Daily Horoscope| ದಿನಭವಿಷ್ಯ: ಕಟಕ ರಾಶಿಯವರಿಗೆ ಹಣದ ತೀವ್ರ ಕೊರತೆಯಾಗಲಿದೆ!

By Suvarna NewsFirst Published Oct 21, 2021, 7:11 AM IST
Highlights

* 21 ಅಕ್ಟೋಬರ್ 2021 ಗುರುವಾರದ ಭವಿಷ್ಯ

* ಕಟಕ ರಾಶಿಯವರು ತಂದೆ ಬಂಧುಗಳಿಂದ ಅಂತರ ಕಾಯ್ದುಕೊಳ್ಳಿ'

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

ಗ್ರಹಗತಿ: 

ಮೇಷ ರಾಶಿಯಲ್ಲಿ ಚಂದ್ರ
ವೃಷಭ ರಾಶಿಯಲ್ಲಿ ರಾಹು
ಕನ್ಯಾ ರಾಶಿಯಲ್ಲಿ ಬುಧ ಹಾಗೂ ಕುಜರಿದ್ದಾರೆ.
ವೃಶ್ಚಿಕ ರಾಶಿಯಲ್ಲಿ ಕೇತು, ಶುಕ್ರ ಹಾಗೂ ಮಾಂದಿ ಇದ್ದಾನೆ. 
ಧನುಸ್ಸು ರಾಶಿಯಲ್ಲಿ ಮಾಂದಿ
ಮಕರ ರಾಶಿಯಲ್ಲಿ ಗುರು, ಶನಿ 

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries):ನಿಮ್ಮ ರಾಶಿಯಲ್ಲಿ ಚಂದ್ರ ಇದ್ದಾನೆ. ದ್ವಿತೀಯದಲ್ಲಿ ರಾಹು ಇದ್ದಾನೆ. ಮನೆಯೂಟ ಹಿಡಿಸದೆ ಹೊರಗಿನ ಆಹಾರ ಸೇವಿಸಿ ಆರೋಗ್ಯದಲ್ಲಿ ವ್ಯತ್ಯಾಸ. ಎಚ್ಚರಿಕೆ ಅಗತ್ಯ. ಸಂಧ್ಯಾ ಕಾಲದ ನಂತರ ಸಂಗಾತಿಯ ಸಹಕಾರ, ವ್ಯಾಪಾರದಲ್ಲಿ ಅಭಿವೃದ್ಧಿಯ ಲಕ್ಷಣ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ವೃಷಭ(Taurus):ನಿಮ್ಮ ರಾಶಿಯಿಂದ ಕುಜ ಪರಿವರ್ತನೆಯಾಗುತ್ತದೆ. ಹೀಗಾಗಿ ಶತ್ರುಗಳ ವಿರೋಧವಾಗುತ್ತದೆ. ತಂದೆ ಮಕ್ಕಳಲ್ಲಿ ಕೊಂಚ ಅಸಮಾಧಾನ ವಾತಾವರಣ. ದಾಂಪತ್ಯದಲ್ಲಿ ಸ್ವಲ್ಪ ಶತ್ರು ಭಾವ. ಚೆನ್ನಾಗಿರುವ ದಂಪತಿ ನಡುವೆ ಇದ್ದಕ್ಕಿದ್ದಂತೆ ಕಲಹ, ಕೋಲಾಹಲ. ಉದ್ಯೋಗಿಗಳಿಗೆ ತಕ್ಕಮಟ್ಟದ ಅನುಕೂಲದ ವಾತಾವರಣ ಇದೆ. ಕೆಲ ಕಾರ್ಯದಲ್ಲಿ ಸ್ವಲ್ಪ ವಿಳಂಬ ಆಗುವ ಸಾಧ್ಯತೆ. ಹೀಗಾಗಿ ಶಿವ-ಶಕ್ತಿಯರ ಆರಾಧನೆ ಮಾಡಿ. 

