Daily Horoscope: ವೃಷಭಕ್ಕೆ ಬಿಕ್ಕಟ್ಟು ಶಮನ, ವೃಶ್ಚಿಕಕ್ಕೆ ಒಂಟಿತನ

By Suvarna NewsFirst Published Apr 19, 2022, 5:00 AM IST
Highlights

19 ಏಪ್ರಿಲ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನಕ್ಕೆ ಕುಟುಂಬದಲ್ಲಿ ಮಗುವಿನ ಆಗಮನ

ಮೇಷ(Aries): ಸಾಲಗಳು ತೀರಲಿವೆ. ಹೆಚ್ಚು ಏರಿಳಿತವಿಲ್ಲದ ದಿನ. ಆರಾಮಾಗಿ ಸಾಗಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವಿರಲಿದೆ. ಸ್ವ ಉದ್ಯಮಗಳಲ್ಲಿ ಆದಾಯ ಹೆಚ್ಚಲಿದೆ. ವಿದೇಶ ಪ್ರಯಾಣ ಯೋಗವಿದೆ. ಪ್ರವಾಸ ಯೋಜನೆಯನ್ನು ಸಿದ್ಧಪಡಿಸಬಹುದು. ಆಂಜನೇಯ ಸ್ಮರಣೆ ಮಾಡಿ. 

ವೃಷಭ(Taurus): ಎಲ್ಲದಕ್ಕೂ ಕಾಲ ಬರಲಿ ಎಂದು ಕೂತರೆ ಪ್ರಯೋಜನವಿಲ್ಲ. ಪ್ರಯತ್ನಗಳು ನಡೆಯುತ್ತಲೇ ಇರಬೇಕು. ಸುಸ್ತಾದಾಗ ಕೊಂಚ ವಿಶ್ರಾಮ ತೆಗೆದುಕೊಂಡು ಮುಂದುವರೆಯಿರಿ. ಹಣದ ಹರಿವು ಚೆನ್ನಾಗಿದ್ದು, ಕೆಲ ಬಿಕ್ಕಟ್ಟುಗಳು ಶಮನವಾಗಲಿವೆ. ಆಂಜನೇಯನಿಗೆ ಕುಂಕುಮ ಅರ್ಪಿಸಿ.

Latest Videos

ಮಿಥುನ(Gemini): ಕುಟುಂಬದೊಂದಿಗೆ ನೆಮ್ಮದಿಯ ದಿನವಿರಲಿದೆ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಕಚೇರಿ ಕೆಲಸಗಳಲ್ಲಿ ಮಹತ್ತರ ಬದಲಾವಣೆ ಅಸಮಾಧಾನ ತರಬಹುದು. ವೈದ್ಯರಿಗೆ ವೃತ್ತಿಯಲ್ಲಿ ವಿರೋಧ ಹೆಚ್ಚಬಹುದು. ಆರೋಗ್ಯ ಚೆನ್ನಾಗಿರಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ಕಟಕ(Cancer): ಕಚೇರಿಯಲ್ಲಿ ಕೆಲಸ ಹೆಚ್ಚಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಮನೆಯಲ್ಲಿ ಸಂತೋಷದ ಕೊರತೆ ಎಂಬ ಕೊರಗಿದ್ದರೆ ಸಾಕು ಪ್ರಾಣಿ ತರುವ ಬಗ್ಗೆ ಆಲೋಚಿಸಿ. ರಿಯಲ್ ಎಸ್ಟೇಟ್ ಮತ್ತು ಕೃಷಿಯಲ್ಲಿ ಸಾಕಷ್ಟು ಲಾಭವಿರಲಿದೆ. ದುರ್ಗಾಷ್ಟೋತ್ತರ ಪಠಿಸಿ. 

ಸಿಂಹ(Leo): ಕೋರ್ಟ್ ಕಚೇರಿಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ. ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ಅತಿ ಶ್ರಮದಿಂದ ಅನಾರೋಗ್ಯ ಸಂಭವ, ಒತ್ತಡ ಕಾಡಬಹುದು. ನಿಮ್ಮ ಸಾಧನೆಗೆ ಕುಟುಂಬದವರ ಮೆಚ್ಚುಗೆ ಕೇಳಿಬರಲಿದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.  

ಹೆಸರು 'S'‌ನಿಂದ ಶುರುವಾದರೆ, ವ್ಯಕ್ತಿತ್ವ ಹೀಗಿರುತ್ತದೆ..

ಕನ್ಯಾ(Virgo): ಆಲಸ್ಯ ನಿಯಂತ್ರಿಸಿಕೊಂಡರೆ ದಿನವು ಉತ್ತಮವಾಗಿರುತ್ತದೆ. ಆಹಾರದಲ್ಲಿ ಪಥ್ಯ ತಪ್ಪಿದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಲ್ಪಪ್ರವಾಸದಿಂದ ಕಾರ್ಯ ಸಿದ್ಧಿ. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಿಸುವಂತೆ ನಡೆದುಕೊಳ್ಳಿ. ಗೋ ಗ್ರಾಸ ನೀಡಿ. 

