ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಭಾಗ್ಯ ಸಮೃದ್ಧಿ, ಇನ್ನುಳಿದ ರಾಶಿಗಳು ಹೇಗಿವೆ?

Published : Jul 12, 2021, 07:35 AM ISTUpdated : Jul 12, 2021, 08:28 AM IST
ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಭಾಗ್ಯ ಸಮೃದ್ಧಿ, ಇನ್ನುಳಿದ ರಾಶಿಗಳು ಹೇಗಿವೆ?

ಸಾರಾಂಶ

* 12 ಜುಲೈ 2021 ಸೋಮವಾರದ ಭವಿಷ್ಯ * ಕಟಕ ರಾಶಿಯವರಿಗಿಂದು ಸಿಗಲಿದೆ ನೆಮ್ಮದಿ * ವೃಶ್ಚಿಕ ರಾಶಿಯವರಿಗೆ ಭಾಗ್ಯ ಸಮೃದ್ಧಿ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ: ಇಬ್ಬರ ನಡುವಿನ ಜಗಳದಲ್ಲಿ ಸಿಲುಕಿ ನೀವು ಬಡಪಾಯಿಯಾಗುವಿರಿ. ನಿಮ್ಮ ತಾಳ್ಮೆಗೆ ಜಯ ಸಿಗಲಿದೆ. ಸತ್ಯ ಮಾರ್ಗದಲ್ಲಿ ಮುಂದೆ ಸಾಗಿ.

ವೃಷಭ: ಸುಲಭಕ್ಕೆ ದೊರೆಯುವ ವಸ್ತುಗಳ ಬಗ್ಗೆ ಆಸೆ ಪಡುವುದು ಬೇಡ. ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ನೆಮ್ಮದಿ ಹೆಚ್ಚಲಿದೆ. 

ಮಿಥುನ: ನಿಮ್ಮ ಮೇಲಿನ ಆರೋಪಗಳಿಗೆಲ್ಲಾ ತೆರೆ ಬೀಳಲಿದೆ. ಪ್ರಬಲರೊಂದಿಗೆ ಸ್ಫರ್ಧೆ ಮಾಡಬೇಕಾದ ಅನಿವಾರ್ಯತೆ ಇದೆ.

ಕಟಕ: ಮಾಡಬೇಕಾದ ಕೆಲಸ ರಾಶಿ ಇದ್ದರೂ ಸೋಮಾರಿತನ ಮುಂದುವರೆಯಲಿದೆ. ನಾಳೆ ಎನ್ನುವುದು ಹಾಳು. ಮುಂದೆ ಸಾಗಿದರೆ ಜಯ.

ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ!

ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಿಂದ ಕಿರಿಕಿರಿ, ಅಂಜಿಕೆ ಕಾಡಲಿದೆ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ, ಆತಂಕ ಬೇಡ, ಬುದ್ಧಿ ಶಕ್ತಿಯಿಂದ ಕಾರ್ಯ ಸಾಧನೆ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ - ಭಾಗ್ಯ ಸಮೃದ್ಧಿ, ಧರ್ಮ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಶುಭಫಲ, ಕುಜ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು