Daily Horoscope: ಇಂದು ಈ ರಾಶಿಯವರ EGO ದಾಂಪತ್ಯ ಮುರಿಯಲಿದೆ..!

By Chirag Daruwalla  |  First Published Jul 19, 2023, 5:00 AM IST

ಇಂದು 19ನೇ ಜುಲೈ 2023 ಬುಧವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.


ಮೇಷ ರಾಶಿ  (Aries) :  ಇಂದು ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ, ಇದರಿಂದ ಸಮಯ ವ್ಯರ್ಥ ಆಗಲಿದೆ ಅಷ್ಟೆ. ಇಂದು ನಿಮ್ಮ ಮನಸ್ಸು ಸ್ವಲ್ಪ ವಿಚಲಿತವಾಗಬಹುದು. ಇಂದು ನಿಮಗೆ ಹೆಚ್ಚಿನ ಕೆಲಸ ಇರಬಹುದು. ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಲಾಭ ಇರಲಿದೆ.

ವೃಷಭ ರಾಶಿ  (Taurus): ಇಂದು ತೊಂದರೆಗಳಿಂದ ನಿಮ್ಮ ನಿಕಟ ಸಂಬಂಧಿಯು ನಿಮ್ಮನ್ನು ಪಾರು ಮಾಡುವನು. ಇದರಿಂದ ಕೆಲ ಒತ್ತಡದಿಂದ ನಿಮಗೆ ಮುಕ್ತಿ ಸಿಗಲಿದೆ. ಕುಟುಂಬದ ಸದಸ್ಯರ ವಿವಾಹವು ಮನೆಯಲ್ಲಿ ಸಂತೋಷದ ವಾತಾವರಣವನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ಶಾಂತಿಯ ವಾತಾವರಣ ಇರಲಿದೆ.

Tap to resize

Latest Videos

undefined

ಮಿಥುನ ರಾಶಿ (Gemini) : ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಸೋದರಸಂಬಂಧಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ಪತಿ ಮತ್ತು ಹೆಂಡತಿಯ ನಡುವೆ ಸಾಮರಸ್ಯ ಇರಲಿದೆ.

ಕಟಕ ರಾಶಿ  (Cancer) :  ಇಂದಿನ ದಿನದ ಆರಂಭವು ತುಂಬಾ ಚೆನ್ನಾಗಿರಲಿದೆ. ಇಂದು ವ್ಯಾಪಾರದಲ್ಲಿ ಸ್ವಲ್ಪ ಸ್ಪರ್ಧೆಯನ್ನು ಎದುರಿಸಬಹುದು. ಒಂದು ಒಳ್ಳೆ ಸುದ್ದಿ ಕೇಳಿ ಮನಸಿಗೆ ಆನಂದ ಆಗಲಿದೆ. ಯಾರದೋ ತಪ್ಪು ನಿರ್ಧಾರವು ನಿಮ್ಮನ್ನು ದಾರಿ ತಪ್ಪಿಸಬಹುದು. 

30 ವರ್ಷಗಳ ನಂತರ ಯೋಗ ತಂದ ಶನಿದೇವ; ಈ ಮೂರು ರಾಶಿಯವರು ಇದೀಗ ರಾಜರು..!

 

ಸಿಂಹ ರಾಶಿ  (Leo) : ಇಂದು ದಿನನಿತ್ಯದ ಜೀವನದ ಹೊರತಾಗಿ ಸ್ವಲ್ಪ ಸಮಯವನ್ನು ಸ್ವಯಂ ಅವಲೋಕನದಲ್ಲಿ ಕಳೆಯುವಿರಿ. ಈ ಸಮಯದಲ್ಲಿ ಜೀವನದಲ್ಲಿ ಕೆಲವು ಒಳ್ಳೆಯ ಬದಲಾವಣೆಗಳು ಕಂಡುಬರುತ್ತವೆ. ಯಾವುದೇ ಹಳೆಯ ವಿವಾದಗಳು ಉದ್ಭವಿಸಬಹುದು.

ಕನ್ಯಾ ರಾಶಿ (Virgo) : ಇಂದು ಕೂಡ ಯುವಕರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಈ ರಾಶಿಯವರ ಆರೋಗ್ಯ ಚೆನ್ನಾಗಿರುತ್ತದೆ. ಧ್ಯಾನ ಮಾಡಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಕಾರಾತ್ಮಕ ಜನರೊಂದಿಗೆ ಸಂಪರ್ಕದಲ್ಲಿರುವಿರಿ. ಗ್ರಹಗಳ ಸ್ಥಾನವು ಅನುಕೂಲಕರವಾಗಿದೆ. 

ತುಲಾ ರಾಶಿ (Libra) :  ಇಂದು ನಿಮ್ಮ ಪಾಡಿಗೆ ನೀವು ಇದ್ದು ಬಿಡಿ, ಇತರರ ಕೆಲಸಗಳಲ್ಲಿ ಮೂಗು ತೂರಿಸಬೇಡಿ, ಇದರಿಂದ ನಿಮಗೆ ತೊಂದರೆ ಆಗಲಿದೆ. ಇಂದು ನಿಮ್ಮ ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚಲಿದೆ. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ.

ವೃಶ್ಚಿಕ ರಾಶಿ (Scorpio) :   ಇಂದು ವ್ಯಾಪಾರದಲ್ಲಿ ನಿಮಗೆ ಸ್ಪರ್ಧೆ ಇರಲಿದೆ, ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು.  ಹಾಗೂ ಕೆಲವು ವಿವಾದಗಳು ಉಂಟಾಗಬಹುದು. 
ಗಂಡ ಮತ್ತು ಹೆಂಡತಿ ನಡುವೆ ಕಲಹ ಸಾಧ್ಯತೆ. ಶತ್ರುಗಳಿಂದ ಅಪಾಯ ಸಾಧ್ಯತೆಯಿದೆ. ಜಾಗೃತೆಯಿಂದ ಇರಿ.

ಧನು ರಾಶಿ (Sagittarius):   ಅಹಂಕಾರಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಜಗಳ ಉಂಟಾಗಬಹುದು. ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.  ಈ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿತಿಯು ಗಟ್ಟಿಯಾಗಿ ಇರಲಿ.

ಮಕರ ರಾಶಿ (Capricorn) : ಇಂದು ಸೋಮಾರಿತದಿಂದ ಇರಬೇಡಿ, ಯಾಕೆಂದ್ರೆ ಆಲಸ್ಯವು ನಿಮ್ಮನ್ನು ಆಳುತ್ತದೆ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ಅದನ್ನು ಪೂರೈಸಲು ಮರೆಯದಿರಿ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ.

ಮಂಗಳ-ಶುಕ್ರ ಸಂಯೋಗ; ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

 

ಕುಂಭ ರಾಶಿ (Aquarius):  ಪ್ರಯಾಣ ಮಾಡುವಾಗ ಸುರಕ್ಷತಾ ನಿಯಮಗಳ ಬಗ್ಗೆ ಎಚ್ಚರವಿರಲಿ. ಗ್ಲಾಮರ್‌ಗೆ ಸಂಬಂಧಿಸಿದ ವ್ಯಾಪಾರ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಸ್ತುಗಳು ಈ ಸಮಯದಲ್ಲಿ ಪ್ರಯೋಜನಕಾರಿಯಾಗುತ್ತವೆ.

ಮೀನ ರಾಶಿ  (Pisces): ಇಂದು ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಮಾತನಾಡಬೇಡಿ. ಆತಂಕದ ಪರಿಸ್ಥಿತಿ ಕೂಡ ಸಂಭವಿಸಬಹುದು.

click me!