Daily Horoscope: ಸಾಲಬಾಧೆಗೆ ಕಂಗಾಲಾಗುವ ಕನ್ಯಾ, ವೃಷಭಕ್ಕೆ ಶುಭ ದಿನ

By Suvarna NewsFirst Published Mar 21, 2022, 5:04 AM IST
Highlights

21 ಮಾರ್ಚ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನ ರಾಶಿಗೆ ದಿನಾಂತ್ಯಕ್ಕೆ ನೆಮ್ಮದಿ

ಮೇಷ(Aries): ಸ್ವಂತ ವ್ಯಾಪಾರ ಮಾಡುವವರಿಗೆ ಒಳ್ಳೆಯ ಲಾಭವಿದೆ. ಉದ್ಯೋಗದಲ್ಲಿ ಒತ್ತಡ ಹೆಚ್ಚಿರುತ್ತದೆ. ನೀವದನ್ನು ಸಮರ್ಥವಾಗಿ ನಿರ್ವಹಿಸಿ ಸೈ ಎನಿಸಿಕೊಳ್ಳುವಿರಿ. ಜೀವನದಲ್ಲಿ ಹೊಸ ಉತ್ಸಾಹ, ಹುರುಪು ಮೂಡಲಿದೆ. ಹಲವು ಖರ್ಚುಗಳು ಎದುರಾಗುವುವು. ಶಿವ ಸಹಸ್ರನಾಮ ಪಠಣ ಮಾಡಿ. 

ವೃಷಭ(Taurus): ಬಹಳ ಶ್ರದ್ಧೆಯಲ್ಲಿ ಕೆಲಸ ಮಾಡುತ್ತೀರಿ. ಹೊಗಳಿಕೆ, ಬಡ್ತಿ ಸಿಗಬಹುದು. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿ ಮಾಡುವಿರಿ. ಹಲವು ದಿನಗಳಿಂದ ಬಾಕಿ ಇದ್ದ ಕೆಲಸಗಳು ಇಂದು ಮುಕ್ತಾಯ ಹಂತಕ್ಕೆ ಬರಲಿವೆ. ಕೈಕಾಲು ನೋವು ಬಾಧಿಸಲಿವೆ. ಶಿವ ಶಕ್ತಿಯರ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಕಷ್ಟಪಟ್ಟು ಕೆಲಸ ಮಾಡುವಿರಿ. ಹಾಗೇ ಅದೃಷ್ಟವೂ ನಿಮ್ಮ ಕಡೆಗಿದೆ. ಕೆಲಸ ಹುಡುಕುತ್ತಿರುವ ಜನರಿಗೆ ಇಂದು ಶುಭ ಸುದ್ದಿ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯದಿಂದ ಗುರಿ ಸಾಧಿಸುವಿರಿ. ಮಕ್ಕಳು ಪ್ರಶಂಸೆ ಗಳಿಸುವರು. ಹೊಸ ಕಲಿಕೆಯಲ್ಲಿ ತೊಡಗುವರು. ರುದ್ರಾಭಿಷೇಕ ಮಾಡಿಸಿ. 

ಕಟಕ(Cancer): ಕೋಪ ಪದೇ ಪದೆ ಬಂದರೂ ಮೌನದಿಂದ ಅದನ್ನು ನುಂಗಿ ಹಾಕುವಿರಿ. ಕಠಿಣ ಪ್ರಯತ್ನದಿಂದ ಕಾರ್ಯ ಸಿದ್ಧಿಸುವುದು. ಆತ್ಮವಿಶ್ವಾಸ ಜೊತೆಗಿರುವುದು. ಮನೆದೇವರ ಆಶೀರ್ವಾದದಿಂದ ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ(Leo): ಹೆತ್ತವರ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ವಿದ್ಯಾರ್ಥಿಗಳು ಉತ್ತಮ ಪ್ರಗತಿ ಸಾಧಿಸುವರು. ಹಣಕಾಸು ವಿಚಾರವಾಗಿ ಪದೇ ಪದೆ ಸ್ನೇಹಿತರು ಇಲ್ಲವೇ ಕುಟುಂಬ ಸದಸ್ಯರ ಜೊತೆ ಜಗಳ ಉಂಟಾಗಬಹುದು. ಕೌಟುಂಬಿಕ ಸಮಸ್ಯೆಯು ನಿದ್ದೆ ಹಾಳು ಮಾಡಲಿದೆ. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. 

Chanakya Niti: ವಿದ್ಯಾರ್ಥಿ ಜೀವನಕ್ಕೆ ಚಾಣಕ್ಯ ಸೂತ್ರಗಳು..

ಕನ್ಯಾ(Virgo): ಭೂಮಿಯ ವಿಚಾರದಲ್ಲಿ ತೊಂದರೆಗಳು ಉಂಟಾಗಬಹುದು. ಪ್ರಯಾಣದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಆಕಸ್ಮಿಕ ದುರ್ಘಟನೆಗಳು ನಡೆಯಬಹುದು. ಸಾಲ ಬಾಧೆಯಿಂದ ಮಾನಸಿಕ ಕಿರಿಕಿರಿ ಹೆಚ್ಚುವುದು. ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ದಿನ ಸಾಕು ಸಾಕಾಗಿಸುತ್ತದೆ. ಮನೆದೇವರ ಸ್ಮರಣೆ ಮಾಡಿ. 

