ಸಚಿವರ ಲೆಟರ್‌ ಹೆಡ್‌ ಬಳಕೆ ಮಾಡುತ್ತಿದ್ದ ಯುವರಾಜ್‌

Kannadaprabha News   | Asianet News
Published : Jan 27, 2021, 07:53 AM IST
ಸಚಿವರ ಲೆಟರ್‌ ಹೆಡ್‌ ಬಳಕೆ ಮಾಡುತ್ತಿದ್ದ ಯುವರಾಜ್‌

ಸಾರಾಂಶ

ಯುವರಾಜ್‌ ಮನೆಯಲ್ಲಿ ಸಚಿವರರೊಬ್ಬರ ಹೆಸರಿನ ಲೆಟರ್‌ ಹೆಡ್‌ಗಳು ಪತ್ತೆ| ಲೆಟರ್‌ ಹೆಡ್‌ ವಿಚಾರವಾಗಿ ವಿಚಾರಣೆ| ಯುವರಾಜ್‌ನಿಂದ ಮಾಹಿತಿ ಕಲೆ ಹಾಕುವುದೇ ಪೊಲೀಸರಿಗೆ ಸವಾಲು| ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದ ಲೆಟರ್‌ ಹೆಡ್‌ ಬಳಸಿ ನಕಲಿ ಮಾಡಿರುವುದು| 

ಬೆಂಗಳೂರು(ಜ.27): ರಾಜಕೀಯ ನಾಯಕರ ಫೋಟೋ ಬಳಸಿಕೊಂಡು ಪ್ರಮುಖ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಯುವರಾಜ್‌ ಅಲಿಯಾಸ್‌ ಸ್ವಾಮಿ ಸಚಿವರೊಬ್ಬರ ಹೆಸರಿನ ಲೆಟರ್‌ ಹೆಡ್‌ ಬಳಸಿ ನಕಲಿ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಯುವರಾಜ್‌ ಮನೆಯಲ್ಲಿ ಸಚಿವರರೊಬ್ಬರ ಹೆಸರಿನ ಲೆಟರ್‌ ಹೆಡ್‌ಗಳು ಪತ್ತೆಯಾಗಿದ್ದು, ಇದು ಅಸಲಿ ಲೆಟರ್‌ಹೆಡ್‌ಗಳೆ ಅಥವಾ ನಕಲಿಯೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 

ವಂಚಕ ಯುವರಾಜ್‌ನ 90 ಕೋಟಿ ಆಸ್ತಿ ಜಪ್ತಿ : ಬಿಗ್ ಶಾಕ್

ಲೆಟರ್‌ ಹೆಡ್‌ ವಿಚಾರವಾಗಿ ಯುವರಾಜ್‌ನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಹೀಗಾಗಿ ಈತನಿಂದ ಮಾಹಿತಿ ಕಲೆ ಹಾಕುವುದೇ ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಸಂಬಂಧಿಸಿದ ಸಚಿವರ ಕಚೇರಿಗೆ ಜಪ್ತಿ ಮಾಡಲಾದ ಲೆಟರ್‌ ಹೆಡ್‌ನ ಪ್ರತಿಯನ್ನು ರವಾನಿಸಿ ಈ ಬಗ್ಗೆ ಪರಿಶೀಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!