Daily Horoscope: ಸಂಗಾತಿಯಿಂದ ವಿಷಯ ಮುಚ್ಚಿಟ್ಟು ಪೇಚಿಗೆ ಸಿಲುಕುವ ಸಿಂಹ

By Chirag Daruwalla  |  First Published Oct 18, 2022, 5:00 AM IST

18 ಅಕ್ಟೋಬರ್ 2022, ಮಂಗಳವಾರ ಒಂದು ರಾಶಿಗೆ ಹಳೆಯ ವಿಷಯಗಳಿಂದ ಮತ್ತೆ ಮನಸ್ತಾಪ, ಮತ್ತೊಂದಕ್ಕೆ ಆಪ್ತರಿಂದ ನೋಯುವಂಥ ಸುದ್ದಿ..


ಮೇಷ(Aries): ಮಕ್ಕಳ ವೃತ್ತಿ ಕುರಿತು ಚಿಂತೆ ಕಾಡಬಹುದು. ಸಕಾಲದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಸಣ್ಣ ವಿಷಯಗಳಿಗೆ ನೆರೆಹೊರೆಯವರೊಂದಿಗೆ ವಿವಾದಗಳು ಉಂಟಾಗಬಹುದು. ಆಸ್ತಿ ಸಂಬಂಧಿತ ವ್ಯವಹಾರದಲ್ಲಿ ಜಾಗರೂಕರಾಗಿರಿ. ಒಪ್ಪಂದವನ್ನು ಮಾಡುವ ಮೊದಲು ದಾಖಲೆಗಳನ್ನು ಪರಿಶೀಲಿಸಿ. 

ವೃಷಭ(Taurus): ಈ ಸಮಯದಲ್ಲಿ ಭಾವುಕರಾಗುವ ಬದಲು ಪ್ರಾಯೋಗಿಕವಾಗಿರಿ. ಕಠಿಣ ಪರಿಶ್ರಮ ನಿರಂತರವಾಗಿರಬೇಕು. ಏನೂ ಫಲ ಸಿಗುತ್ತಿಲ್ಲ ಎಂದು ನೀವು ಚಿಂತಿತರಾಗಿರಬಹುದು. ಆದರೆ, ವರ್ಷದ ಮೊದಲು ನೀವಿದ್ದಿದ್ದಕ್ಕೂ ಈಗಿರುವುದಕ್ಕೂ ನಡುವೆ ಆಗಿರುವ ಬದಲಾವಣೆಗಳನ್ನು ಗಮನಿಸಿ. ಯೋಗ ಮತ್ತು ಧ್ಯಾನ ಮಾಡಿ.

Latest Videos

undefined

ಮಿಥುನ(Gemini): ಸಂಬಂಧಿಕರೊಂದಿಗೆ ಸಂಬಂಧಗಳು ಬಲಗೊಳ್ಳುತ್ತವೆ. ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಪಾಲುದಾರಿಕೆ ವ್ಯವಹಾರಗಳು ಲಾಭವನ್ನು ತರುತ್ತವೆ. ಪತಿ-ಪತ್ನಿಯರ ಸಂಬಂಧದಲ್ಲಿ ಮಧುರತೆ ಇರುತ್ತದೆ. ಪರಸ್ಪರರ ಭಾವನೆಗಳನ್ನು ಗೌರವಿಸುವುದರಿಂದ ಸಂಬಂಧವು ಮಧುರವಾಗಿರುತ್ತದೆ. ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆಗಳು ಬರಬಹುದು.