ತುಲಾ(Libra): ಅನಾರೋಗ್ಯದಿಂದ ಕೆಲಸಗಳು ನಿಧಾನವಾಗಬಹುದು. ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಬಹುದು. ಏಕಾಗ್ರತೆ ಹಾಗೂ ಲಕ್ಷ್ಯದ ಕೊರತೆಯು ನಿಮ್ಮ ಶತ್ರುವಾಗಿ ವರ್ತಿಸಲಿವೆ. ಈ ಗುಣಗಳನ್ನು ಸರಿಪಡಿಸಿಕೊಳ್ಳಿ. ಮಕ್ಕಳ ಸಮಸ್ಯೆಗಳೇನು ವಿಚಾರಿಸಿ. ವಿನಾ ಕಾರಣ ಅವರ ಮೇಲೆ ರೇಗಬೇಡಿ. ಶಿವನಿಗೆ ಭಸ್ಮಾರ್ಚನೆ ಮಾಡಿಸಿ. 

ವೃಶ್ಚಿಕ(Scorpio): ಭೂಮಿ, ಮನೆ ಖರೀದಿಗೆ ಓಡಾಟ ಹೆಚ್ಚಿರುತ್ತದೆ. ಕೆಲಸ ಕಾರ್ಯಗಳು ಚುರುಕಿನಿಂದ ಸಾಗುವುದು. ಬಾಕಿ ಬರಬೇಕಾಗಿದ್ದ ಹಣ ಕೈ ಸೇರಿ ಸಂತೋಷವಾಗುವುದು. ಮನಸ್ಸು ಕೆಲ ವಿಷಯಗಳಿಂದ ಸಂತೋಷ ಅನುಭವಿಸುವುದು. ಆಹಾರ ಸಮೃದ್ಧಿ ಇರಲಿದೆ. ಕುಲದೇವತಾ ಆರಾಧನೆ ಮಾಡಿ. 

ಇಲ್ಲಿ ಹುಟ್ಟೊ ಮಕ್ಕಳಿಗೆ ವರ್ಷಕ್ಕೊಮ್ಮೆ ಮಾತ್ರ ನಾಮಕರಣ!

ಧನುಸ್ಸು(Sagittarius): ಅತಿಯಾದ ಸ್ವಾಭಿಮಾನದಿಂದ, ಕೊಂಚ ಅಹಂಕಾರದಿಂದ ದಾಂಪತ್ಯದಲ್ಲಿ ತೊಂದರೆ ಬರಬಹುದು. ಹೊಸ ವ್ಯವಹಾರಗಳು ಲಾಭ ತರಲಿವೆ. ಕಲೆ ಹಾಗೂ ಪ್ರತಿಭೆಯಿಂದಾಗಿ ಹೆಸರು, ಮನ್ನಣೆ ಗಳಿಸುವಿರಿ. ಉದ್ಯೋಗದಲ್ಲಿ ಉತ್ತಮ ದಿನ. ಶಿವನ ಜಪ ಮಾಡಿ. 

ಮಕರ(Capricorn): ಸ್ವಂತ ಉದ್ಯೋಗದಲ್ಲಿರುವವರಿಗೆ ನಿರೀಕ್ಷೆ ತಕ್ಕ ಲಾಭ ಸಿಗದಿದ್ದರೂ ಸಮಾಧಾನವಿದೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು. ವರ್ಗಾವಣೆ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಲಾಭವಿದೆ. ಸುಬ್ರಹ್ಮಣ್ಯ ಆರಾಧನೆ ಮಾಡಿ. 

ಕುಂಭ(Aquarius): ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ಅನಗತ್ಯವಾದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುವಿರಿ. ಇದರಿಂದ ಸಮಯವೂ ವ್ಯರ್ಥವಾಗುವುದು. ಚಟಗಳು ಆರೋಗ್ಯ ಹಾಳು ಮಾಡುತ್ತಿವೆ, ಎಚ್ಚರ ವಹಿಸಿ. ಸುಬ್ರಹ್ಮಣ್ಯ ಸ್ಮರಣೆ ಮಾಡಿ. 

ಮೀನ(Pisces): ದಿನದ ಆರಂಭ ಚೆನ್ನಾಗಿಲ್ಲವೆನಿಸಿದರೂ ದಿನಾಂತ್ಯಕ್ಕೆ ಸಮಾಧಾನ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ ಆಗಬಹುದು. ಆದರೆ, ಸ್ನೇಹಿತರ ಸಹಕಾರ ಸಿಕ್ಕಿ ಪರಿಹಾರ ಕಂಡುಕೊಳ್ಳುವಿರಿ. ಶಿವ ಶತ ನಾಮಾವಳಿ ಹೇಳಿಕೊಳ್ಳಿ

click me!