22 ಏಪ್ರಿಲ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗಿಂದು ಕಾಡುವ ಆಲಸ್ಯ, ಆಪಾದನೆ, ತೊಡಕು
ಮೇಷ(Aries): ಅಧಿಕಾರಿ ವರ್ಗದವರೊಂದಿಗೆ ಪ್ರಬಲ ಸಂಪರ್ಕವೇರ್ಪಡುವುದು. ನಿರುದ್ಯೋಗಿಗಳು ಹವ್ಯಾಸಗಳನ್ನು ಹೆಚ್ಚು ಮೊನಚಾಗಿಸಿಕೊಳ್ಳುವತ್ತ ಗಮನ ಹರಿಸಿ. ಅದರಿಂದ ಉತ್ತಮ ಆದಾಯ ಪಡೆಯಬಹುದು. ಸಂಗಾತಿಗೆ ನಿಮ್ಮ ಪ್ರೀತಿ ವ್ಯಕ್ತಪಡಿಸಿ. ದುರ್ಗಾ ಚಾಲೀಸಾ ಹೇಳಿಕೊಳ್ಳಿ.
ವೃಷಭ(Taurus): ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಕಾಡಬಹುದು. ಷೇರು ವ್ಯವಹಾರಗಳು ಕೂಡಾ ನಷ್ಟಫಲ ನೀಡಲಿವೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಶುಭ ದಿನ. ನಿಮ್ಮ ಕೆಲಸ ಎಲ್ಲರ ಗಮನ ಸೆಳೆಯುವುದು. ಕುಟುಂಬ ಸಹಕಾರ ಇರುವುದು. ಲಕ್ಷ್ಮೀ ದೇವಿಯ ಪೂಜೆ ಮಾಡಿ.
undefined
ಮಿಥುನ(Gemini): ಈ ದಿನ ನಿಮ್ಮ ಅದೃಷ್ಟ ಚೆನ್ನಾಗಿರಲಿದೆ. ಷೇರು ವ್ಯವಹಾರಗಳಲ್ಲಿ, ಸಂದರ್ಶನಗಳಲ್ಲಿ ಅದೃಷ್ಟ ಪರೀಕ್ಷೆಗಿಳಿಯಬಹುದು. ಯಾರಿಗೂ ಸಾಲ ನೀಡಬೇಡಿ. ಹೊಸ ಯೋಜನೆಗೆ ಕೈ ಹಾಕಬಹುದು. ದುರ್ಗಾಷ್ಟೋತ್ತರ ಪಠಿಸಿ.
ಕಟಕ(Cancer): ಕೆಲ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸ್ನೇಹದಲ್ಲಿ ಅಪಶೃತಿ ಕೇಳಬಹುದು. ವಿವಾಹೇತರ ಸಂಬಂಧಗಳು ಬದುಕನ್ನು ಹಾಳು ಮಾಡುತ್ತವೆ. ಆರೋಗ್ಯ ಕಳವಳ ಹುಟ್ಟಿಸಬಹುದು. ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಬಿಳಿ ಧಾನ್ಯ ದಾನ ಮಾಡಿ.
ಸಿಂಹ(Leo): ಹೊಸ ಮನೆ ಸಂಬಂಧಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಮಕ್ಕಳ ಶಿಕ್ಷಣದ ವಿಷಯವಾಗಿ ಚಿಂತಿತರಾಗುವಿರಿ. ವೃದ್ಧರಿಗೆ ಮಂಡಿ ನೋವು, ಸೆಳೆತ ಬಾಧಿಸಲಿದೆ. ಧನ ಲಾಭವಿರಲಿದೆ. ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ. ಲಕ್ಷ್ಮೀ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಉದ್ಯಮ ರಂಗದಲ್ಲಿರುವವರಿಗೆ ದೊಡ್ಡ ಪ್ರಾಜೆಕ್ಟ್ ಕೈಗೆ ಸಿಗಬಹುದು. ಬರುವುದೇ ಇಲ್ಲ ಎಂದುಕೊಂಡ ಹಣ ಅನಿರೀಕ್ಷಿತವಾಗಿ ಹಿಂದಿರುಗುವ ಸಾಧ್ಯತೆ ಇದೆ. ಗೃಹದಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳು ಆತಂಕ ತರಬಹುದು. ಶಾರದಾ ದೇವಿ ಸ್ಮರಿಸಿ.
