Daily Horoscope: ಮಿಥುನಕ್ಕೆ ಮೋಸ ಹೋಗುವ ಸಾಧ್ಯತೆ, ಸಿಂಹಕ್ಕೆ ಹೆಚ್ಚುವ ಒತ್ತಡ

By Suvarna NewsFirst Published May 9, 2022, 5:08 AM IST
Highlights

9 ಮೇ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಯವರ ವಂಚನೆ ಇಂದು ಬೆಳಕಿಗೆ

ಮೇಷ(Aries): ವ್ಯಾಪಾರಸ್ಥರು ತಮ್ಮ ಕೆಲಸದಲ್ಲಿ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಂವಹನ ಕೊರೆತೆಯಿಂದ ಕೆಲ ಬಿರುಕುಗಳು ಕಾಣಿಸಬಹುದು ಎಚ್ಚರ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ(Taurus): ಪಾಲುದಾರಿಕೆಯ ಕೆಲಸದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ಹಿಂದೆ ಯಾರಿಗೋ ನೀಡಿದ ಹಣ ವಾಪಾಸ್‌ ಬರಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಅಸೂಯೆ ಕಾಡಬಹುದು. ಮನೆಯಲ್ಲಿ ಕೆಲವರ ಆರೋಗ್ಯ ಹದಗೆಟ್ಟು ಚಿಂತಿತರಾಗುವಿರಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಯಾರಿಂದಾದರೂ ಮೋಸ ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಚ್ಚರದಿಂದಿರಿ. ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಮಾತಿನ ಮೇಲೆ ಹತೋಟಿ ಸಾಧಿಸಲಾಗದೇ ಮನಃಶಾಂತಿ ಹಾಳಾಗುವುದು. ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಪಠಿಸಿ. 

ಕಟಕ(Cancer): ನಿಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು, ವಿವರಣೆ ನೀಡಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಹಣವನ್ನು ವೃಥಾ ಖರ್ಚು ಮಾಡಿ ಕೊರಗುವಿರಿ. ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಶಿವ ಪಂಚಾಕ್ಷರ ಸ್ತೋತ್ರ ಜಪ ಮಾಡಿ. 

ಸಿಂಹ(Leo): ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಬಹುದು. ಮನಸ್ಸಿಗೆ ಬೇಸರ ಆಗಬಹುದು. ಹಿತಶತ್ರುಗಳು ಹಿಂದೆ ಸರಿಯುವರು. ಸಾಲ ಸಿಗಬಹುದು. ಮಕ್ಕಳ ಮಾನಸಿಕ ಸ್ಥಿತಿಗತಿ ಬಗ್ಗೆ ಹೆಚ್ಚಿನ ಗಮನ ವಹಿಸಿ. ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಹೇಳಿಕೊಳ್ಳಿ. 

ಮೈ ತುಂಬ ಸಾಲವಿದೆಯಾ? ಪರಿಹಾರಕ್ಕೆ ಈ Vaastu Tips ಅನುಸರಿಸಿ

ಕನ್ಯಾ(Virgo): ಯಾವುದೇ ಕೆಲಸದಲ್ಲಿ ಆತುರವು ನಿಮಗೆ ದೊಡ್ಡ ಹೊಡೆತ ಕೊಡಬಹುದು. ಕೆಲಸದ ಸ್ಥಳದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಬಾಸ್ ಜೊತೆ ಕೆಲವು ರೀತಿಯ ವಾದಗಳು ಇರಬಹುದು. ಕೆಲಸ ಕಳೆದುಕೊಳ್ಳುವ ಅಪಾಯವಿರುತ್ತದೆ. ಸುಬ್ರಹ್ಮಣ್ಯ ಕವಚ ಪಠಿಸಿ. 

