ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ

Published : Jul 11, 2025, 06:00 AM IST
RAJAYOGA NEW 09

ಸಾರಾಂಶ

ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯವಾಣಿ. 

ಮೇಷ(Aries): ಉದ್ಯೋಗ ರಂಗದಲ್ಲಿ ಪ್ರಶಂಸೆ, ಪ್ರಶಸ್ತಿ ಅರಸಿ ಬರಲಿವೆ. ನಿಮ್ಮ ಏಳ್ಗೆ ಬಗ್ಗೆ ಸಹೋದ್ಯೋಗಿಗಳಲ್ಲಿ ಅಸೂಯೆ ಮೂಡಬಹುದು. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಬಹುದು. ಪ್ರಮುಖ ವಿಚಾರಗಳಲ್ಲಿ ಸಂಗಾತಿಯ ಸಹಕಾರ ಸಿಗಲಿದೆ. ಗಣಪತಿಗೆ ದರ್ಬೆ ಸಲ್ಲಿಸಿ.

ವೃಷಭ(Taurus): ಲೇವಾದೇವಿ ವ್ಯವಹಾರಗಳಲ್ಲಿ ನಷ್ಟಫಲವಿದೆ. ಸ್ನೇಹಿತರ ವಂಚನೆ ಬೆಳಕಿಗೆ ಬಂದು ಆಘಾತವಾಗಬಹುದು. ಮನಸ್ಸು ಚಂಚಲವಾಗಿರುವುದು. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ.

ಮಿಥುನ(Gemini): ಸ್ಥಿರಾಸ್ತಿ ಖರೀದಿ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ಕೈಗೆ ಬರಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ. ದಾಂಪತ್ಯ ಜೀವನ ಹಾಲು ಜೇನಿನಂತಿರುತ್ತದೆ. ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

ಕಟಕ(Cancer): ಸಾಲ ಪಡೆಯಲು, ಕೊಡಲು ಉತ್ತಮ ದಿನ. ನಿಮ್ಮ ಅನೈತಿಕ ಕೆಲಸಗಳು, ವಂಚನೆ ಬೆಳಕಿಗೆ ಬರಬಹುದು. ಸತ್ಯದ ದಾರಿಯಲ್ಲಿರುವವರಿಗೆ ಭಯದ ಅಗತ್ಯವಿಲ್ಲ. ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ಬಿದ್ದು ಪೆಟ್ಟಾಗಬಹುದು. ಎಚ್ಚರ ಅಗತ್ಯ. ಕುಲದೇವರ ಸ್ಮರಣೆ ಮಾಡಿ.

ಸಿಂಹ(Leo): ಕೈ ತಪ್ಪಿ ಹೋದ ಕನಸೊಂದು ಮತ್ತೆ ಹೆಗಲೇರಲಿದೆ. ಆಸ್ತಿ ಖರೀದಿ ಸಾಧ್ಯತೆ ನಿಚ್ಚಳವಾಗಿದೆ. ಕಾರ್ಯ ರಂಗದಲ್ಲಿ ನಿಮ್ಮ ಸಾಧನೆಗೆ ಶ್ಲಾಘನೆ ದೊರೆಯುವುದು. ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.

ಕನ್ಯಾ(Virgo): ಬಹಳ ಬ್ಯುಸಿಯಾದ ದಿನ. ಸಾಕಷ್ಟು ಕೆಲಸಗಳು ಎಡೆಬಿಡದೆ ಮಾಡಿದರೂ ಮುಗಿಯದೆ ತಲೆ ನೋವು ತರುವುವು. ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ. ಅತ್ತೆಯೊಂದಿಗೆ ಜಗಳವಾಗುವುದು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಗಣಪತಿ ಶತನಾಮಾವಳಿ ಹೇಳಿಕೊಳ್ಳಿ.

