Daily Horoscope ಈ ರಾಶಿಗೆ ಆರೋಗ್ಯ ಸಮಸ್ಯೆ, ತಡ ಮಾಡದೆ ತಪಾಸಣೆ ಮಾಡಿಸಿ

Published : Dec 11, 2021, 05:12 AM IST
Daily Horoscope ಈ ರಾಶಿಗೆ ಆರೋಗ್ಯ ಸಮಸ್ಯೆ, ತಡ ಮಾಡದೆ ತಪಾಸಣೆ ಮಾಡಿಸಿ

ಸಾರಾಂಶ

11 ಡಿಸೆಂಬರ್ 2021, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಬದಲಾವಣೆ ಅಗತ್ಯ? ಮಿಥುನ, ಕಟಕ ರಾಶಿಯವರು ಹರಕೆಗಳನ್ನು ಉಳಿಸಿಕೊಳ್ಳಬೇಡಿ

ಮೇಷ(Aries): ವ್ಯಾಪಾರದಲ್ಲಿ ಒತ್ತಡ ಹೆಚ್ಚಿದ್ದರೂ ಲಾಭ ಚೆನ್ನಾಗಿರಲಿದೆ. ಮಕ್ಕಳ ಸಮಸ್ಯೆ ಬಗೆಹರಿದು ನಿರಾಳವೆನಿಸುವುದು. ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗದಿಂದ ಹೆಚ್ಚುವ ನೆಮ್ಮದಿ. ಗಣಪತಿಗೆ ದರ್ಬೆ ಅರ್ಪಿಸಿ. 

ವೃಷಭ(Taurus): ಹೋಟೆಲ್ ವ್ಯವಹಾರದಲ್ಲಿ ಲಾಭ, ವಾಹನ ಬಿಡಿ ಭಾಗಗಳ ವ್ಯಾಪಾರ, ಲೋಹದ ವ್ಯಾಪಾರ, ವಸ್ತ್ರ, ವಾಹನ ವ್ಯಾಪಾರದಲ್ಲಿ ಲಾಭ. ಸ್ನೇಹಿತರ ಭೇಟಿಯಿಂದ ಸಂತಸ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ಮಿಥುನ(Gemini): ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿದ್ದರೆ ಒಳ್ಳೆಯದು. ಆಸ್ತಿ ಖರೀದಿಯಿಂದ ಮನೆಯಲ್ಲಿ ಸಂಭ್ರಮ. ದೂರ ಪ್ರಯಾಣದಿಂದ ಕಾರ್ಯಾನುಕೂಲವಾಗುವುದು. ಹರಕೆಗಳಿದ್ದರೆ ತೀರಿಸಲು ಇದು ಶುಭ ದಿನ. ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. 

ಕಟಕ(Cancer): ಹರಕೆಗಳಿದ್ದರೆ ಶೀಘ್ರ ಈಡೇರಿಸಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ವೃತ್ತಿ ಸಂಬಂಧ ಸಂಶಯಗಳಿದ್ದರೆ, ಗೊಂದಲದಲ್ಲಿದ್ದರೆ, ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುವುದೇ ಉತ್ತಮ. ಶನಿಸ್ಮರಣೆ ಮಾಡಿ. 

Story of Ravana: ಸಂಜೆ ಸಮಯದಲ್ಲಿ ಸಂಭೋಗಿಸಿದರೆ ಮಕ್ಕಳು ರಾಕ್ಷಸರಾಗುತ್ತಾರಾ?

ಸಿಂಹ(Leo): ಮನರಂಜನಾ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂತೋಷ. ಉದಾಸೀನತೆಯೂ ಕಾಡಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ಜಾಗರೂಕರಾಗಿರಿ. ನಿಮ್ಮ ಮನೋಭಾವಕ್ಕೆ ಕುಟುಂಬವರ್ಗದಿಂದ ವಿರೋಧಗಳು ಕೇಳಿಬರಬಹುದು. ಆಂಜನೇಯನ ಸ್ಮರಣೆ ಮಾಡಿ. 

ಕನ್ಯಾ(Virgo): ಈ ಅವಧಿಯಲ್ಲಿ, ನೀವು ಕೌಟುಂಬಿಕ ಸೌಕರ್ಯಗಳ ಸಲುವಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ, ಹೆಚ್ಚು ಜಾಗರೂಕರಾಗಿರಿ. ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. 

