Daily Horoscope: ವೃಶ್ಚಿಕಕ್ಕೆ ತೆಗೆದುಕೊಂಡ ನಿರ್ಧಾರವೇ ಬದಲಾಗುವ ಸಂದರ್ಭ!

By Suvarna News  |  First Published Jan 15, 2022, 5:00 AM IST

15 ಜನವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷ, ವೃಷಭ, ತುಲಾ, ಸಿಂಹಕ್ಕೆ ಸಂತಸ, ನಿಮ್ಮ ರಾಶಿ ಫಲ ಏನಿದೆ ನೋಡಿ..


ಮೇಷ(Aries): ವ್ಯಾಪಾರದಲ್ಲಿ ಕಾಣುವ ಪ್ರಗತಿಯಿಂದಾಗಿ ಆತ್ಮವಿಶ್ವಾಸ ಹೆಚ್ಚಲಿದೆ.  ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ತಮ್ಮ ಬಹು ಕಾಲದ ಆಸೆ ನೆರವೇರುವುದು. ಹಿರಿಯ ವ್ಯಕ್ತಿಗಳ ಪ್ರಭಾವ ಹಾಗೂ ಸಹಕಾರದಿಂದ ವೃತ್ತಿರಂಗದಲ್ಲಿ ಮುನ್ನಡೆ ಸಾಧ್ಯವಾಗಲಿದೆ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಷಭ(Taurus): ಆಸ್ತಿ ಖರೀದಿ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಡುವಿರಿ. ನಿಮ್ಮ ಸ್ಟಾರ್ಟಪ್ ಇತ್ಯಾದಿ ಪುಟ್ಟ ಉದ್ಯಮವಿದ್ದರೆ ದೊಡ್ಡ ಸಂಸ್ಥೆಯೊಂದಿಗೆ ಜಂಟಿ ಒಪ್ಪಂದ ಮಾಡಿಕೊಳ್ಳುವ ಅವಕಾಶಗಳು ಒದಗಿ ಬರಲಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕೊಂಚ ಆತಂಕ ಕಳೆಯಲಿದೆ. ನವಗ್ರಹ ದರ್ಶನ ಮಾಡಿ. 

Tap to resize

Latest Videos

undefined

ಮಿಥುನ(Gemini): ಧೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಕೊಂಚ ಆತಂಕ ಹೆಚ್ಚಿಸಲಿವೆ. ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ಸ್ನೇಹಿತರ ನೆರವಿನಿಂದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ. ರಾಜಕೀಯ ರಂಗದಲ್ಲಿರುವವರು, ಪ್ರಭಾವಿಗಳಿಗೆ ಧನಲಾಭ ಹೆಚ್ಚುವುದು. ಕಪ್ಪು ವಸ್ತ್ರ ದಾನ ಮಾಡಿ. 

ಕಟಕ(Cancer): ಮನೋರಂಜನೆಗಾಗಿ ಹೆಚ್ಚು ಧನ ವ್ಯಯವಾಗುವುದು. ಸ್ನೇಹಿತರ ಭೇಟಿಯಿಂದ ಉಲ್ಲಾಸ. ಪ್ರತಿಭಾ ರಂಗದಲ್ಲಿರುವವರಿಗೆ ವೇದಿಕೆ ದೊರೆಯುವುದು. ಚೆನ್ನಾಗಿ ಬಳಸಿಕೊಂಡರೆ ಅದರಿಂದ ಮುಂದೆ ಲಾಭವಾಗಲಿದೆ. ಮಕ್ಕಳು ಜ್ಞಾನಾರ್ಜನೆಗೆ ಒಲವು ತೋರಲಿದ್ದಾರೆ. ಬಡವರಿಗೆ ಆಹಾರ ನೀಡಿ. 

Burning Of Milk : ಬುಧವಾರದಂದು ಅಪ್ಪಿತಪ್ಪಿಯೂ ಹಾಲು ತಳ ಹೊತ್ತಿಸ್ಬೇಡಿ‍!

ಸಿಂಹ(Leo): ಗೃಹ ಅಗತ್ಯ ಪೀಠೋಪಕರಣಗಳಿಗಾಗಿ ಖರ್ಚು. ಬೆಳ್ಳಿ, ಬಂಗಾರ ಇತರೆ ಆಭರಣ ಉದ್ಯೋಗದಲ್ಲಿರುವವರಿಗೆ ಅಧಿಕ ಲಾಭ. ಬರವಣಿಗೆ ಕ್ಷೇತ್ರದಲ್ಲಿರುವವರಿಗೆ ಪ್ರಶಂಸೆ, ರೈತರಿಗೆ ಹೊಸ ಯಂತ್ರ ಖರೀದಿಯಿಂದ ಸಂತಸ. ಹೊಸ ಹೂಡಿಕೆ ಸಧ್ಯ ಫಲಕಾರಿಯಾಗದು. ಗೋ ಗ್ರಾಸ ನೀಡಿ. 

ಕನ್ಯಾ(Virgo): ಆನ್‌ಲೈನ್ ವಿಷಯಗಳ ಮೂಲಕ ವಂಚನೆಗೆ ಒಳಗಾಗುವ ಸಾಧ್ಯತೆ. ಋಣದ ಚಿಂತೆ ಬಾಧಿಸಲಿದೆ. ಉನ್ನತ ಶಿಕ್ಷಣಕ್ಕೆ ಯತ್ನಿಸುತ್ತಿರುವವರಿಗೆ ಅವಕಾಶಗಳು ಬರಲಿವೆ. ಲೇವಾದೇವಿ ವ್ಯವಹಾರಗಳಲ್ಲಿ ಲಾಭ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ಧನ್ವಂತರಿ ಸ್ಮರಣೆ ಮಾಡಿ. 

