ದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ!

By Suvarna News  |  First Published Sep 12, 2020, 7:19 AM IST

12 ಸಪ್ಟೆಂಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಮಾನಸಿಕ ಖಿನ್ನತೆ ಇರಲಿದೆ, ಸ್ತ್ರೀಯರು ಎಚ್ಚರವಾಗಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ - ಸಮೃದ್ಧಿಯ ದಿನ, ಸಹೋದರರಿಂದ ಲಾಭ, ಸಾಹಸದ ದಿನ, ಭಾವನೆಗಳಲ್ಲಿ ವ್ಯತ್ಯಾಸ, ಸೌಂದರ್ಯ ಲಹರಿ ಪಠಿಸಿ

Tap to resize

Latest Videos

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಉನ್ನತಿ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಾತನಾಡುವಾಗ ಎಚ್ಚರಿಕೆ ಇರಲಿ, ಭಾವನೆಗಳು ಏರುಪೇರಾಗಲಿವೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಧನುಸ್ಸು - ಉತ್ತಮ ಲಾಭ, ಕೃಷಿಕರಿಗೆ ಅನುಕೂಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಶುಭಲಾಭ, ವೃದ್ಧರಿಗೆ ಅನುಕೂಲದ ದಿನ, ಸಂಗಾತಿಯ ಸಹಕಾರ, ಹುರುಳಿ-ಉದ್ದು ಧಾನ್ಯ ದಾನ ಮಾಡಿ

ಕುಂಭ - ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದೇಹದಲ್ಲಿ ತರಚುವ ಸಾಧ್ಯತೆ ಇದೆ, ಉಳಿದಂತೆ ಅನುಕೂಲದ ವಾತಾವರಣ ಇದೆ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

click me!