ದಿನ ಭವಿಷ್ಯ: ಧನುಸ್ಸು ರಾಶಿಯವರಿಗೆ ಶತ್ರುಭಯ, ಮನಸ್ಸಿಗೆ ಅಸಮಾಧಾನ!

By Suvarna News  |  First Published Sep 27, 2021, 7:10 AM IST

*27 ಸಪ್ಟೆಂಬರ್ 2021 ಸೋಮವಾರದ ಭವಿಷ್ಯ

* ಧನುಸ್ಸು ರಾಶಿಯವರಿಗೆ ಶತ್ರುಭಯ, ಮನಸ್ಸಿಗೆ ಅಸಮಾಧಾನ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಸಾಲಬಾಧೆಯಿಂದ ದಾಂಪತ್ಯದಲ್ಲಿ ತೊಡಕು, ಮಾತು ಹಿತಮಿತವಾಗಿರಲಿ, ಹಿರಿಯರ ಮಾರ್ಗದರ್ಶನ ಅಗತ್ಯವಿದೆ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ವೃಷಭ - ಸಾಲಬಾಧೆ, ಮಾತಿನಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಲಿದೆ, ನವಗ್ರಹಸ್ತೋತ್ರ ಪಠಿಸಿ

Tap to resize

Latest Videos

ಮಿಥುನ - ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ, ಕೆಟ್ಟವರ ಸಹವಾಸ ಸಾಧ್ಯತೆ, ನಂಬಿಕೆಗೆ ಮೋಸ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಮನಸ್ಸು ನಿರಾಳವಾಗಿರಲಿದೆ, ಆರೋಗ್ಯ ಸಿದ್ಧಿ, ಹೆಣ್ಣುಮಕ್ಕಳ ಮನಸ್ಸಿಗೆ ಸಮಾಧಾನ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪ್ರಾರ್ಥನೆ ಮಾಡಿ

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಸಿಂಹ - ಸಹೋದರರಲ್ಲಿ ಕಲಹ, ಹಿರಿಯರ ಸಹಕಾರ, ಗುರು ಮಂದಿರಕ್ಕೆ ಕಡಲೆ ದಾನ ಮಾಡಿ

ಕನ್ಯಾ - ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ತುಲಾ - ಸಮೃದ್ಧಿಯ ದಿನ, ಹೊಸ ಉದ್ಯೋಗ ಸಿಗಲಿದೆ, ಅನುಕೂಲದ ದಿನ, ಸರ್ಕಾರಿ ಕೆಲಸದವರಿಗೆ ಅನುಕೂಲ, ಅಮ್ಮನವರಿಗೆ ಕೆಂಪು ಹೂವು ಕೊಡಿ

ವೃಶ್ಚಿಕ - ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

 

ಧನುಸ್ಸು - ಶತ್ರುಭಯ, ಮನಸ್ಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ನಷ್ಟ ಸಾಧ್ಯತೆ, ಅಕ್ಕಿ - ಅವರೆ ದಾನ ಮಾಡಿ

ಮಕರ - ಸಮಾಧಾನದ ದಿನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ನೀರಿನ ಸೌಲಭ್ಯ, ಶುಭಲಾಭ, ರುದ್ರಾಭಿಷೇಕ ಮಾಡಿಸಿ

ಕುಂಭ -  ಆರೋಗ್ಯದಲ್ಲಿ ಗಂಭೀರವಾದ ಏರುಪೇರು, ಸಂಗಾತಿಯಿಂದ ಆಸರೆ, ಉತ್ತಮ ವಾತಾವತರಣ,  ಧನ್ವಂತಿರಿ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ಆರೋಗ್ಯದಲ್ಲಿ ಎರುಪೇರು, ಮಕ್ಕಳಿಂದ ಮಾರ್ಗದರ್ಶನ, ಧನಲಾಭ, ಶುಭಾಶುಭ ಮಿಶ್ರಫಲ, ಅಕ್ಕಿ-ಅವರೆ ದಾನ ಮಾಡಿ

click me!