ದಿನ ಭವಿಷ್ಯ: ಈ ರಾಶಿಯವರ ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ!

Published : May 13, 2021, 07:12 AM ISTUpdated : May 13, 2021, 07:16 AM IST
ದಿನ ಭವಿಷ್ಯ: ಈ ರಾಶಿಯವರ ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ!

ಸಾರಾಂಶ

13 ಮೇ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಹೆಚ್ಚು ವಹಿವಾಟು ನಡೆಯಲಿದೆ. ಕೃಷಿಕರಿಗೆ ಲಾಭ. ದೊಡ್ಡವರ ಮಾತಿಗೆ ಹೆಚ್ಚು ಮಾನ್ಯತೆ ನೀಡಿ.

ವೃಷಭ: ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ. ಚಳಿಯ ಹೊಡೆತಕ್ಕೆ ಸಿಲುಕಿಕೊಳ್ಳುವಿರಿ. ದುಡಿಯುವ ವರ್ಗಕ್ಕೆ ಇಂದು ಶುಭ ಫಲ.

ಮಿಥುನ: ತಾಳ್ಮೆಯೇ ನಿಮಗೆ ಶುಭದಾಯಕವಾಗಲಿದೆ. ಸಂಜೆ ವೇಳೆಗೆ ಅಪರಿಚಿತರ ಭೇಟಿಯಾಗಲಿದೆ. ಅಂದುಕೊಂಡ ಕಾರ್ಯ ನೆರವೇರಲಿದೆ.

ಕಟಕ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ. ಆಸ್ತಿ ವಿಚಾರವಾಗಿ ಗೊಂದಲ ಉಂಟಾಗಲಿದೆ. ಎಚ್ಚರಿಕೆ ಇರಲಿ.

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ

ಸಿಂಹ: ಕಿವುಡನ ಮುಂದೆ ನಿಂತು ಕಿನ್ನರಿ ನುಡಿಸಿದಂತೆ ನಿಮ್ಮ ಸ್ಥಿತಿ ಆಗಲಿದೆ. ಎಲ್ಲಾ ಕಡೆಯೂ ಮೂಗು ತೂರಿಸಿಕೊಂಡು ಹೋಗದಿರಿ.

ಕನ್ಯಾ:  ಹತ್ತು ಖಾಲಿ ಮಾತಿಗಿಂತ ಒಂದು ತೂಕದ ಮಾತಿಗೆ ಬೆಲೆ ಹೆಚ್ಚು. ನಿಮ್ಮಿಂದ ಇತರರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ. ಶುಭ ಫಲ.

ತುಲಾ: ಮನೆಯ ಮುಖ್ಯಸ್ಥನ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಎಲ್ಲದ್ದಕ್ಕೂ ಕಾರಣ ಕೇಳುತ್ತಾ ಕೂರುವುದು ಬೇಡ.

ವೃಶ್ಚಿಕ: ನಿಮ್ಮೊಳಗಿನ ದಯಾ ಗುಣವೇ ನಿಮಗೆ ವರವಾಗಿ ಪರಿಣಮಿಸಲಿದೆ. ದೊಡ್ಡ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಲಿದ್ದೀರಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!