Daily Horoscope: ಮೇಷಕ್ಕೆ ಕಾರ್ಯಸಿದ್ಧಿ, ವೃಶ್ಚಿಕಕ್ಕಿದೆ ಸಂತಸದ ಸುದ್ದಿ

By Suvarna NewsFirst Published Apr 4, 2022, 5:04 AM IST
Highlights

4 ಏಪ್ರಿಲ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಯವರು ವಂಚನೆಗೊಳಗಾಗುವ ಸಾಧ್ಯತೆ

ಮೇಷ(Aries): ಹೆಚ್ಚಿನ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಿತ್ರರೇ ನಿಮಗೆ ಬಲವಾಗಿ ಇರುವರು. ದೂರ ಸಂಚಾರದಲ್ಲಿ ನಿರೀಕ್ಷಿತ ಕಾರ್ಯಗಳು ನೆರವೇರಲಿವೆ. ಆಯಾಸ ಹೆಚ್ಚುವುದರಿಂದ ಕೋಪ ಹೆಚ್ಚಬಹುದು. ದಾಂಪತ್ಯದಲ್ಲಿ ನೀವೇ ಸೋತರೆ ಸಂಬಂಧ ಗೆಲ್ಲುವುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ವೃಷಭ(Taurus): ಕಾರ್ಮಿಕ ವರ್ಗದವರಿಗೆ ಲಾಭದ ದಿನವಾಗಿದೆ. ಗೃಹದಲ್ಲಿ ಅಭಿವೃದ್ದಿ ಅನುಭವಕ್ಕೆ ಬರಲಿದೆ. ವಾಹನ ಸಂಚಾರದಲ್ಲಿ ಸಮಸ್ಯೆಗಳು ತೋರಬಹುದು. ಶೀತ, ಕಫ ಬಾಧೆ ಇರಲಿದೆ. ಮಕ್ಕಳ ಅನಾರೋಗ್ಯ ನೆಮ್ಮದಿ ಕೆಡಿಸಬಹುದು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ. 

Latest Videos

ಮಿಥುನ(Gemini): ಚಾಡಿಕೋರರ ಕೆಟ್ಟ ಮಾತುಗಳನ್ನು ಕೇಳಿ ಅಹಿತವಾಗುವುದು. ಕೆಟ್ಟ ಜನರ ಸಂಪರ್ಕದಿಂದ ದೂರವಿರಿ. ಕೋರ್ಟ್, ಕಚೇರಿ ವ್ಯವಹಾರಗಳು ವಿಳಂಬವಾಗಿ ಸಾಕಷ್ಟು ಧನನಷ್ಟವಾಗಲಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಶಿವ ಶತನಾಮಾವಳಿ ಹೇಳಿಕೊಳ್ಳಿ.

ಕಟಕ(Cancer): ಬೆಟ್ಟದಂತೆ ಬಂದ ಕಷ್ಟವೊಂದು ಬೆಣ್ಣೆಯಂತೆ ಕರಗಿ ಹೋಗುವುದು ಅನುಭವಕ್ಕೆ ಸಿಗಲಿದೆ. ತೋಟಗಾರಿಕೆ ಇತ್ಯಾದಿ ಕೃಷಿ ವ್ಯವಸಾಯದಲ್ಲಿ ಉನ್ನತಿ ಇರಲಿದೆ. ವ್ಯಾಪಾರಸ್ಥರಿಗೆ ಅಲ್ಪ ಲಾಭ. ಮನೆಯಲ್ಲಿ ಹಿರಿಯರಿದ್ದರೆ ಅವರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿ. ಸುಬ್ರಹ್ಮಣ್ಯನಿಗೆ ಸೇವೆ ಮಾಡಿಸಿ. 

ಸಿಂಹ(Leo): ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಹೆಚ್ಚಲಿವೆ. ವೈವಾಹಿಕ ಸಂಬಂಧಗಳು ಕೂಡಿ ಬರಲಿವೆ. ಅಮೂಲ್ಯ ವಸ್ತುಗಳನ್ನು ಖರೀದಿಸಲಿರುವಿರಿ. ಆರೋಗ್ಯ ಚೆನ್ನಾಗಿರುವುದು. ಸ್ತ್ರೀಯರಿಗೆ ಸಕಲ ಕಾರ್ಯ ಸಿದ್ಧಿ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಿ. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. 

ಕನ್ಯಾ(Virgo): ನಿಮ್ಮ ಒಳ್ಳೆಯತನವನ್ನು ಸ್ನೇಹಿತರು, ಕುಟುಂಬದ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗ್ರತೆ ವಹಿಸಿ. ಋಣಾತ್ಮಕ ಚಿಂತನೆಯಿಂದ ಭಿನ್ನಾಭಿಪ್ರಾಯ, ಕಲಹ ಹೆಚ್ಚಲಿವೆ. ದೊಡ್ಡ ಯೋಜನೆಗಳಲ್ಲಿ ವಂಚನೆಗೊಳಗಾಗುವ ಸಾಧ್ಯತೆ ಇದೆ. ಶಿವ ಸ್ಮರಣೆ ಮಾಡಿ.