ಮಿಥುನ(Gemini): ನಿಮ್ಮ ರಾಶಿಯಿಂದ ಚತುರ್ಥದಲ್ಲಿದ್ದ ಕುಜ, ಪಂಚಮಕ್ಕೆ ಹೋಗುತ್ತಿದ್ದಾನೆ. ಮಕ್ಕಳಲ್ಲಿ ಸ್ವಲ್ಪ ವಿರೋಧ, ಕೋಲಾಹಲ, ಕಲಹ ಇರುತ್ತದೆ. ಹೊಟ್ಟೆ ಸಂಬಂಧಿ ಸ್ವಲ್ಪ ತೊಂದರೆ ಆಗಲಿದೆ. ಉದರ ಬೇನೆಯಾಗಲಿದೆ, ಎಚ್ಚರಿಕೆ ಬೇಕು. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಚಂದ್ರ ಲಾಭದಲ್ಲಿದ್ದಾನೆ, ಇದು ಬಹಳ ಉತ್ತಮ. ಅನ್ನ ಸಮೃದ್ಧಿ ತಂದು ಕೊಡುತ್ತದೆ. ಹೋಟೆಲ್‌ ಮ್ಯಾನೇಜ್ಮೆಂಟ್‌ ಮಾಡುವವರಿಗೆ ಬಲ, ಫಲ ಎರಡೂ ಇದೆ. ಈಶ್ವರನ ಪ್ರಾರ್ಥನೆ ಮಾಡಿ.

ಕಟಕ(Cancer):ಈ ರಾಶಿಯವರ ಕರ್ಮಾಧಿಪತಿ ಕಚತುರ್ಥಕ್ಕೆ ಹೋಗುತ್ತಿದ್ದಾನೆ. ಹೀಗಾಗಿ ಉದ್ಯೋಗದಲ್ಲಿ ಸಮಾಧಾನ. ವಿಶೇಷವಾದ, ಆಸಕ್ತಿಯ ಕ್ಷೇತ್ರ ನಿಮಗೆ ಸಿಗಲಿದೆ. ಕರ್ಮ ಸ್ಥಾನದಲ್ಲಿ ವಿಶೇಷ ಬದಲಾವಣೆಯಾಗುವುದರಿಂದ ಸಮಾಧಾನ ಸಿಗಲಿದೆ. ಬಲ ಚೆನ್ನಾಗಿದೆ, ವಿಶೇಷ ಫಲ ಸಿಗಲಿದೆ. ಇನ್ನು ಅದೇ ಚತುರ್ಥದಲ್ಲಿ ರವಿಯೂ ಇದ್ದಾನೆ. ಈತನೂ ಧನಾಧಿಪತಿ. ಕೆಲಸ ಚೆನ್ನಾಗಿರುತ್ತದೆ ಆದರೆ ಹಣದ ಕೊರತೆ ಕಾಣಬಹುದು. ಈಶ್ವರನ ಆರಾಧನೆ ಮಾಡಿ. 

ಸಿಂಹ(Leo): ನಿಮ್ಮ ರಾಶಿಯ ಅಧಿಪತಿ ನೀಚನಾಗಿದ್ದಾನೆ. ಬಲವಿಲ್ಲ, ಪ್ರತಿ ದಿನ ಈಶ್ವರನ ಪ್ರಾರ್ಥನೆ ಮಾಡಿ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ ಅದು ದೇಹಬಲ ತಂದುಕೊಡುತ್ತದೆ. ಚಂದ್ರ ಭಾಗ್ಯದಲ್ಲಿದ್ದಾನೆ ಇದರಿಂದ   ಅನುಕೂಲ. ತಾಯಿಯಿಂದ ಅನುಕೂಲ. ವೃತ್ತಿಯಿಂದ  ಸಮಾಧಾನ, ಸೌಖ್ಯ ಕಾಣಲಿದ್ದೀರಿ. ಕೊಂಚ ಕಿರಿಕಿರಿ. ಹೀಗಾಗಿ ಗಣಪತಿ ಪ್ರಾರ್ಥನೆ ಮಾಡಿ.   
 