ತುಲಾ(Libra): ನಾನಾ ರೀತಿಯ ಅಡೆತಡೆಗಳು ಬಾಧಿಸಿದರೂ ನಿಮ್ಮ ದೃಢ ನಿಶ್ಚಯದ ಮನೋಭಾವನೆಯಿಂದ ಅಭಿವೃದ್ಧಿ ಹೆಚ್ಚುವುದು. ಹಿಂದೆ ನಡೆದ ಅಪಘಾತವೊಂದರಿಂದ ಚೇತರಿಸಿಕೊಳ್ಳುವ ಸಮಯ ಬಂದಿದೆ. ಸಂಗಾತಿಯೊಂದಿಗೆ ಜಗಳ ಇರಲಿದೆ. ಸಮಾಧಾನದಿಂದ ಮಾತಾಡಿ. ಕೆಂಪು ಧಾನ್ಯ ದಾನ ಮಾಡಿ. 

ವೃಶ್ಚಿಕ(Scorpio): ಖಿನ್ನತೆ ಮತ್ತು ಒಂಟಿತನ ಕಾಡಬಹುದು. ಸಂಬಂಧದಲ್ಲಿ ದ್ರೋಹ ಕಾಡಬಹುದು. ಪ್ರವಾಸ, ವ್ಯಾಪಾರ, ವ್ಯವಹಾರಗಳಿಂದ ಅಪಾರ ಲಾಭ ಸಾಧ್ಯವಾಗಲಿದೆ. ಪ್ರತಿಭಾನ್ವಿತರಿಗೆ ಅವಕಾಶಗಳು ಹೆಚ್ಚಲಿವೆ. ಹೊರಾಂಗಣ ಆಟಗಳಲ್ಲಿ ತೊಡಗಿರಿ. ನವಗ್ರಹ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ನಿಮ್ಮ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳಿವೆ, ಇದರಿಂದ ಸಂಬಂಧದಲ್ಲಿ ತೊಡಕುಂಟಾಗಬಹುದು. ವೈಯಕ್ತಿಕ ಬದುಕಿನಲ್ಲಿ ಹಾಗೂ ವೃತ್ತಿ ರಂಗದಲ್ಲಿ ಅನಿರೀಕ್ಷಿತ ತಿರುವುಗಳು ಮಾನಸಿಕ ಗೊಂದಲಕ್ಕೆ ಕಾರಣವಾದಾವು. ರಾಮ ನಾಮ ಧ್ಯಾನ ಮಾಡಿ. 

ಮಕರ(Capricorn): ಲವಲವಿಕೆ, ಚೈತನ್ಯದಿಂದ ದಿನ ತುಂಬಿರಲಿದೆ.  ಹೊಸ ಕಲಿಕೆಯಲ್ಲಿ ತೊಡಗುವುದರಿಂದ ತೃಪ್ತಿ ಇರಲಿದೆ. ಮಕ್ಕಳಲ್ಲಿ ಮೌಲ್ಯಗಳನ್ನು ಮೈಗೂಡಿಸುವ ಕಡೆ ಗಮನ ಹರಿಸಿ. ವ್ಯಾಪಾರಸ್ಥರಿಗೆ ನಷ್ಟ. ಸಣ್ಣಪುಟ್ಟ ಪ್ರವಾಸ ಸಾಧ್ಯತೆ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

ಕುಂಭ(Aquarius): ವಾಹನ ಸಂಚಾರದಲ್ಲಿ ಸಮಸ್ಯೆಗಳು ತೋರಬಹುದು. ಶೀತ, ಕಫ ಬಾಧೆ ಇರಲಿದೆ. ಕೆಟ್ಟ ಜನರ ಸಂಪರ್ಕದಿಂದ ದೂರವಿರಿ. ಕೋರ್ಟ್, ಕಚೇರಿ ವ್ಯವಹಾರಗಳು ವಿಳಂಬವಾಗಿ ಸಾಕಷ್ಟು ಧನನಷ್ಟವಾಗಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

Weekly Horoscope: ಧನಸ್ಸಿಗೆ ಬದಲಾವಣೆಯ ಪರ್ವ, ನಿಮ್ಮ ಪಾಲಿಗೆ ಈ ವಾರ ಹೇಗಿರಲಿದೆ?

ಮೀನ(Pisces): ಕುಟುಂಬದಲ್ಲಿ ಮಗುವಿನ ಆಗಮನದಿಂದ ಸಂತಸ ಹೆಚ್ಚುವುದು.  ಮಾತಿನಲ್ಲಿ ಎಡವಟ್ಟಾಗಿ ಗುಟ್ಟುಗಳು ಹೊರಬರುವ ಸಾಧ್ಯತೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ನ್ಯಾಯಾಲಯದ ಕಾರ್ಯಗಳಲ್ಲಿ ಅಭಿವೃದ್ಧಿ ಇದೆ. ಭಜರಂಗ ಬಾಣ ಹೇಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!