14 ಜನವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹ ರಾಶಿಗೆ ಆಸ್ತಿ ವಿಚಾರದಲ್ಲಿ ಶುಭ ಫಲ, ನಿಮ್ಮ ರಾಶಿಯ ಫಲವೇನಿದೆ ನೋಡಿ..
ಮೇಷ(Aries): ಗೃಹದಲ್ಲಿ ಹಿರಿಯರ ಆರೋಗ್ಯ ಸಮಸ್ಯೆಗಳು ಆತಂಕ ತರಬಹುದು. ಸಾಂಸಾರಿಕವಾಗಿ ಕಿರಿಕಿರಿ ಎನಿಸಿದರೂ ಹೊಂದಿಕೊಂಡು ಹೋಗುವ ನಡೆಯೇ ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವೇ ಸಿಗಲಿದೆ. ಆದಿತ್ಯ ಹೃದಯ ಪಠಿಸಿ.
ವೃಷಭ(Taurus): ವಿರೋಧಿಗಳ ಕುಚೋದ್ಯದಿಂದ ನ್ಯಾಯಾಲಯಕ್ಕೆ ಎಡ ತಾಕುವಂತಾಗಬಹುದು. ಮನೆಯಲ್ಲಿ ಪತ್ನಿ, ಮಕ್ಕಳಿಂದ ಬುದ್ಧಿ ಮಾತು ಕೇಳಬೇಕಾಗಿ ಬರುವುದು. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳ ಕಡೆಯಿಂದ ಆಪಾದನೆ ಕೇಳಿ ಬರುವುದು. ದೇವತಾರಾಧನೆಯಿಂದ ಒಳಿತಾಗುವುದು.
undefined
ಮಿಥುನ(Gemini): ಮನೆಯ ಹಬ್ಬದ ಸಂಭ್ರಮ ಮನಸ್ಸನ್ನೂ ತುಂಬಲಿದೆ. ಕೆಲಸಕ್ಕೂ ರಜೆ ಸಿಕ್ಕು ಸಂತೋಷವಾಗಿ ಕುಟುಂಬ ಸದಸ್ಯರೊಂದಿಗೆ ದಿನ ಕಳೆಯುವಿರಿ. ಪರಿಚಿತರಿಂದ ಶುಭ ಸುದ್ದಿಯೊಂದು ನಿಮ್ಮನ್ನರಸಿ ಬರಲಿದೆ. ಯಾರಿಗೂ ಸಾಲ ನೀಡಬೇಡಿ. ಸೂರ್ಯ ನಮಸ್ಕಾರ ಮಾಡಿ ದಿನ ಆರಂಭಿಸಿ.
ಕಟಕ(Cancer): ಉದಾಸೀನದಲ್ಲಿ ದಿನ ದೂಡುವಿರಿ. ಅಧಾರ್ಮಿಕ ನಡೆಯಿಂದ ಪಶ್ಚಾತ್ತಾಪ ಪಡುವಂತಾಗಬಹುದು. ಕೆಲ ದುಡುಕಿನ ಕೆಲಸಗಳಿಂದ ಮನಸ್ಸಿನ ನೆಮ್ಮದಿ ಕಳೆದುಕೊಳ್ಳಲಿರುವಿರಿ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಸೂರ್ಯನಿಗೆ ಅರ್ಘ್ಯ ಬಿಡಿ.
ಸಿಂಹ(Leo): ದೂರದ ಕ್ಷೇತ್ರಗಳ ದರ್ಶನ ಭಾಗ್ಯ ದೊರೆತು ಸಮಾಧಾನ ದೊರೆಯುವುದು. ಸಾಮಾಜಿಕ ಚಟುವಟಿಕೆಗಳಿಂದ ಮನಸ್ಸು ಆಹ್ಲಾದಕರವಾಗುವುದು. ನೂತನ ಗೃಹ ನಿರ್ಮಾಣಕ್ಕೆ ಸಕಾಲ. ಆಸ್ತಿ ಖರೀದಿ ಮಾಡಬಹುದು. ಆಸ್ತಿ ಮಾರಾಟ ವಿಷಯದಲ್ಲಿ ಶುಭ ಫಲವಿರಲಿದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
Name Brings Luck: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು
ಕನ್ಯಾ(Virgo): ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ಅಗತ್ಯ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡು ಬಂದು ಆರ್ಥಿಕ ಅಭಿವೃದ್ಧಿ ಕಾಣಲಿದ್ದೀರಿ. ಪ್ರೀತಿ ಪಾತ್ರರ ಸಮಾಗಮ ಆಗುವುದು. ಶನಿ ಸ್ಮರಣೆ ಮಾಡಿ.
ತುಲಾ(Libra): ವಿವಾಹ ಸಿದ್ಧತೆಯಲ್ಲಿರುವವರಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ. ಆತ್ಮವಿಶ್ವಾಸ, ಸ್ವಪ್ರಯತ್ನದಲ್ಲಿ ನಂಬಿಕೆ ಇಡಿ. ನಿರುದ್ಯೋಗಿಗಳಿಗೆ ಅನೇಕ ಅವಕಾಶಗಳು ಅರಸಿ ಬರಲಿವೆ. ನಿರೀಕ್ಷಿತ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಧನ ವ್ಯಯವಿದೆ. ಶಿವ ಶಕ್ತಿಯರ ಸ್ಮರಣೆ ಮಾಡಿ.