ಕಟಕ(Cancer): ಕೆಲವು ರಾಜಕೀಯ ಮತ್ತು ಸಾಮಾಜಿಕ ಸಂಬಂಧಗಳು ಪ್ರಯೋಜನಕಾರಿ. ಆದ್ದರಿಂದ ನಿಮ್ಮ ಸಾರ್ವಜನಿಕ ಸಂಪರ್ಕವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಹಳೆಯ ವಿಷಯಗಳು ವರ್ತಮಾನದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ನಿರೀಕ್ಷಿತ ಫಲಿತಾಂಶ ಸಿಗದೆ ವಿದ್ಯಾರ್ಥಿಗಳು ಅತೃಪ್ತರಾಗುತ್ತಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 

Gemology: ಮಾಣಿಕ್ಯ ಧಾರಣೆ ಈ ರಾಶಿಯವರ ಭವಿಷ್ಯ ಬೆಳಗುವುದು!

ಸಿಂಹ(Leo): ವಿಶೇಷ ವ್ಯಕ್ತಿಯೊಂದಿಗೆ ಸಭೆ ನಡೆಯಲಿದೆ. ಪ್ರಸ್ತುತ ಪರಿಸ್ಥಿತಿ ತುಂಬಾ ಅನುಕೂಲಕರವಾಗಿಲ್ಲ. ಆದ್ದರಿಂದ ತಾಳ್ಮೆಯನ್ನು ಇಟ್ಟುಕೊಳ್ಳಿ. ಮಕ್ಕಳೊಂದಿಗಿನ ಭರವಸೆಗಳು ಈಡೇರುವುದಿಲ್ಲ. ವೈಯಕ್ತಿಕ ಕೆಲಸಗಳಿಂದಾಗಿ ವ್ಯಾಪಾರ ಕಾರ್ಯಗಳ ಮೇಲೆ ಕಡಿಮೆ ಗಮನವಿರುತ್ತದೆ. ಹಾಗಾಗಿ ಈಗಲೇ ಹೊಸ ಯೋಜನೆ ಜಾರಿ ಮಾಡಬೇಡಿ. ಯಂತ್ರೋಪಕರಣ ಕ್ಷೇತ್ರದ ವ್ಯವಹಾರದಲ್ಲಿ ಲಾಭವಾಗಲಿದೆ. ಸಂಗಾತಿಯಿಂದ ಕೆಲ ಗುಟ್ಟು ಕಾಪಾಡಲು ಹೋಗಿ ಸಂಬಂಧ ಹಾಳು ಮಾಡಿಕೊಳ್ಳುವಿರಿ. 

ಕನ್ಯಾ(Virgo): ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಯೋಜನೆಗಳು ಪ್ರಯೋಜನವನ್ನು ನೀಡುತ್ತವೆ. ನಿಮ್ಮ ವರ್ತನೆಯಿಂದ ಮನೆಯಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ವಾಹನಕ್ಕೆ ಸಂಬಂಧಿಸಿದ ಸಾಲ ತೆಗೆದುಕೊಳ್ಳುವ ಮೊದಲು ಮತ್ತೊಮ್ಮೆ ಯೋಚಿಸಿ. ಹೊಸ ಕೆಲಸಗಳು ಪ್ರಾರಂಭವಾಗುತ್ತವೆ, ಆದರೆ ಪ್ರಯೋಜನಗಳು ತಕ್ಷಣವೇ ಸಿಗುವುದಿಲ್ಲ. 

ತುಲಾ(Libra): ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರುತ್ತೀರಿ. ನಿಮ್ಮ ಅತಿಯಾದ ಆಸೆಗಳಿಂದಾಗಿ, ನೀವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗಬಹುದು. ಮನೆಯ ಹಿರಿಯರನ್ನು ಗೌರವಿಸಿ. ವ್ಯಾಪಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯಲಿದೆ. ಕೆಲಸ ಮಾಡುವ ಹೊಸ ಮಾರ್ಗವು ಯಶಸ್ಸಿಗೆ ಕಾರಣವಾಗುತ್ತದೆ. 