ತುಲಾ(Libra): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸಿ ಅಚ್ಚರಿ ಮೂಡಿಸುವುದು. ಇದೊಂಥರಾ ಅದೃಷ್ಟದ ದಿನ. ವಿವಾಹಾಕಾಂಕ್ಷಿಗಳಿಗೆ ಶುಭ ಸಂಬಂಧ ಕೂಡಿ ಬರಲಿದೆ. ವ್ಯಾಪಾರದಲ್ಲಿ ಲಾಭ. ಶತ್ರುಪೀಡೆ ಕಡಿಮೆಯಿರುವುದರಿಂದ ಮಾನಸಿಕ ನೆಮ್ಮದಿ. ಕುಲದೇವರ ಸ್ಮರಣೆ ಮಾಡಿ. 

Career and Zodiacs: ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್ ತಿಳ್ಕೊಳಿ..

ವೃಶ್ಚಿಕ(Scorpio): ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ, ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ, ಆಕಸ್ಮಿಕ ಪ್ರವಾಸದಿಂದ ಅನಾರೋಗ್ಯ ಕಾಡಲಿದೆ. ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗ. ಉದ್ಯೋಗಿಗಳಿಗೆ ಸಂತಸ. ಅಮ್ಮನವರಿಗೆ ಅರಿಶಿನ ಕುಂಕುಮ ಏರಿಸಿ ಲಲಿತಾ ಸಹಸ್ರನಾಮ ಪಠಿಸಿ.

ಧನುಸ್ಸು(Sagittarius): ನೆಂಟರಿಷ್ಟರ ಆಗಮನದಿಂದ ಸಂತಸ, ಅನಿರೀಕ್ಷಿತ ಧನಲಾಭ, ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ದೊರಕುವುದು. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದುಕೊಂಡು ಮುಂದುವರಿಯುವುದರಿಂದ ಭವಿಷ್ಯದಲ್ಲಿ ಒಳಿತಾಗಲಿದೆ. ವಿಷ್ಣು ಸಹಸ್ರನಾಮ ಶ್ರವಣ ಮಾಡಿ. 

ಮಕರ(Capricorn): ಬಾಕಿ ಇರಿಸಿದ ಹಿಂದಿನ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಮನೆಯಿಂದ ಬೇಡದ ವಸ್ತುಗಳನ್ನು ಹೊರಗೆ ದಾಟಿಸಿ. ಕೌಟುಂಬಿಕವಾಗಿ ಉತ್ತಮ ಸಹಕಾರ ಸಿಕ್ಕಿ ಕೆಲಸಗಳು ಮುಂದುವರಿಯಲು ಸಾಧ್ಯವಾಗುತ್ತದೆ. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆಯಿಂದ ಒಳಿತಾಗುವುದು. 

ಕುಂಭ(Aquarius): ವ್ಯಾಪಾರದಲ್ಲಿ ನಷ್ಟ. ಪಾಲುದಾರಿಕೆ ವ್ಯವಹಾರ ಮಾಡುವಾಗ ಎಚ್ಚರ ಅಗತ್ಯ. ಅವಮಾನಕರ ಘಟನೆಗಳು ಜರುಗುವ ಸಾಧ್ಯತೆ. ಸ್ತ್ರೀಪೀಡೆ, ಗೃಹಚಿಂತೆಗಳು ಕಂಗಾಲಾಗಿಸಲಿವೆ. ದಾಂಪತ್ಯದಲ್ಲಿ ತಾಳ್ಮೆ, ಸಹನೆ ಮರೆಯದಿರಿ. ನವಗ್ರಹಕ್ಕೆ ಸುತ್ತು ಬನ್ನಿ. 

ಮೀನ(Pisces): ರೈತರಿಗೆ ಲಾಭ ದೊರಕುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ. ರಾಜಕೀಯ, ಶೈಕ್ಷಣಿಕ ರಂಗದಲ್ಲಿರುವವರಿಗೆ ಅನಿರೀಕ್ಷಿತ ಸುದ್ದಿ ಕೇಳಿಬರುವುದು. ವಿವಾಹಾದಿ ಶುಭಕಾರ್ಯಗಳ ಯತ್ನಕ್ಕೆ ಪುಷ್ಠಿ. ತಿರುಗಾಟದಿಂದ ಉಲ್ಲಾಸ. ಹವ್ಯಾಸಗಳಿಂದ ಸಂತಸ. ಹಸುವಿಗೆ ಹುಲ್ಲು ತಿನ್ನಿಸಿ.
 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