ತುಲಾ(Libra): ಪ್ರೇಮ ಪ್ರೀತಿ ವಿಚಾರದಲ್ಲಿ ಸಾಫಲ್ಯ, ಬಹಳ ಸಮಯದಿಂದ ತಪ್ಪಿ ಹೋಗಿದ್ದ ಸಂಬಂಧವೊಂದು ಮತ್ತೆ ಕೂಡಲಿದೆ. ವಾತದಿಂದ ದೇಹಾಯಾಸ. ನಿಮ್ಮ ಕಾರ್ಯಸಾಧನೆಗೆ ಮನಸೋತು ಶತ್ರುಗಳೂ ಮೂಗಿಗೆ ಬೆರಳಿಟ್ಟಾರು. ಸಹೋದರ ವರ್ಗದಿಂದ ಸಂತಸದ ಸುದ್ದಿ ಕಿವಿಗೆ ಬೀಳಲಿದೆ. ಗುರುಹಿರಿಯರನ್ನು ನೆನೆಸಿಕೊಳ್ಳಿ.

Vastu tips: ಅಡುಗೆ ಮನೆಯಲ್ಲಿ ಇವು ಚೆಲ್ಲಿದರೆ ದುರದೃಷ್ಟ ಬೆನ್ನು ಹತ್ತಿದೆ ಎಂದೇ ಅರ್ಥ!

ವೃಶ್ಚಿಕ(Scorpio): ಹಿಂದೆ ತೆಗೆದುಕೊಂಡ ನಿರ್ಧಾರವೊಂದು ತದ್ವಿರುದ್ಧವಾಗಿ ಬದಲಾಗಬಹುದು. ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ. ಎಲ್ಲ ಕೆಲಸಗಳನ್ನು ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಯಿರಿ. ಸಣ್ಣ ವಿಷಯಕ್ಕೆ ಅತಿಯಾಗಿ ಕೊರಗುವುದು ಬಿಟ್ಟರೆ ಮಾತ್ರ ನೆಮ್ಮದಿ ಸಾಧ್ಯ. ತಾಯಿಯ ಕೈಯಿಂದ ಸಕ್ಕರೆ ತಿನ್ನಿಸಿಕೊಳ್ಳಿ. 

ಧನುಸ್ಸು(Sagittarius): ಬಹಳ ಕಾಲದಿಂದ ಎದುರು ನೋಡುತ್ತಿದ್ದ ವಾರ್ತೆಯೊಂದು ಅವಿವಾಹಿತರಿಗೆ ಸಿಕ್ಕು ಸಂತೋಷಕ್ಕೆ ಕಾರಣವಾಗಬಹುದು. ಮನೆಯ ಸದಸ್ಯರನ್ನು ಕೊರೆಯುತ್ತಿರುವ ವಿಚಾರಗಳು ಏನೆಂದು ವಿಚಾರಿಸಿ. ಮಕ್ಕಳು ದಾರಿ ತಪ್ಪುತ್ತಿದ್ದಾರೆಯೇ ಎಂಬ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ. ನವಗ್ರಹ ಇರುವ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಮಂದಗತಿಯಲ್ಲಿ ಸಾಗುವ ಕೆಲಸಗಳಿಂದ ಕಿರಿಕಿರಿ. ವ್ಯಾಪಾರ, ಉದ್ದಿಮೆಗಳಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಆಯ್ಕೆಗಳು ಹೆಚ್ಚಲಿವೆ. ಹೊಸ ಕಲಿಕೆ, ಹೊಸ ಜನರ ಭೇಟಿ ಉಲ್ಲಾಸ ತರಲಿದೆ. ಮನೆಯಲ್ಲಿ ನೆಮ್ಮದಿ ಬೇಕೆಂದರೆ ಮಾತುಕತೆಯಿಂದ ಸಮಸ್ಯೆ ಬಗೆ ಹರಿಸಿಕೊಳ್ಳಲೇ ಬೇಕು. ಮಂಗಗಳಿಗೆ ಬಾಳೆಹಣ್ಣು ತಿನ್ನಿಸಿ.

ಕುಂಭ(Aquarius): ಹೆಚ್ಚಿನ ಜನರ ಭೇಟಿಯಿಂದ ಉಲ್ಲಾಸ. ಆರೋಗ್ಯದ ಬಗ್ಗೆ ಗಮನ ಹೆಚ್ಚಿಸಿ. ದೇಹದಂಡನೆ ಅಗತ್ಯ. ನೆಂಟರಿಷ್ಟರ ಆಗಮನ, ಭಕ್ಷ್ಯ ಭೋಜನ ಸವಿಯುವ ಅವಕಾಶ. ನೀರು, ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಆಂಜನೇಯನಿಗೆ ಕೆಂಪು ವಸ್ತ್ರ ನೀಡಿ. 

ಮೀನ(Pisces): ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ಉದ್ಯೋಗರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರ ಚೆನ್ನಾಗಿ ಸಿಗಲಿದೆ. ಮನೆಯಲ್ಲಿ ಮದುವೆ ಸಂಬಂಧ ಒತ್ತಡ ಹೆಚ್ಚಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 
 

click me!