ್ಳದೆ ಬಳಸಿಕೊಳ್ಳುವ ಜಾಣತನ ತೋರುವುದರಿಂದ ಲಾಭ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

Latest Videos

undefined

ಮಿಥುನ(Gemini): ಇಂದು ಹೊರ ಹೋಗುವಾಗ ಅತ್ಯಂತ ಜಾಗರೂಕರಾಗಿರಿ. ವಸ್ತು ನಷ್ಟ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ, ನಿರೀಕ್ಷೆ ಹುಸಿಯಾಗಲಿವೆ. ಮಾತಿನ ಮೇಲೆ ಬಹಳ ನಿಗಾ ಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅಚಾತುರ್ಯಕ್ಕೆ ಬೆಲೆ ತೆರಬೇಕಾಗುತ್ತದೆ. ಗಣಪತಿಗೆ ಕಡಲೆಕಾಳು ನೈವೇದ್ಯ ಮಾಡಿ. 

Offering flowers to god: ಯಾವ ದೇವರಿಗೆ ಯಾವ ಹೂವಿಟ್ಟರೆ ಶ್ರೇಷ್ಠ?

ಕಟಕ(Cancer): ಯಾರದೋ ಕೊಂಕು ಮಾತಿನಿಂದ ಇಲ್ಲವೇ, ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆ, ವ್ಯಾಪಾರದಲ್ಲಿ ನಷ್ಟ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಪ್ರೀತಿ-ಪ್ರೇಮ ವಿಚಾರಗಳಲ್ಲಿ ಅಸಮಾಧಾನ. ಎಲ್ಲವೂ ಸರಿ ಹೋಗುವುದು ಎಂಬ ನಂಬಿಕೆಯಿಂದ ಮೌನವಾಗಿ ನಿಮ್ಮ ಕೆಲಸವೇನೋ ಅದರಲ್ಲಿ ತೊಡಗಿಸಿಕೊಳ್ಳಿ. ಆಂಜನೇಯನಿಗೆ ಎಲೆ ಹಾರ ಸಮರ್ಪಿಸಿ. 

ಸಿಂಹ(Leo): ನಷ್ಟಫಲವಿದೆ, ವಸ್ತು ಕಳವಾಗುವ ಸಾಧ್ಯತೆ. ಇಡೀ ದಿನ ಮೈಯ್ಯೆಲ್ಲ ಕಣ್ಣಾಗಿರಿ. ಆನ್‌ಲೈನ್ ವ್ಯವಹಾರಗಳನ್ನೂ ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಸಿ. ಸಾಲ ಬಾಧೆಯಿಂದ ಕಿರಿಕಿರಿ.  ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಲಾಭ, ತಿಲ ಹಾಗೂ ಕ್ಷೀರ ದಾನ ಮಾಡಿ. 

ಕನ್ಯಾ(Virgo): ದಾಂಪತ್ಯದಲ್ಲಿ ಅಸಮಾಧಾನ, ಬಯಕೆಗಳು ಅಪೂರ್ಣವಾಗುತ್ತವೆ, ಮಕ್ಕಳಿಂದ ಕೊರಗು. ಅವರಿಗೆ ಬಯ್ಯುವ ಮುನ್ನ ನೀವು ನಿಮ್ಮ ಹೆತ್ತವರನ್ನು ಸರಿಯಾಗಿ ನಡೆಸಿಕೊಂಡಿದ್ದೀರಾ ಎಂದು ಪರಾಮರ್ಶಿಸಿಕೊಳ್ಳಿ. ಇಲ್ಲದಿದ್ದಲ್ಲಿ ಈಗಲೂ ಕಾಲ ಮಿಂಚಿಲ್ಲ. ಹೆತ್ತವರ ಆಶೀರ್ವಾದ ಇರದೆ ಸಂಸಾರ ಸುಖ ಸಿಗದು. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ತುಲಾ(Libra): ವೃತ್ತಿಯಲ್ಲಿ ಲಾಭ, ಹಣಕಾಸಿನ ಅನುಕೂಲ. ಶೇರು ವ್ಯವಹಾರಗಳಲ್ಲಿ ಅದೃಷ್ಟ ಪರಿಶೀಲಿಸಬಹುದು. ದಾಯಾದಿ ಕಲಹದಿಂದ ಮನಸ್ಸಿಗೆ ನೋವು. ನಿರುದ್ಯೋಗಿಗಳಿಗೆ ಅವಕಾಶ ವಿಫುಲ. ಅವಿವಾಹಿತರಿಗೆ ಸಂಬಂಧ ಕೂಡಿಬರುವುದು. ಆಂಜನೇಯ ಪ್ರಾರ್ಥನೆ ಮಾಡಿ.