ವೃಶ್ಚಿಕ(Scorpio): ಮನೆಯಲ್ಲಿ ಹೊಸ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು. ಹೂಡಿಕೆಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಲಿವೆ. ಧೈರ್ಯ ಮತ್ತು ಸಾಹಸದಿಂದ, ನೀವು ಕಷ್ಟಕರವಾದ ಕಾರ್ಯಗಳನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಕಟ ವ್ಯಕ್ತಿಗೆ ಸಂಬಂಧಿಸಿದ ಅಹಿತಕರ ಸುದ್ದಿಗಳು ನೋಯಿಸಬಹುದು. 

ಧನುಸ್ಸು(Sagittarius): ಮನೆಯಲ್ಲಿ ಪತ್ನಿ ಮಕ್ಕಳ ಮೇಲೆ ಮಾನಸಿಕ, ದೈಹಿಕ ದೌರ್ಜನ್ಯ ನಡೆಸುವುದರಿಂದ ಸಧ್ಯದಲ್ಲೇ ತೀವ್ರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ಮಹಿಳೆಯನ್ನು ಅವಮಾನಿಸಿ ಅಪಖ್ಯಾತಿಗೆ ಪಾತ್ರರಾಗುವಿರಿ. ಈ ಸಮಯ ಸಮಾಜದಲ್ಲಿ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಸಂಗಾತಿಯೊಂದಿಗೆ ಜಗಳ ಹೆಚ್ಚಬಹುದು. 

ಮಕರ(Capricorn): ತಂಡದ ಕೆಲಸದಲ್ಲಿ ಉತ್ತಮ ಆಯಾಮಗಳು ಕಂಡುಬರುತ್ತವೆ. ತುಂಬಾ ಬಿಡುವಿಲ್ಲದ ಕಾರಣ ಕುಟುಂಬಕ್ಕೆ ಸಮಯ ನೀಡಲು ಆಗುವುದಿಲ್ಲ. ಅತಿಯಾದ ಕೆಲಸದಿಂದ ದೈಹಿಕ ಮತ್ತು ಮಾನಸಿಕ ಆಯಾಸ ಉಂಟಾಗಬಹುದು. ಆದ್ದರಿಂದ ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Mythology: ಅಗಸ್ತ್ಯರ ಮೇಲೆ ಮುನಿದು ನದಿಯಾಗಿ ಭೋರ್ಗರೆದ ಕಾವೇರಿ!

ಕುಂಭ(Aquarius): ಕಚೇರಿಯಲ್ಲಿನ ಪ್ರಮುಖ ಸಭೆಯಲ್ಲಿ ನಿಮ್ಮ ಸಲಹೆಗಳಿಗೆ ಆದ್ಯತೆ ಸಿಗುತ್ತದೆ. ಪತಿ-ಪತ್ನಿಯರ ಸಂಬಂಧಗಳು ಮಧುರವಾಗಿರುತ್ತದೆ. ಕಾಲೋಚಿತ ಕಾಯಿಲೆಗಳು ಬರಬಹುದು. ಕೆಲಸದ ಆಯಾಸ ಹೈರಾಣಾಗಿಸಬಹುದು. ಮಹಿಳೆಯರು ಅತ್ತೆ, ನಾದಿನಿಯರ ಕಾಟಕ್ಕೆ ಬೇಸತ್ತು ಹೋಗುವರು.

ಮೀನ(Pisces): ವೃತ್ತಿಗೆ ಸಂಬಂಧಿಸಿದ ಕನಸು ನನಸಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಒಡನಾಟದಿಂದ ಮನೋಬಲ ಹೆಚ್ಚುತ್ತದೆ. ಅಸಮತೋಲಿತ ಆಹಾರದಿಂದಾಗಿ ಹೊಟ್ಟೆಯ ವ್ಯವಸ್ಥೆಯು ಹದಗೆಡಬಹುದು. ಸ್ವಲ್ಪ ಸಮಯದವರೆಗೆ ಲಘು ಆಹಾರವನ್ನು ಸೇವಿಸಿ.

click me!