Daily Horoscope: ಸಿಂಹ ರಾಶಿಯ ಕೆಲಸಕ್ಕೆ ದೊಡ್ಡ ಯಶಸ್ಸು ಸಂಭವ

Published : Jan 26, 2022, 07:02 AM IST
Daily Horoscope: ಸಿಂಹ ರಾಶಿಯ ಕೆಲಸಕ್ಕೆ ದೊಡ್ಡ ಯಶಸ್ಸು ಸಂಭವ

ಸಾರಾಂಶ

26 ಜನವರಿ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಾತು ಉಳಿಸಿಕೊಂಡು ಗೌರವಕ್ಕೆ ಪಾತ್ರರಾಗುವ ಕನ್ಯಾ ರಾಶಿ

ಮೇಷ(Aries): ಮನೆ ಬದಲಿಸಬಹುದು. ಕಚೇರಿಯ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಲು ನಿಮ್ಮ ಕಾರ್ಯ ವಿಧಾನ ಬದಲಿಸಿಕೊಳ್ಳುವುದು ಒಳಿತು. ವ್ಯಾಪಾರಿಗಳಿಗೆ ಲಾಭವಿರಲಿದೆ. ಬೆಳ್ಳಿ ಬಂಗಾರದ ಖರೀದಿಗಾಗಿ ಧನವ್ಯಯ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಗಣಪತಿ ಧ್ಯಾನ ಮಾಡಿ. 

ವೃಷಭ(Taurus): ರೈತರು, ವ್ಯಾಪಾರಿಗಳಿಗೆ ಲಾಭ ಚೆನ್ನಾಗಿರಲಿದೆ. ಸ್ವಂತ ಉದ್ಯಮ ಆರಂಭಿಸಿರುವವರಿಗೆ ಸಕಾರಾತ್ಮಕ ಫಲಿತಾಂಶದಿಂದ ಮನಸ್ಸು ನಿರಾಳವಾಗಲಿದೆ. ಆರೋಗ್ಯದಲ್ಲಿ ವಾಯು, ಪಿತ್ತದಂತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಸುವಿಗೆ ಗ್ರಾಸ ನೀಡಿ. 

ಮಿಥುನ(Gemini): ಮಾಡುವ ಕೆಲಸದಲ್ಲಿ ಏಕಾಗ್ರತೆ ನಿಲ್ಲದೆ ಹೊರೆ ಇಳಿಯುತ್ತಿಲ್ಲ ಎನಿಸಬಹುದು. ಹಣದ ವಿಷಯದಲ್ಲಿ ಮೋಸ ಹೋಗುವ ಸಂಭವಗಳಿವೆ. ಜಾಗರೂಕತೆಯಿಂದ ವ್ಯವಹರಿಸಿ. ಬ್ಯಾಂಕ್, ಕೋರ್ಟ್ ಕೆಲಸಗಳು ಮುಂದುವರಿಯದೆ ಕಿರಿಕಿರಿಯಾಗುವುದು. ಗಣಪತಿಗೆ ಕಡಲೆ ನೀಡಿ. 

ಕಟಕ(Cancer): ಕೋಪದಿಂದ ಕೆಲಸ ಹಾಳು ಮಾಡಿಕೊಳ್ಳುವಿರಿ. ಅಸೂಯೆಯಿಂದ ಸಾಧಿಸುವಂಥದ್ದೇನೂ ಇಲ್ಲ. ಆದಷ್ಟು ಪ್ರೀತಿಯಿಂದ ಜನರೊಂದಿಗೆ ವ್ಯವಹರಿಸಲು ಪ್ರಯತ್ನಿಸಿ. ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಬದಲಿಗೆ ಅವರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳಿ. ಲಕ್ಷ್ಮೀವೆಂಕಟರಮಣ ಸ್ಮರಣೆ ಮಾಡಿ. 