ತುಲಾ(Libra): ಚರಾಸ್ತಿ ಖರೀದಿ ಮಾಡಲಿರುವಿರಿ. ಪ್ರಯಾಣದಿಂದ ಧನಲಾಭವಿರಲಿದೆ. ಪ್ರತಿಭೆಗೆ ತಕ್ಕ ವೇದಿಕೆಗಳು ದೊರೆತು ಸಂತಸವಾಗುವುದು. ಕುಟುಂಬದಲ್ಲಿ ಪ್ರೀತಿ, ಸಹನೆಯೊಂದಿಗಿರಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ.

ವೃಶ್ಚಿಕ(Scorpio): ಸತತವಾಗಿ ಸಮಸ್ಯೆಗಳೇ ಎದುರಾಗುತ್ತಿವೆ ಎಂಬ ಚಿಂತೆ ಆವರಿಸುವುದು. ಎಲ್ಲ ಬದಲಾಗುವ ಕಾಲ ಸನ್ನಿಹಿತವಾಗಿದೆ. ಸಕಾರಾತ್ಮಕವಾಗಿರಿ. ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ. ಸಣ್ಣಪುಟ್ಟ ತಿರುಗಾಟದಿಂದ ಸಮಾಧಾನ. ಬಟ್ಟೆ ಖರೀದಿಯಿಂದ ಸಂತಸ. ವಿಘ್ನ ನಿವಾರಕನನ್ನು ಸ್ಮರಿಸಿ.

ಧನುಸ್ಸು(Sagittarius): ನೀಚ ಜನರ ಒಡನಾಟದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುವುದು. ಮಾನಸಿಕ ಸಮತೋಲನ ಸಾಧಿಸಲಾಗದೆ ಒದ್ದಾಡುವಿರಿ. ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ಸಾಮಾನ್ಯ ದಿನ. ಪೋಷಕರ ಭಾವನೆಗಳನ್ನು ಗೌರವಿಸಿ. ನವಗ್ರಹ ಶ್ಲೋಕ ಹೇಳಿ.

ಮಕರ(Capricorn): ದೈವಾನುಗ್ರಹವಿದ್ದು ಎಲ್ಲವೂ ನೀವೆಣಿಸಿದಂತೆಯೇ ಆಗಲಿದೆ. ಅದೃಷ್ಟವೊಂದೇ ನಂಬಿ ಕೂರದೆ ಪ್ರಯತ್ನ ಹೆಚ್ಚಿಸಿ. ವಿದ್ಯಾರ್ಥಿಗಳಗೆ ಪ್ರತಿಭಾ ಶಕ್ತಿ ಜಾಗೃತವಾಗಲಿದೆ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ವಿಷ್ಣು ಸಹಸ್ರನಾಮ ಹೇಳಿ.

ಕುಂಭ(Aquarius): ಮಾಡುವ ಕೆಲಸದ ಮೇಲೆ ಶ್ರದ್ಧೆ ನಿಲ್ಲದೆ ಹೋಗಿ ಆತಂಕವಾಗುವುದು. ದೂರ ಪ್ರಯಾಣ ಯೋಗವಿದೆ. ತಂದೆ ತಾಯಿಯ ಯೋಗಕ್ಷೇಮ ವಿಚಾರಿಸಿಕೊಳ್ಳಿ. ಮಾತಿನಿಂದ ಲಾಭ ಹೆಚ್ಚಲಿದೆ. ಷೇರು ವ್ಯವಹಾರಗಳಲ್ಲಿ ನಷ್ಟ. ಹಣವನ್ನು ಉಳಿಸುವ ಬಗ್ಗೆ ಗಮನ ಹರಿಸಿ. ಕೃಷ್ಣನಿಗೆ ತುಳಸಿ ಅರ್ಪಿಸಿ.

ಮೀನ(Pisces): ಕೆಲಸ ಕಾರ್ಯಗಳಲ್ಲಿ ಎಡವಟ್ಟುಗಳು ಹೆಚ್ಚಿ ಬೈಸಿಕೊಳ್ಳಬೇಕಾಗುವುದು. ಹಣದ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಮನೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಆಸಕ್ತಿ, ಧನವ್ಯಯ. ಯಾರೊಂದಿಗೂ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ಕೃಷ್ಣ ಸ್ಮರಣೆ ಮಾಡಿ.

 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