ಕನ್ಯಾ(Virgo):ರಾಶಿಯಲ್ಲಿದ್ದ ಕುಜ  ದ್ವಿತೀಯಕ್ಕೆ ಹೋಗುತ್ತಿದ್ದಾನೆ. ಆದರೆ ಆತ ಹೋಗುತ್ತಿರುವುದು ಧನ ಸ್ಥಾನಕ್ಕೆ ಇಲ್ಲಿ ಒಂದು ಪಾಪ ಗ್ರಹ ಇದ್ದರೆ, ಯಯಾದಿಪತಿ ಜೊತೆಗೆ ಸೇರಿದಾಗ ಕೊಂಚ ಸಹೋದರರಿಗೆ ಆಸ್ತಿ ವಿಚಾರವಾಗಿ ಜಗಳವಾಗುತ್ತದೆ. ಸ್ವಲ್ಪ ಶಾಂತತೆ ಇರಲಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ತುಲಾ(Libra):ಧನಾಧಿಪತಿ ನಿಮ್ಮ ರಾಶಿಗೆ ಪ್ರವೇಶಿಸುತ್ತಾನೆ. ಧನಾಧಿಪತಿ ಹಾಗೂ ಲಾಭಾಧಿಪತಿ ಸಂಯೋಗದಿಂದ ಏನಾಗಬಹುದು? ಲಾಭ ಸಮೃದ್ಧಿಯಾಗಲಿದೆ. ಬಹಳಷ್ಟು ಅನುಕೂಲವಾಗಲಿದೆ. ವಿದೇಶ ವಹಿವಾಟು ಚೆನ್ನಾಗಿರುತ್ತದೆ. ರಸ ವ್ಯಾಪಾರಿಗಳಿಗೆ ಬಹಳ ಅನುಕೂlಲ. ವೃತ್ತಿಯಲ್ಲಿ ಬಲ, ಫಲ ಎರಡೂ ಸಿಗಲಿದೆ. ಪಿತೃ ದೇವತೆಗಳ ಆರಾಧನೆ ಮಾಡಿ. 

  ವೃಶ್ಚಿಕ(Scorpio):ಈ ರಾಶಿಯವರಿಗೆ ಖರ್ಚು ಜಾಸ್ತಿ. ನಿಮಗೆ ನೀವೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆರೋಗ್ಯದ ಬಗ್ಗೆ ಎಚ್ಚರ. ಯಾವುದಾದರೂ ಒಂದನ್ನು ಸಾಧಿಸಲೇಕು ಎಂದು ಗುರಿ ಇಟ್ಟು ಹೊರಟರೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ.  ಆದರೆ ಗುರಿ ಮುಖ್ಯ. ಆದರೆ ಇದನ್ನು ಯಾವಾಗ ಬೇಕಾದರೂ ಸಾಧಿಸುತ್ತೇನೆ ಎನ್ನುವುದು ಸರಿಯಲ್ಲ. ಗುರಿ ಇದ್ದು ಸಾಧಿಸಿ, ಈ ಪ್ರಯಾಣ ಕೊಂಚ ಜೋರಾಗಿರಲಿ ಆದರೆ ಗಡುವು ಹಾಕಿ ಬಿಟ್ಟಿರುವುದು ಅನೇಕ ತೊಂದರೆಗಳಿಗೆ ಕಾರಣ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನುಸ್ಸು(Sagittarius): ಈ ರಾಶಿಯವರಿಗೆ ಲಾಭ. ಖರ್ಚಿನ ಜೊತೆ ಲಾಭ ಇದೆ. ಬುದ್ಧಿಶಕ್ತಿ ಚೆನ್ನಾಗಿರುತ್ತದೆ. ಉತ್ತಮ ಬುದ್ಧಿಶಕ್ತಿ. ಮಕ್ಕಳಿಂದ ವಿಶೇಷವಾದಅನುಕೂಲ ಸಿಗಲಿದೆ. ಮಕ್ಕಳ ಪ್ರಭಾವ , ಆಸರೆ ಬಲ ತಂದುಕೊಡಲಿದೆ. ನಿಮ್ಮ ಬುದ್ಧಿಯೂ ಚೆನ್ನಾಗಿ ಕೆಲಸ ಮಾಡಲಿದೆ. ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣ ಮಾಡೋರಿಗೆ ಇಂದು ತುಂಬಾ ಚೆನ್ನಾಗಿದೆ. ಕಾಲೇಜಿನಲ್ಲಿ ಒಳ್ಳೆಯ ಸ್ಥಾನ, ಗೌರವ ಹೆಚ್ಚಾಗುವ ಲಕ್ಷಣ ಸೂಚಿಸುತ್ತಿದೆ.  ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 