ಸಿಂಹ(Leo): ಹಾಕಿದ ಶ್ರಮವೆಲ್ಲವೂ ಸಾರ್ಥಕವೆನಿಸುವ ಭಾವನೆ ಬರಲಿದೆ. ನಿಮ್ಮ ಪಾಡಿಗೆ ನೀವು ಮಾಡಿಕೊಂಡು ಹೋದ ಕೆಲಸಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ಇದರಿಂದ ಆಸ್ತಿ ಖರೀದಿಯತ್ತ ಮನಸ್ಸು ಯೋಚಿಸಲಿದೆ. ಕುಟುಂಬ ವರ್ಗದವರ ಸಹಕಾರ ಇರಲಿದೆ. ಮನೆ ದೇವರ ಸ್ಮರಣೆ ಮಾಡಿ. 

ಕನ್ಯಾ(Virgo): ಹತ್ತಿರದವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಜವಾಬ್ದಾರಿಗಳ ಸರಿಯಾದ ನಿರ್ವಹಣೆಯಿಂದ ಸೈ ಎನಿಸಿಕೊಳ್ಳುವಿರಿ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಹಕ್ಕಿಗಳಿಗೆ ಕಾಳು ತಿನ್ನಿಸಿ.

ತುಲಾ(Libra): ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಮನೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಆಸಕ್ತಿ, ಧನವ್ಯಯ. ಪೋಷಕರ ಭಾವನೆಗಳನ್ನು ಗೌರವಿಸಿ ಮತ್ತು ಮನೆಯ ಕಿರಿಯ ಸದಸ್ಯರೊಂದಿಗೆ ಸೌಮ್ಯವಾಗಿರಿ. ಇರುವೆಗಳಿಗೆ ಸಿಹಿ ತಿನ್ನಿಸಿ. 

ವೃಶ್ಚಿಕ(Scorpio): ದೊಡ್ಡವರ ಮಾರ್ಗದರ್ಶನದಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ನಾನಾ ಕಡೆಗಳಿಂದ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡುಬರುವುದು. ಮನೆಯ ನವೀಕರಣ ಕಾರ್ಯಗಳು, ಸುಣ್ಣ ಬಣ್ಣ ಹೊಡೆಸುವುದು ಮುಂತಾದ ಕೆಲಸಗಳು ನಡೆಯಲಿವೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಧನುಸ್ಸು(Sagittarius): ಉದ್ಯೋಗರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಬಹುದು. ವಿದ್ಯಾರ್ಥಿಗಳು ಸ್ನೇಹದಲ್ಲಿ ಜಗಳವಾಡಿ ಮನಸ್ಸು ಕೆಡಿಸಿಕೊಳ್ಳಲಿದ್ದಾರೆ. ಸ್ನೇಹಿತರ ಸಹಕಾರದಿಂದ ಸಾಲ ತೀರಿಸುವಿರಿ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ.

ಮಕರ(Capricorn): ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆಯಿಂದ ಕಲಿಕೆ. . ವರ್ಗಾವಣೆ ಬಯಸುವವರಿಗೆ ಫಲ ಸಂಭಾವ್ಯತೆ.  ಬಿಡುವಿಲ್ಲದ ದುಡಿಮೆಯಾದರೂ ಧನಲಾಭದಿಂದ ಸಂತೃಪ್ತಿ. ಸಹೋದರರ ಕಡೆಯಿಂದ ಸಹಾಯ. ಬಡವರಿಗೆ ವಸ್ತ್ರ ದಾನ ಮಾಡಿ.

ಕುಂಭ(Aquarius): ಹಿರಿಯರೊಡನೆ ಯಾವುದೇ ವಿಷಯ ವಾದಿಸಲು ಹೋಗದಿರಿ. ಸಮರ್ಥನೆಗೆ ನಿಲ್ಲದೆ ಪ್ರಮಾದ ಒಪ್ಪಿಕೊಳ್ಳುವುದು ಸದ್ಗುಣ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಒಮ್ಮೆ ತಪಾಸಣೆ ಮಾಡಿಸಿ. ಶಿವ- ಪಾರ್ವತಿಯ ಸ್ಮರಣೆ ಮಾಡಿ. 

ಮೀನ(Pisces): ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಥ್ಯ ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಯಾರನ್ನೂ ಪೂರ್ತಿ ನಂಬಬೇಡಿ. ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