Daily Horoscope: ಸಿಂಹಕ್ಕೆ ಮಕ್ಕಳಿಂದ ಹೆಚ್ಚುವ ಚಿಂತೆ, ತುಲಾ ರಾಶಿಗೆ ಆರೋಗ್ಯ ಸಮಸ್ಯೆ

By Suvarna NewsFirst Published Mar 6, 2022, 5:18 AM IST
Highlights

6 ಮಾರ್ಚ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಬದುಕಿನ ಕುರಿತ ಬೇಸರದಲ್ಲಿ ವೃಶ್ಚಿಕ

ಮೇಷ(Aries): ಜವಾಬ್ದಾರಿಗಳನ್ನು ಬದಿಗಿಟ್ಟು ಕೊಂಚ ವಿಶ್ರಮಿಸಲಿದ್ದೀರಿ. ಹಳೆಯ ಸ್ನೇಹಿತರ ನೆನಪು ಕಾಡುವುದು. ಹೊಸ ಸಾಹಸವೊಂದರ ಪೂರ್ವಯೋಜನೆ ಆರಂಭವಾಗುವುದು. ಆರೋಗ್ಯ ಸದೃಢವಾಗಿರುವುದು. ಸೂರ್ಯ ನಮಸ್ಕಾರ ಮಾಡಿ. 

ವೃಷಭ(Taurus): ಈ ರಾಶಿಯ ಅವಿವಾಹಿತರಿಗೆ ಉತ್ತಮ ಸಂಬಂಧಗಳು ಅರಸಿ ಬರುವುವು. ಸಣ್ಣ ಪುಟ್ಟ ತಿರುಗಾಟಗಳ ಖುಷಿ ದೊರೆಯುವುದು. ಪತ್ನಿಯ ಸಹಕಾರ ಚೆನ್ನಾಗಿರಲಿದೆ. ಮಕ್ಕಳ ಜೊತೆ ಹೆಚ್ಚಿನ ಸಮಯ ವ್ಯಯಿಸುವುದರಿಂದ ಚೈತನ್ಯ. ಆದಿತ್ಯ ಹೃದಯ ಪಠಣ ಮಾಡಿ. 

Latest Videos

ಮಿಥುನ(Gemini): ಹೊಸ ಪರಿಚಯಗಳು ಮನಸ್ಸಿಗೆ ಮುದ ನೀಡುವುವು. ಹಾಗೆಯೇ ಹಳೆ ಸ್ನೇಹಿತರ ಭೇಟಿಯಿಂದ ಅಥವಾ ಅವರೊಂದಿಗೆ ಮಾತಿನಿಂದ ಮನಸ್ಸು ಮತ್ತಷ್ಟು ಸಂಭ್ರಮ ಪಡುವುದು. ಮಕ್ಕಳ ಪ್ರಗತಿ ಕುಂದಿದೆ ಎನಿಸಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಕುಲದೇವರ ಸ್ಮರಣೆ ಮಾಡಿ. 

ಕಟಕ(Cancer): ಪ್ರಯಾಣದಿಂದ ಆಯಾಸವಾದರೂ ಸಂತಸ ಹೆಚ್ಚುವುದು. ಸಂಗಾತಿಯೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯುವಿರಿ. ಪಾರಂಪರಿಕ ಉದ್ಯೋಗದಲ್ಲಿ ತೊಡಗಿರುವವರಿಗೆ ಲಾಭ. ನೆಂಟರಿಷ್ಟರ ಭೇಟಿ ಸಾಧ್ಯತೆ. ಆಹಾರ ಸಮೃದ್ಧಿ ಇರಲಿದೆ. ಗಣಪತಿಗೆ ದರ್ಬೆ ಅರ್ಪಿಸಿ. 

ಸಿಂಹ(Leo): ಮಕ್ಕಳ ತಿರುಗು ಮಾತುಗಳು ಚುಚ್ಚಬಹುದು. ಅವರನ್ನು ಹೇಗೆ ತಿದ್ದುವುದು ಎಂಬ ಚಿಂತೆ ಕಾಡಬಹುದು. ಹೊಸದಾಗಿ ಶುರು ಮಾಡಿರುವ ಯೋಜನೆಗಳು ಆತಂಕ ಹೆಚ್ಚಿಸುವುವು. ವೈವಾಹಿಕ ಜೀವನದಲ್ಲಿ ಮೂರನೆಯವರ ಮೂಗು ತೂರಿಸುವಿಕೆ ಸಮಸ್ಯೆಯಾಗುವುದು. ಗೋ ಗ್ರಾಸ ನೀಡಿ.

Personality Traits: ಯಾವ ರಾಶಿಗೆ ಯಾವ ವಿಷಯಕ್ಕೆ ಅಭದ್ರತೆ ಹೆಚ್ಚು ಗೊತ್ತಾ?

