ಮನುಷ್ಯ ಜೀವನ ತೆರೆದಿಟ್ಟಪುಸ್ತಕದಂತಿರಬೇಕು ಆಗ ಮಾತ್ರ ಮರಣದ ನಂತರವೂ ಸಮಾಜ ನಿಮ್ಮ ನೆನಪಿಸಿಕೊಳ್ಳಲಿದೆ ಎಂದು ಶ್ರೀರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹರಿಹರ (ಜ.1) : ಮನುಷ್ಯ ಜೀವನ ತೆರೆದಿಟ್ಟಪುಸ್ತಕದಂತಿರಬೇಕು ಆಗ ಮಾತ್ರ ಮರಣದ ನಂತರವೂ ಸಮಾಜ ನಿಮ್ಮ ನೆನಪಿಸಿಕೊಳ್ಳಲಿದೆ ಎಂದು ಶ್ರೀರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರೇಣುಕಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ವರ್ತಕ ದಿವಂಗತ ಕೊಂಡಜ್ಜಿ ತೋಟಪ್ಪನವರ 25ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ ತನ್ನ ಹುಟ್ಟು, ಸಾವಿನ ಮಧ್ಯೆ ಕ್ರಿಯಾಶೀಲತೆಯಿಂದ ದುಡಿಮೆ ಮಾಡಿ ಬದುಕು ಸಾಗಿಸಿ ಸಮಾಜದಲ್ಲಿ ಉತ್ತಮ ಕೆಲಸಗಳ ಮಾಡಿದಾಗ ಮಾತ್ರ ಸಾವಿನ ನಂತರವೂ ಬದುಕಿರುತ್ತಾರೆ. ಈ ದಿಸೆಯಲ್ಲಿ ಕೊಂಡಜ್ಜಿ ತೋಟಪ್ಪನವರ ಸಮಾಜ ಸೇವಾಗುಣಗಳ ಬೆಳೆಸಿಕೊಂಡು ಬಂದಿದ್ದರು ಎಂದು ಹೇಳಿದರು.
ಧರ್ಮ, ಜಾತಿ ಸಂಘರ್ಷದಲ್ಲಿ ಪರಂಪರೆ ಮಾಯ: ರಂಭಾಪುರಿ ಶ್ರೀ
ನಗರದಲ್ಲಿ ನಿರ್ಮಾಣವಾಗಿರುವ ರೇಣುಕಾ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಂಡಜ್ಜಿ ಮನೆತನದ ಸೇವೆ ಅನನ್ಯವಾದ್ದು, ಈ ಸುಂದರ ಭವನದಲ್ಲಿ ಕಳೆದ ವರ್ಷದಿಂದ ಮತ್ತೆ ಆಷಾಢ ಮಾಸದ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಸಭೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕಳೆದ 25 ವರ್ಷದಿಂದ ಹರಿಹರ ನಗರದಲ್ಲಿ ಲಿ.ಉಜ್ಜನಿ ಸಿದ್ಧಲಿಂಗೇಶ್ವರ ಶ್ರೀಗಳ ಪುಣ್ಯಾರಾಧನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ತಟಸ್ಥವಾಗಿರುವ ಈ ಕಾರ್ಯಕ್ರಮ ಪುನರಾರಂಭಿಸಬೇಕಿದೆ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಪಿ ಹರೀಶ್ ಮಾತನಾಡಿ, ರಂಭಾಪುರಿ ಪೀಠವು ಸಮಾಜದಲ್ಲಿ ಧರ್ಮಜಾಗೃತಿ ಕಾರ್ಯಕ್ರಮದಿಂದ ಜನರಲ್ಲಿ ಭಕ್ತಿ ನಿಷ್ಠೆ ಮತ್ತು ಪೂಜೆ ಧಾರ್ಮಿಕ ಮನೋಭಾವನೆಗಳ ಬಿತ್ತುವ ಪರಿಣಾಮ ಅಪಾರ ಭಕ್ತ ಸಮೂಹ ಹೊಂದಿದೆ ಎಂದರು. ನಗರದ ಕೊಂಡಜ್ಜಿ ಮನೆತನದವರು ರಂಭಾಪುರಿ ಪೀಠದ ಪರಮ ಭಕ್ತರಾಗಿದ್ದು, ಶ್ರೀಗಳು ಯಾವುದೇ ಕಾರ್ಯಗಳಿದ್ದರೂ ಈ ಮನೆತನದ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಾರೆ ಎಂದರು.
ಇಳಿ ವಯಸ್ಸಲ್ಲೂ ರಂಭಾಪುರಿ ಶ್ರೀ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ
ಕಡೆನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶ್ರೀ, ಕೊಟ್ರಮ್ಮ ತೋಟಪ್ಪ, ಡಾ. ಸವಿತಾ ಮಹೇಶ್, ರೇಣುಕಾ ಮಂದಿರ ಸಮಿತಿ ಅಧ್ಯಕ್ಷ ಜುಂಜಪ್ಪ ಹೆಗ್ಗಪ್ಪನವರ್, ಎನ್.ಎಚ್.ಪಾಟೀಲ್, ಮೂರ್ಕಲ್ ಜಯಣ್ಣ, ಕೆ.ಟಿ.ಪಂಚಾಕ್ಷರಿ, ಎನ್.ಇ.ಸುರೇಶ್‌ಸ್ವಾಮಿ, ಗುರು ಬಸವರಾಜ್, ಕೆ.ಟಿ. ವೀರೇಂದ್ರ, ಕೆ.ರುದ್ರಮುನಿ, ಅನುಸೂಯ, ಸಮಾಳದ ಚಂದ್ರಶೇಖರ್, ಹಂಸಬಾವಿ ಮೋಹನ್, ಅನ್ನಪೂರ್ಣ, ರೇವಣಸಿದ್ದಯ್ಯ ಹಿರೇಮಠ, ಎಸ್.ಎಂ.ಕೊಟ್ರೇಶ್, ಹಾಲಸ್ವಾಮಿ, ಪ್ರಕಾಶ್, ಕರಿಬಸಪ್ಪ ಕುಂಬಾರ್, ಬಸವೇಶ್ವರ ದೇವಸ್ಥಾನ, ರೇಣುಕಾ ಮಂದಿರದ ಪದಾಧಿಕಾರಿಗಳಿದ್ದರು.