ಮಕರ(Capricorn): ಈ ರಾಶಿಯವರಿಗೆ ಇಂದು ಉದ್ಯೋಗಿಗಳಿಗೆ ಬಹಳ ಉತ್ತಮ. ಲಾಬಾಧಿಪತಿ ಕರ್ಮ ಸ್ಥಾನಕ್ಕೆ ಬಂದಾಗ  ಲಾಭ ಸಮೃದ್ಧಿ, ಉದ್ಯೋಗದಲ್ಲಿ ಏನೇ ಕೆಲಸ ಮಾಡಿದರೂ ಅದರ ದುಪ್ಪಟ್ಟು ಸಿಗಲಿದೆ.  ರಾಶಿಯಿಂದ ಚತುರ್ಥದ ಚಂದ್ರದಿಂದ ಮನೆಯಲ್ಲಿ ಸೌಖ್ಯ. ಹೀಗೆ ಎಲ್ಲವೂ ಆನಂದವಾಗಿರುತ್ತದೆ. ನಮ್ಮ ಮನಸ್ಸಿಗೆ ಕೊಂಚ ಸಮಾಧಾನ ಸಿಕ್ಕರೆ ಅದುವೇ ಆನಂದ. ಇಂದು ಗುರು ಚರಿತ್ರೆ ಹೇಳಿ. 
 
ಕುಂಭ(Aquarius):ನಿಮ್ಮ ರಾಶಿಯಿಂದ ಕುಜ ಭಾಗ್ಯಕ್ಕೆ ಬರುತ್ತಿದ್ದಾನೆ. ಕರ್ಮಾಧಿಪತಿಯಾಗಿವಾತ ಭಾಗ್ಯ ಸ್ಥಾನಕ್ಕೆ ಬರುತ್ತಾನೆ. ಇದು ಒಳ್ಳೆಯ ಅಂಶ. ಭಾಗ್ಯಾಧಿಪತಿ ಕರ್ಮ ಸ್ಥಾನದಲ್ಲಿ ಹಾಗೂ ಕರ್ಮಾಧಿಪತಿ ಭಾಗ್ಯ ಸ್ಥಾನದಲ್ಲಿ. ಈ ಪರಿವರ್ತನೆ ತುಂಬಾ ಅನುಕೂಲ ಮಾಡುತ್ತೆ. ದೈವಾನುಕೂಲ ಚೆನ್ನಾಗಿರುತ್ತದೆ. ನೀವು ಮಾಡುವ ಕೆಲಸಗಳಿಗೆ ದೇವರ ಅನುಗ್ರಹ ಇದ್ದರೆ ಫಲಿತಾಂಶವೂ ಉತ್ತಮವಾಗಿರುತ್ತದೆ. ಸಹೋದರ ಸಹಕಾರ ಸಿಗುತ್ತದೆ, ವೃತ್ತಿಯಲ್ಲಿ ಅನುಕೂಲ, ಉದ್ಯೋಗ ಲಾಭ ಹಾಗೂ ಹಣ ಸಮೃದ್ಧಿಯಾಗುತ್ತದೆ. ಗುರು ಪ್ರಾರ್ಥನೆ ಮಾಡಿ. 

ಮೀನ(Pisces): ಮನೆಯಲ್ಲಿ, ಕುಟುಂಬದಲ್ಲಿ ಸ್ತ್ರೀಯರಿಗೆ ಒಂದು ಬಲ. ಸ್ತ್ರೀಯರ ಮಾತೇ ನಡೆಯುತ್ತದೆ. ಅವರು ಒಪ್ಪಿದರೆ ಮಾತ್ರ ಮುಂದಿನ ಕೆಲಸ ಎನ್ನುವ ಸಂದರ್ಭ ಬರುತ್ತದೆ. ಹೆಣ್ಣು ಮಕ್ಕಳಿಗೆ ಬಲ. ಆಹಾರವೂ ಚೆನ್ನಾಗಿರುತ್ತದೆ. ಸಮೃದ್ಧ ಭೋಜನವಾಗುತ್ತದೆ. ಜೊತೆಗೆ ಹಣ ಕಾಸಿನ ಸಮೃದ್ಧಿ ಕೂಡಾ ಚೆನ್ನಾಗಿದೆ. ಉದ್ಯೋಗಿಗಳಿಗೆ ಅನುಕೂಲ ಚೆನ್ನಾಗಿದೆ. ಗುರು ಪ್ರಾರ್ಥನೆ ಮಾಡಿ. 

click me!