ವೃಶ್ಚಿಕ(Scorpio): ಕೆಲವು ವೈಯಕ್ತಿಕ ಸಮಸ್ಯೆಗಳಿಗೆ ಕುಟುಂಬ ಸದಸ್ಯರಿಂದ ಪರಿಹಾರ ಸಿಗಲಿದೆ. ಕಾಲ ಬರಲಿ ಎಂದು ಎಲ್ಲಕ್ಕೂ ಕಾಯುತ್ತಾ ಕೂರಬೇಡಿ. ನಿಮ್ಮ ಪರಿಶ್ರಮವಿಲ್ಲದೆ ಏನೊಂದೂ ಸಿದ್ಧಿಸದು. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಬೇಕು. ಶೇರಿನಲ್ಲಿ ಲಾಭವಿದೆ. ಮಹಾಲಕ್ಷ್ಮೀ ಅಷ್ಟೋತ್ತರ ಪಠಿಸಿ.
Vastu tips : ಈ ದಿನದಂದು ಪಾದರಕ್ಷೆ ಖರೀದಿಸಿದರೆ ಭಾರೀ ನಷ್ಟ ಸಂಭವಿಸಬಹುದು ಎಚ್ಚರ!
ಧನುಸ್ಸು(Sagittarius): ನಿಮ್ಮ ಸಾಮರ್ಥ್ಯ ವೃದ್ಧಿಯಾಗಲಿದೆ. ಮನೆಯ ಸದಸ್ಯರ ಅನಾರೋಗ್ಯ ಗುಣವಾಗಲಿದ್ದು ನೆಮ್ಮದಿ ದೊರಕಲಿದೆ. ವಿರೋಧಿಗಳ ಉಪದ್ರವ ಕಡಿಮೆಯಾಗಲಿದೆ. ಕೆಲವೊಂದು ವಿಷಯಕ್ಕೆ ಮೌನ ಒಳಿತಾದರೆ ಮತ್ತೆ ಕೆಲವಕ್ಕೆ ಮಾತೇ ಬೇಕು. ನಿಮ್ಮ ವಿರೋಧಿಗಳಿಗೆ ಖಡಕ್ ಮಾತಿನ ಪ್ರತ್ಯುತ್ತರ ನೀಡಿ. ಸೂರ್ಯನಿಗೆ ಅರ್ಗ್ಯ ಬಿಡಿ.
ಮಕರ(Capricorn): ವೈವಾಹಿಕ ಪ್ರಸ್ತಾಪಗಳು ಮುಂದುವರಿದ ಹಂತ ಪಡೆಯಲಿವೆ. ಬರಹಗಾರರು, ಕಲಾವಿದರಿಗೆ ಸೂಕ್ತ ಗೌರವ ದೊರೆಯಲಿದೆ. ಮಾಡುವ ಕೆಲಸದಲ್ಲಿ ಶಿಸ್ತು, ಸಂಯಮವಿದ್ದರೆ ಯಶಸ್ಸು ಖಚಿತ. ನಿಮ್ಮ ಜೊತೆಯಿರುವವರ ಮೋಸ ಬಯಲಾಗಲಿದೆ. ಲಲಿತಾ ಸಹಸ್ರನಾಮ ಶ್ರವಣ ಮಾಡಿ.
ಕುಂಭ(Aquarius): ನೀವು ಆರಂಭಿಸಿದ ಯೋಜನೆಯಲ್ಲಿ ಇತರರ ಹಸ್ತಕ್ಷೇಪದಿಂದ ವೃಥಾ ತಪ್ಪುಗಳಾಗಬಹುದು. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ ಫಲ. ಸುಖಾಸುಮ್ಮನೆ ಕೋಪ, ಆವೇಶದ ಮಾತುಗಳಿಂದ ಯಾವುದೇ ಧನಾತ್ಮಕ ಫಲ ಸಾಧ್ಯವಿಲ್ಲ. ತಾಳ್ಮೆ, ಸಂಯಮ ಅಗತ್ಯ. ಲಿಂಗಾಸ್ಟಕ ಸ್ತ್ರೋತ್ರ ಪಠಿಸಿ.
ಮೀನ(Pisces): ನಿಮ್ಮೆದುರು ಬರುವ ಅವಕಾಶದ ಬಗ್ಗೆ ಹೆಚ್ಚಾಗಿ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಮುಂದುವರಿಯಿರಿ. ಸಾಂಸಾರಿಕ ಜೀವನದಲ್ಲಿ ಸಮಾಧಾನ ಇರಲಿದೆ. ವಿಲಾಸೀ ಜೀವನಕ್ಕಾಗಿ ಹೆಚ್ಚಿನ ಧನವ್ಯಯ ಮಾಡುವಿರಿ. ಏಜೆಂಟರು, ಗುತ್ತಿಗೆದಾರರಿಗೆ ಲಾಭ. ದುರ್ಗಾ ಸ್ತ್ರೋತ್ರ ಪಠಿಸಿ.