ಕನ್ಯಾ(Virgo): ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಇಲ್ಲವೇ ಕುಟುಂಬ ಸದಸ್ಯರ ನಡುವೆ ನಿಮ್ಮ ನಿಲುವು ಪ್ರದರ್ಶಿಸಲು ಅಸಹಾಯಕತೆ ಕಾಡಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಕೊರತೆ ಕಾಣುವುದು. ಅಪರಿಚಿತರ ಕರೆಯಿಂದ ನಿಮ್ಮ ಕೆಲ ನಿರ್ಧಾರ ಬದಲಾಗಬಹುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ಎಷ್ಟೇ ಪ್ರಯತ್ನಿಸಿದರೂ ವಿಷಯಗಳು ನಿಮ್ಮ ಕೈಲಿ ನಿಲ್ಲದೆ ಜಾರಿ ಹೋದಂತೆನಿಸಬಹುದು. ಕೆಲ ಕಾಲ ಸುಮ್ಮನಿರುವುದೇ ಲೇಸು. ಹಠಾತ್ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಧನ್ವಂತರಿ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಯಾವ ಯೋಜನೆಯೂ ಮುಂದೆ ಹೋಗುತ್ತಿಲ್ಲವಲ್ಲ ಎಂಬ ಚಿಂತೆ ಕಾಡುವುದು. ಬದುಕು ನಿಂತ ನೀರಾಗಿದೆ ಎನಿಸಬಹುದು. ವಿದ್ಯಾರ್ಥಿಗಳಿಗೆ ನಿರಾಶೆ ಹೆಚ್ಚುವುದು. ಹತ್ತಿರದ ದೇವಸ್ಥಾನ ಭೇಟಿಯಿಂದ ಮನಸ್ಸು ಕೊಂಚ ನಿರಾಳವಾಗಬಹುದು. ಬಡವರಿಗೆ ದಾನ ಮಾಡಿ. 

Curses of Mahabharata: ಮಹಾಭಾರತದ ನಾಲ್ಕು ಶಾಪಗಳು ಇಂದಿಗೂ ಇವೆಯಂತೆ! ಯಾವುವು ಗೊತ್ತೆ?

ಧನುಸ್ಸು(Sagittarius): ಮಕ್ಕಳ ವಿಚಾರದಲ್ಲಿ ಅತಿಯಾದ ಸಲುಗೆ ಅಥವಾ ಅತಿಯಾಗಿ ಗಂಭೀರರಾಗಿರುವುದು ಒಳ್ಳೆಯದಲ್ಲ. ಸಮತೋಲಿತವಾಗಿ ವರ್ತಿಸಿ. ಹಿರಿಯರೊಂದಿಗಿನ ಮುನಿಸಿಗೆ ವಿದಾಯ ಹಾಡಲು ಅವಕಾಶಗಳು ಒದಗುವುವು. ಸಂಗಾತಿಯ ಸಹಾಯ ದೊರಕುವುದು. ಆದಿತ್ಯ ಹೃದಯ ಪಠಣ ಮಾಡಿ. 

ಮಕರ(Capricorn): ಸಂಶೋಧನಾ ಕ್ಷೇತ್ರದಲ್ಲಿರುವವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯಿಂದ ಮನಸ್ಸು ಮುದಗೊಳ್ಳುವುದು. ತಿರುಗಾಟ ಹೆಚ್ಚುವುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗರೂಕತೆ ಅಗತ್ಯ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕುಂಭ(Aquarius): ಮಕ್ಕಳ ಕಡೆಯಿಂದ ಅವಮಾನ ಎದುರಿಸಬೇಕಾಗಬಹುದು. ಎಲ್ಲವೂ ಸರಿಯಾಯಿತೆಂದುಕೊಂಡಿದ್ದು ಮತ್ತೆ ಹಳ್ಳ ಹಿಡಿದಂತೆನಿಸಬಹುದು. ಮನೆಯ ಕೆಲಸಗಳು ಹೈರಾಣಾಗಿಸಲಿವೆ. ಹಣಕಾಸಿನ ಚಿಂತೆ ಕಾಡುವುದು. ಆಸ್ತಿ ವಿಚಾರವಾಗಿ ಹೆಚ್ಚು ಕೆದಕಲು ಹೋಗಬೇಡಿ. ಸೂರ್ಯನಿಗೆ ಅರ್ಘ್ಯ ಸಲ್ಲಿಸಿ. 

ಮೀನ(Pisces): ಸಂಗಾತಿಯ ಮಾತುಗಳು ಮನಸ್ಸನ್ನು ಘಾಸಿ ಮಾಡಲಿವೆ. ಪ್ರೇಮ ವ್ಯವಹಾರಗಳಲ್ಲಿ ಬಿರುಕು ಮೂಡಬಹುದು. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಮಾತಿನಲ್ಲಿ ಸಹನೆಯಿರಲಿ. ಎಲ್ಲವಕ್ಕೂ ಸಮಯ ನೀಡುವುದೇ ಮುಖ್ಯ ಎಂಬುದನ್ನು ತಿಳಿಯಿರಿ. ಗೋ ಗ್ರಾಸ ನೀಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!