Daily Horoscope:ಈ ರಾಶಿಗೆ ಇಂದು ಅತೀಯಾದ ಆತ್ಮವಿಶ್ವಾಸದಿಂದ ಹಿನ್ನಡೆ

By Chirag DaruwallaFirst Published Jan 2, 2023, 5:10 AM IST
Highlights

2 ಜನವರಿ 2023, ಸೋಮವಾರ ಕಟಕ ರಾಶಿಗೆ ಹೊಸ ಸಂಪರ್ಕದಿಂದ ಲಾಭ, ಸಿಂಹ ರಾಶಿಗೆ ಉದ್ಯಮ ಬದಲಾವಣೆ ಮಾಡುವ ಯೋಜನೆ 
 

ಮೇಷ(Aries):ವೈಯಕ್ತಿಕ ಕೆಲಸದೊತ್ತಡದಿಂದ ಇಂದು ವೃತ್ತಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ಪತಿ ಹಾಗೂ ಪತ್ನಿ ಮನೆಯಲ್ಲಿನ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಲಿದ್ದೀರಿ. ಆರೋಗ್ಯ ಉತ್ತಮವಾಗಿರಲಿದೆ. ನಿಮ್ಮ ಮನಸ್ಸಿನ ಮಾತನ್ನು ಆಲಿಸಿ. ಯಾವುದೇ ಆತುರದ ನಿರ್ಣಯ ಕೈಗೊಳ್ಳಬೇಡಿ. ನಿಮ್ಮ ಪ್ರಯತ್ನಗಳಿಂದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. 

ವೃಷಭ(Taurus):ಮಕ್ಕಳು ಹಾಗೂ ಯುವಕರು ತಮ್ಮ ಅಧ್ಯಯನ ಹಾಗೂ ವೃತ್ತಿ ಬದುಕಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ರಾಜಕೀಯ ಚಟುವಟಿಕೆಗಳಿಂದ ದೂರವಿರಿ. ವಿದ್ಯಾರ್ಥಿಗಳು ಹಾಗೂ ಯುವಕರು ಅಧ್ಯಯನ ಹಾಗೂ ವೃತ್ತಿ ಬದುಕಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ವೃತ್ತಿ ಜೀವನದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳ ಕಾರ್ಯಚಟುವಟಿಕೆಯನ್ನು ಕಡೆಗಣಿಸಬೇಡಿ.

Latest Videos

ಮಿಥುನ(Gemini):ಸುಖಾಸುಮ್ಮನೆ ಯಾರೊಂದಿಗೂ ಜಗಳ ಅಥವಾ ಇನ್ಯಾವುದೇ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬೇಡಿ. ಇದರಿಂದ ನಿಮಗೆ ನೋವುಂಟಾಗಲಿದೆ. ಉದ್ಯಮದಲ್ಲಿ ಉತ್ತಮ ಲಾಭ ಗಳಿಸಲಿದ್ದೀರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಒತ್ತಡ ಸೃಷ್ಟಿಸುವ ಸನ್ನಿವೇಶಗಳಿಂದ ಆದಷ್ಟು ದೂರವಿರಿ. ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ನಿರ್ವಹಣೆ ಮಾಡುತ್ತೀರಿ.

ಕಟಕ(Cancer):ಹೊಸ ಸಂಪರ್ಕಗಳಿಂದ ನಿಮಗೆ ಲಾಭವಾಗಲಿದೆ. ಸಂಗಾತಿ ಹಾಗೂ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯೋದ್ರಿಂದ ಮನಸ್ಸಿಗೆ ನೆಮ್ಮದಿ. ಆರೋಗ್ಯ ಉತ್ತಮವಾಗಿರಲಿದೆ. ಅಪರಿಚಿತರು ನಿಮಗೆ ಹೊಸ ದಾರಿಯೊಂದನ್ನು ತೋರಿಸಲಿದ್ದಾರೆ. ಮಕ್ಕಳ ವೃತ್ತಿ ಜೀವನಕ್ಕೆ ಸಂಬಂಧಿಸಿ ಸಾಕಷ್ಟು ಯೋಚಿಸುತ್ತೀರಿ. ಅವರ ಆತ್ಮವಿಶ್ವಾಸ ಹೆಚ್ಚಿಸಲು ನಿಮ್ಮ ನೆರವಿನ ಅಗತ್ಯವಿದೆ.

ಸಿಂಹ(Leo):ಅತೀಯಾದ ಆತ್ಮವಿಶ್ವಾಸದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆ. ಸಂವಹನ ನಡೆಸುವಾಗ ಸರಿಯಾದ ಪದಗಳನ್ನು ಬಳಸಿ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಇದು ಸೂಕ್ತವಾದ ಸಮಯ. ಉದ್ಯಮ ಚಟುವಟಿಕೆಗೆ ಸಂಬಂಧಿಸಿದ ನಿಮ್ಮ ಗುರಿಗಳನ್ನು ಪೂರ್ಣಗೊಳಿಸಲು ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯವಿದೆ. ಕುಟುಂಬ ಹಾಗೂ ಉದ್ಯಮ ಸಂಬಂಧಗಳು ಈ ದಿನ ಚೆನ್ನಾಗಿರುತ್ತವೆ.