Rahu kaal: ರಾಹುಕಾಲದ ಬಗ್ಗೆ ನೀವು ತಿಳ್ಕೊಳ್ಬೇಕಾಗಿರೋದಿಷ್ಟು

ವೃಶ್ಚಿಕ(Scorpio): ದೇಹ ಬಲವಿದೆ, ವೃತ್ತಿಯಲ್ಲಿ ಏರಿಳಿತವಿಲ್ಲ. ಬುದ್ಧಿಬಲ ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿಗುವುದಿಲ್ಲ. ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ವಿವಾಹಿತರಿಗೆ ನೆಮ್ಮದಿ ಇರಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿ, ಗ್ರಾಯತ್ರೀ ಮಂತ್ರ ಪಠಿಸಿ.

ಧನುಸ್ಸು(Sagittarius): ಇಂದು ಉದ್ಯೋಗ ವ್ಯವಹಾರದಲ್ಲಿ ಅನೇಕ ರೀತಿಯ ಕೆಲಸಗಳ ಜವಾಬ್ದಾರಿ ನಿಮ್ಮ ಮೇಲೆ ಉಳಿಯಬಹುದು. ಎಲ್ಲವನ್ನೂ ಒಂದೇ ಬಾರಿ ಮುಗಿಸುತ್ತೇನೆಂಬ ಹುಂಬತನ ಬೇಡ. ಒಂದೊಂದಾಗಿ ಕಾರ್ಯ ಮುಗಿಸಿ.  ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಡಲಿವೆ. ಚಿಂತಿಸುವ ಅಗತ್ಯವಿಲ್ಲ. ಕುಲದೇವತೆಯ ಪ್ರಾರ್ಥನೆ ಮಾಡಿ.

ಮಕರ(Capricorn): ಪ್ರವಾಸ, ನೀರು, ಆಹಾರದ ಕಾರಣದಿಂದ ಆರೋಗ್ಯದಲ್ಲಿ ಏರುಪೇರು. ಸಾತ್ವಿಕ ಆಹಾರ ಹಾಗೂ ವಿಶ್ರಾಂತಿ ಪಡೆಯಿರಿ. ಯುವಕರಲ್ಲಿ ನಿರುತ್ಸಾಹ. ಸ್ನೇಹಿತರ ಭೇಟಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ದುರ್ಗಾ ಪರಮೇಶ್ವರಿಯ ಪ್ರಾರ್ಥನೆ ಮಾಡಿ. 

ಕುಂಭ(Aquarius): ಬಹಳ ದಿನಗಳ ನಂತರ ಕೊಂಚ ವಿಶ್ರಾಂತಿ ಸಿಕ್ಕು ಮಾನಸಿಕವಾಗಿ ಸಬಲರಾಗುವಿರಿ. ಬಾಕಿ ಉಳಿದ ಬಹಳಷ್ಟು ಕೆಲಸಗಳು ಪೂರೈಸಿ ಸಮಾಧಾನ. ಮನೆಯಲ್ಲೇ ತಯಾರಿಸಿದ ಉತ್ತಮ ಆಹಾರವನ್ನೇ ಸೇವಿಸಿ. ಮಕ್ಕಳೊಂದಿಗೆ ಕಾಲ ಕಳೆಯುವಿರಿ. ತಾಯಿ ಅನ್ನಪೂರ್ಣೇಶ್ವರಿಯ ಪ್ರಾರ್ಥನೆ ಮಾಡಿ.

ಮೀನ(Pisces): ದೇಹಾಯಾಸ, ಶ್ರಮ ಹೆಚ್ಚಾಗಲಿದೆ. ಕೇವಲ ಮತ್ತೊಬ್ಬರ ಕ್ಷೇಮವನ್ನು ನೋಡುತ್ತಾ ನಿಮ್ಮ ಆರೋಗ್ಯ ಕಡೆಗಣಿಸದಿರಿ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ಕೇಳಿ ಸಂತೋಷ. ವೃತ್ತಿಯಲ್ಲಿ ಕಿರಿಕಿರಿ. ವಿವಾಹಾಕಾಂಕ್ಷಿಗಳಿಗೆ ಸಂತಸ. ಹಸುವಿಗೆ ಅಕ್ಕಿ ತಿನ್ನಿಸಿ. 
 

click me!