ತುಲಾ(Libra): ರೈತರಿಗೆ ಅಪಾರ ಲಾಭವಾಗಲಿದೆ. ವ್ಯಾಪಾರಿಗಳು ಚಾಣಾಕ್ಷತೆಯಿಂದ ವರ್ತಿಸಿ ಲಾಭ ತೆಗೆಯುವರು. ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇರುವರು. ಗೆಳೆತನದಲ್ಲಿ ಸಾಲ ಕೊಟ್ಟು ಸಂಬಂಧ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಸರಸ್ವತಿ ಸ್ಮರಣೆ ಮಾಡಿ.
ವೃಶ್ಚಿಕ(Scorpio): ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂಥ ಲಾಭಕಾರಿ ಪರಿಸ್ಥಿತಿ ಎದುರಾಗಲಿದೆ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಬುದ್ಧಿ ಮಾತು ಕೇಳಬೇಕಾಗಿ ಬರುವುದು. ಲಲಿತಾ ಸಹಸ್ರನಾಮ ಪಠಣ ಮಾಡಿ.
ಹೆಚ್ಚು divorceಗೊಳಗಾಗೋರು ಇದೇ ನಕ್ಷತ್ರದಲ್ಲಿ ಹುಟ್ಟಿದವರು!
ಧನುಸ್ಸು(Sagittarius): ಆಲಸ್ಯದಿಂದ ದಿನ ವ್ಯರ್ಥವಾಗಿ ಕಳೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳ ಕಡೆಯಿಂದ ಆಪಾದನೆ ಕೇಳಿ ಬರುವುದು. ಪ್ರೇಮ ವ್ಯವಹಾರಗಳಲ್ಲಿ ತೊಡಕು ಕಾಣಿಸಿಕೊಳ್ಳಬಹುದು. ಸಂಗಾತಿಯೊಂದಿಗೆ ಜಗಳ ತಪ್ಪಿಸಲು ಯತ್ನಿಸಿ. ದುರ್ಗಾ ಅಷ್ಟೋತ್ತರ ಪಠಿಸಿ.
ಮಕರ(Capricorn): ಆಸ್ತಿ ವಿಚಾರದ ಗಲಭೆಗಳು ತಾತ್ಕಾಲಿಕವಾಗಿ ತಣ್ಣಗಾಗುವುವು. ಪರ ನಿಂದನೆಯಲ್ಲಿ ತೊಡಗುವುದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳುವತ್ತ ಗಮನ ಹರಿಸಿ. ಪರಿಚಿತರಿಂದ ಶುಭ ಸುದ್ದಿಯೊಂದು ನಿಮ್ಮನ್ನರಸಿ ಬರಲಿದೆ. ಮನೆ ದೇವರ ಸ್ಮರಣೆ ಮಾಡಿ.
ಕುಂಭ(Aquarius): ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ಮಾನಸಿಕವಾಗಿ ಸಿದ್ಧತೆ ನಡೆಸುವಿರಿ. ಮನೆಗೆ ನೆಂಟರಿಷ್ಟರು ಬರಬಹುದು. ವೈವಾಹಿಕ ಪ್ರಸ್ತಾಪಗಳು ಮುಂದುವರಿದ ಹಂತ ಪಡೆಯಲಿವೆ. ಸಂತಸದ ದಿನವಾಗಿರಲಿದೆ. ಬಡವರಿಗೆ ದವಸ ಧಾನ್ಯ ನೀಡಿ.
ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!
ಮೀನ(Pisces): ಅವಿವಾಹಿತರು ಬಾಳ ಸಂಗಾತಿಯ ಕುರಿತ ತಮ್ಮ ನಿಲುವಿನಲ್ಲಿ ಧೈರ್ಯ ಪ್ರದರ್ಶಿಸಬೇಕು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ನಿಲುವಿನಿಂದ ಮುಂದುವರಿಯಿರಿ. ಮನಸಿನ ಗೊಂದಲಗಳಿಗೆ ಹಿರಿಯರ ಮಾರ್ಗದರ್ಶನ ಪಡೆಯಿರಿ. ಮನೆಯಲ್ಲಿ ತುಳಸಿ, ತುಂಬೆ ಮತ್ತಿತರೆ ಉತ್ತಮವಾದ ಗಿಡ ನೆಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.