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ

ಕನ್ಯಾ(Virgo):ಉದ್ಯಮ ಬದಲಾವಣೆ ಮಾಡುವ ಯೋಜನೆಗಳನ್ನು ಚರ್ಚೆ ಮಾಡಬಹುದು. ಪತಿ ಹಾಗೂ ಪತ್ನಿ ನಡುವೆ ವೈಮನಸ್ಸಿನಿಂದ ಸಂಬಂಧದಲ್ಲಿ ಬಿರುಕು ಮೂಡಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ದೂರವಾಗಲಿದೆ. ಬೌದ್ಧಿಕ ಹಾಗೂ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ. ನಿಮ್ಮ ಭವಿಷ್ಯದ ಗುರಿಗಳನ್ನು ಮುಟ್ಟಲು ಸೂಕ್ತವಾದ ವೇದಿಕೆಯೊಂದು ನಿರ್ಮಾಣವಾಗಲಿದೆ.

ತುಲಾ(Libra):ಯಾವುದೇ ಕೆಲಸದಲ್ಲಿ ಅಪಾಯ ತೆಗೆದುಕೊಳ್ಳಲು ಮುಂದಾಗಬೇಡಿ. ಕೆಲಸದ ಸ್ಥಳದಲ್ಲಿ ಇಂದು ಯಾವುದೇ ವಿಶೇಷವಾದ ಯಶಸ್ಸು ಸಿಗೋದಿಲ್ಲ. ನಕಾರಾತ್ಮಕ ಮನೋಭಾವ ಹೊಂದಿರುವ ಜನರಿಂದ ಆದಷ್ಟು ದೂರವಿರಿ. ಸಂಗಾತಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಇಂದು ಖುಷಿಯಿಂದ ಸಮಯ ಕಳೆಯುತ್ತೀರಿ.  ದೈಹಿಕ ಬಲಹೀನತೆ ಕೂಡ ಈ ಬಾರಿ ನಿಮ್ಮನ್ನು ಕಾಡಲಿದೆ. 

ವೃಶ್ಚಿಕ(Scorpio):ತಪ್ಪು ವ್ಯಕ್ತಿಗಳಿಂದ ಈ ಬಾರಿ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ. ಉದ್ಯಮ ಚಟುವಟಿಕೆಗಳು ಮರಳಿ ಹಳಿಗೆ ಬರುವ ಸಾಧ್ಯತೆ. ವೈವಾಹಿಕ ಸಂಬಂಧ ಸಂತಸದಿಂದ ಕೂಡಿರಲಿದೆ. ಉದ್ಯಮ ಚಟುವಟಿಕೆಗಳು ಮರಳಿ ಹಳಿಗೆ ಬರಬೇಕು. ನಿಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳಲಿದೆ. ಸಮತೋಲಿತ ಆಹಾರ ಹಾಗೂ ವ್ಯಾಯಾಮದಿಂದ ಆರೋಗ್ಯ ವೃದ್ಧಿ. 

ಧನುಸ್ಸು(Sagittarius):ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಪ್ರಸಕ್ತ ಸನ್ನಿವೇಶದಲ್ಲಿ ಉದ್ಯಮ ಚಟುವಟಿಕೆಗಳು ಉತ್ತಮಗೊಳ್ಳಲಿವೆ. ನಿಮ್ಮ ಉತ್ತಮ ವರ್ತನೆಯಿಂದ ಜನರ ಮನಸ್ಸನ್ನು ಗೆಲ್ಲುತ್ತೀರಿ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ದಾಂಪತ್ಯ ಜೀವನದಲ್ಲಿ ನಮ್ಮದಿ.

ಮಕರ(Capricorn):ಅಧಿಕ ಒತ್ತಡ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಉದ್ಯಮ ಉತ್ತಮವಾಗಿರಲಿದೆ. ಮನೆಯಲ್ಲಿ ಶಾಂತಿ ಹಾಗೂ ಖುಷಿಯ ವಾತಾವರಣ ನಿರ್ಮಾಣವಾಗಲಿದೆ. ಗಂಟು ನೋವಿನ ಸಮಸ್ಯೆ ಉಲ್ಬಣವಾಗಲಿದೆ. ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಪರಿಹರಿಸಿ.

New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?

ಕುಂಭ(Aquarius):ಸಾಲ ತೆಗೆದುಕೊಳ್ಳುವ ಯೋಚನೆಯಿದ್ದರೆ ಎರಡು ಬಾರಿ ಯೋಚಿಸಿ. ಪ್ರಭಾವಿ ಹಾಗೂ ಅನುಭವಿ ಜನರೊಂದಿಗೆ ಉತ್ತಮ ಸಂಬಂಧ ನಿರ್ಮಾಣ ಮಾಡಲು ಸಮಯ ವ್ಯಯಿಸುತ್ತೀರಿ. ದಂಪತಿಗಳ ನಡುವೆ ವೈಮನಸ್ಸು ಮೂಡಿದರೂ ಅದು ತಕ್ಷಣ ತಿಳಿಯಾಗಲಿದೆ. ಕೆಲಸದ ಸ್ಥಳದಲ್ಲಿ ಇಂದು ನೆಮ್ಮದಿಯ ವಾತಾವರಣ ಇರಲಿದೆ. 

ಮೀನ(Pisces):ವಿದ್ಯಾರ್ಥಿಗಳು ತಮ್ಮ ಗುರಿಯ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ನಿಮ್ಮ ಯೋಜನೆಗಳಲ್ಲಿ ನಿಮ್ಮ ಪತ್ನಿಯನ್ನು ಕೂಡ ತೊಡಗಿಸಿಕೊಳ್ಳಿ. ಕುಟುಂಬದ ಯಾವುದೇ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಸಾಮಾಜಿಕ ಕಾರ್ಯಗಳಿಗೆ ಸ್ವಾರ್ಥರಹಿತವಾದ ಕೊಡುಗೆ ನೀಡುತ್ತಾರೆ. 


 

click me!