ತುಲಾ(Libra): ಯಾರನ್ನೂ ಕುರುಡಾಗಿ ನಂಬಲು ಹೋಗಬೇಡಿ. ಅದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು. ಮನೆಯ ಹಣದ ಸಮಸ್ಯೆಗಳು ಕಂಗಾಲಾಗಿಸಲಿವೆ. ಆರ್ಥಿಕ ವಿಷಯವಾಗಿ ಅವಮಾನ ಎದುರಿಸಬೇಕಾಗಬಹುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಯಾವುದಾದರೂ ವಸ್ತು ಹಾನಿಯ ಬಲವಾದ ಸಾಧ್ಯತೆಯಿದೆ. ಪ್ರಯಾಣದಲ್ಲಿ ಅಡೆತಡೆಗಳು ಎದುರಾಗಬಹುದು. ಯಾವುದೇ ಕೆಲಸದಲ್ಲಿ ತೀರಾ ನಿಧಾನ ಬೇಡ. ನಿಮ್ಮದೇ ಸರಿ ಎಂಬ ಮೊಂಡುತನದಿಂದ ಕಳೆದುಕೊಳ್ಳುವುದೇ ಹೆಚ್ಚು. ಹಸುವಿಗೆ ಅಕ್ಕಿಬೆಲ್ಲ ತಿನ್ನಿಸಿ. 

ಧನುಸ್ಸು(Sagittarius): ಅಲ್ಪಾವಧಿಯಲ್ಲಿ ಹೂಡಿಕೆ ಇಂದು ಬೇಡ. ಕುಟುಂಬದೊಂದಿಗೆ ಪ್ರಯಾಣ ಯೋಗವಿದೆ. ದುರಭಿಮಾನ ಪಕ್ಕಕ್ಕಿಟ್ಟರೆ ಒಳಿತಾಗಲಿದೆ. ಸುಳ್ಳು ಹೇಳಿದರೆ ಸಿಕ್ಕಿ ಬೀಳುವ ಅಪಾಯವಿದೆ. ಮನೆಯಲ್ಲಿನ ಮುನಿಸುಗಳು ಶಮನವಾಗುವುವು. ಲಕ್ಷ್ಮೀ ನಾರಾಯಣ ಪ್ರಾರ್ಥನೆ ಮಾಡಿ. 

ಮಕರ(Capricorn): ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಲ್ಲಿ ವಿವಾದಗಳ ಸಾಧ್ಯತೆಗಳಿವೆ. ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ. ಪ್ರಮುಖ ವಿಷಯದಲ್ಲಿ ನಿರ್ಧಾರಕ್ಕೆ ಬರಲಾರದೆ ಗೊಂದಲದಲ್ಲಿ ಬೀಳುವಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಕುಂಭ(Aquarius): ಸಣ್ಣ ಪುಟ್ಟ ಆದಾಯದ ಮೂಲಗಳಿಂದ ಲಾಭವಿರಲಿದೆ. ಸಹೋದರರ  ಸಹಕಾರ, ನೆರವು ದೊರೆತು ದೊಡ್ಡ ಕಾರ್ಯಗಳು ಸುಲಭವಾಗಿ ಜರುಗುವುವು. ಮಕ್ಕಳ ಆರೋಗ್ಯ. ಸಮಸ್ಯೆ ಕಂಗೆಡಿಸುವುವು. ರುದ್ರಾಭಿಷೇಕ ಮಾಡಿಸಿ. 

ವೃಷಭದಲ್ಲಿ ಬುಧ ವಕ್ರಿ; ನಿಮ್ಮ ರಾಶಿಯ ಮೇಲೇನು ಪರಿಣಾಮವಾಗಲಿದೆ?

ಮೀನ(Pisces): ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಶುಭ ಸುದ್ದಿ ಕಿವಿಗೆ ಬೀಳಬಹುದು. ಇದರಿಂದ ಇಡೀ ದಿನ ಚೈತನ್ಯಭರಿತವಾಗಿರಲಿದೆ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಸ್ನೇಹಿತರು ಸಾಲ ಕೇಳಬಹುದು. ಕೊಟ್ಟು ಕೋಡಂಗಿ ಆಗುವ ಬದಲು ಕೊಡದೇ ಇರುವುದೇ ಉತ್ತಮ.  ಶಿವನಿಗೆ ಜಲಾಭಿಷೇಕ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!