Ramnavami 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?

ತುಲಾ(Libra): ಧನಲಾಭ ಹೆಚ್ಚಿದ್ದರೂ ಉಳಿತಾಯದ ಕಡೆ ಗಮನ ಹರಿಸಿ. ಮಾತುಗಾರಿಕೆಯಿಂದ ಲಾಭವಿರಲಿದೆ. ಹೊಸ ಕಾರ್ಯ ಕೈಗೊಳ್ಳಲು ಸಕಾಲ. ಅತಿ ಶ್ರಮದಿಂದ ಅನಾರೋಗ್ಯ ಸಂಭವ, ಕೌಟುಂಬಿಕವಾಗಿ ನೆಮ್ಮದಿ ಇರಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ಪ್ರಯತ್ನಬಲದಿಂದ ಉತ್ತಮ ಪ್ರಗತಿ. ಬಂಧುಗಳ ಕಡೆಯಿಂದ ಸಂತಸದ ಸುದ್ದಿ. ಹೊಸ ವ್ಯವಹಾರಗಳು ಲಾಭ ತಂದುಕೊಡಲಿವೆ. ಕ್ರೀಡಾಪಟುಗಳಿಗೆ ವಾಹನ ಖರೀದಿ ಯೋಗ. ವಿದ್ಯಾರ್ಥಿಗಳು ಪರಿಶ್ರಮ ಹೆಚ್ಚಿಸಲೇಬೇಕು. ದಾಂಪತ್ಯದಲ್ಲಿ ಕಿರಿಕಿರಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಧನುಸ್ಸು(Sagittarius): ವೈವಾಹಿಕ ಜೀವನದಲ್ಲಿ ಭಾಗ್ಯೋದಯ. ನಾನಾ ರೀತಿಯ ಅಡೆತಡೆಗಳು ಬಾಧಿಸಿದರೂ ನಿಮ್ಮ ದೃಢ ನಿಶ್ಚಯದ ಮನೋಭಾವನೆಯಿಂದ ಅಭಿವೃದ್ಧಿಹೆಚ್ಚುವುದು. ಶತ್ರುಗಳು ಹೇಳಹೆಸರಿಲ್ಲದಂತಾಗುವರು. ಅಲ್ಪಪ್ರವಾಸದಿಂದ ಕಾರ್ಯ ಸಿದ್ಧಿ. ಗೋ ಗ್ರಾಸ ನೀಡಿ. 

ಮಕರ(Capricorn): ಸಂಗಾತಿಯ ಆರೋಗ್ಯದ ಏರುಪೇರು ಕಂಗಾಲಾಗಿಸಬಹುದು. ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿ. ವಿನಾಕಾರಣ ಪರಿಚಿತರೊಡನೆ ಭಿನ್ನಾಭಿಪ್ರಾಯ ಹೆಚ್ಚಬಹುದು. ಅವಿವಾಹಿತರಿಗೆ ನಿರಾಸೆ. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ ಹೆಚ್ಚಲಿದೆ. ಬಡವರಿಗೆ ದಾನ ನೀಡಿ. 

ಯುಗಾದಿಯಿಂದ ಹನುಮ ಜಯಂತಿವರೆಗೆ- Aprilನ ಹಬ್ಬ ಹರಿದಿನಗಳಿವು..

ಕುಂಭ(Aquarius): ಪಾಲುಗಾರಿಕೆ ಕೆಲಸಗಳಲ್ಲಿ ಅತೃಪ್ತಿ ಹೆಚ್ಚಲಿದೆ. ವಾಹನಗಳು ದುರಸ್ತಿಗೆ ಬಂದು ಖರ್ಚು ಹೆಚ್ಚು. ವಾಸಸ್ಥಳ ಬದಲಾವಣೆ ಸಂಭವ. ಕಚೇರಿ ಕೆಲಸಗಳಲ್ಲಿ ಮಹತ್ತರ ಬದಲಾವಣೆ ಅಸಮಾಧಾನ ತರಬಹುದು. ಅತಿ ಖರ್ಚಿನಿಂದ ಚಿಂತೆ. ಮನೆದೇವರ ಪ್ರಾರ್ಥನೆ ಮಾಡಿ. 

ಮೀನ(Pisces): ಆರ್ಥಿಕ ವಿಚಾರದಲ್ಲಿ ಅನಾನುಕೂಲತೆ ಹೆಚ್ಚಲಿದೆ. ಸ್ಥಳ ಬದಲಿ ಸಂಭವವಿದೆ. ಹಳೆ ಮಿತ್ರರು ಭೇಟಿಯಾಗಲಿದ್ದಾರೆ. ವೈದ್ಯರಿಗೆ ವೃತ್ತಿಯಲ್ಲಿ ವಿರೋಧ ಹೆಚ್ಚಬಹುದು. ಆರೋಗ್ಯ ಚೆನ್ನಾಗಿರಲಿದೆ. ಹೊಸ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಶಿವ ಶತನಾಮಾವಳಿ ಹೇಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!