Belagavi Crime News: 15 ವರ್ಷದ ಬಾಲಕನಿಗೆ ಅಪರಿಚಿತ ಯುವಕರ ತಂಡ ಬೈಕ್ ಮೇಲೆ ಬಂದು ಚೂರಿ ಇರಿದ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ
ಬೆಳಗಾವಿ (ಸೆ. 26): 15 ವರ್ಷದ ಬಾಲಕನಿಗೆ ಅಪರಿಚಿತ ಯುವಕರ ತಂಡ ಬೈಕ್ ಮೇಲೆ ಬಂದು ಚೂರಿ ಇರಿದ ಘಟನೆ ಬೆಳಗಾವಿಯ (Belagavi) ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ. ಕ್ಯಾಂಪ್ ನಿವಾಸಿ ಫರಾನ್ ಧಾರವಾಡಕರ್(15) ಬೆನ್ನಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ. ಗಾಯಾಳು ಬಾಲಕನನ್ನು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಇನ್ನು ಬಿಮ್ಸ್ ಆವರಣದಲ್ಲಿ ಕುಟುಂಬಸ್ಥರು, ಸ್ನೇಹಿತರು ಜಮಾವಣೆಗೊಂಡಿದ್ದಾರೆ. ಲಾಠಿ ಹಿಡಿದು ಬೆದರಿಸಿ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನ ಪೊಲೀಸರು ಹೊರಗೆ ಕಳುಹಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಜಮಾವಣೆಗೊಂಡ ಸಂಬಂಧಿಕರಿಗೆ ಸಿಪಿಐ ಮಂಜುನಾಥ ಹಿರೇಮಠ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ಹಿನ್ನೆಲೆ ಸ್ಥಳಕ್ಕೆ ಡಿಸಿಪಿ ಸ್ನೇಹಾ ಭೇಟಿ ನೀಡಿದ್ದಾರೆ.
ಹಲ್ಲೆ ವೇಳೆ ಕ್ಯಾಂಪ್ ಪ್ರದೇಶದ ಅಪ್ರಾಪ್ತ ಯುಕವ ಗಾಯಗೊಂಡಿದ್ದಾನೆ. ಬೆಳಗಾವಿ ನಗರದ ಅಂಬಾ ಭವನ ಹತ್ತಿರ ಬೈಕ್ ಮೇಲೆ ಮೂರು ಜನ ಯುವಕರು ಹೋಗುತ್ತಿರುವಾಗ, ಹತ್ತು ಜನ ಯುವಕರ ಗುಂಪು ಬೈಕ್ ಸವಾರರನ್ನು ತಡೆದು ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಫರಾನ್ ಧಾರವಾಡಕರ ಜೊತೆ ತೆರಳುತ್ತಿದ್ದ ಇಬ್ಬರು ಯುವಕರು ತಪ್ಪಿಸಿಕೊಂಡು ಮನೆ ತಲುಪಿದ್ದಾರೆ.
ಹಲ್ಲೆಗೆ ಕಾರಣ ಏನು ತಿಳಿದು ಬಂದಿಲ್ಲ. ಹಲ್ಲೆ ಮಾಡಿವದರು ಯಾರು ಅನ್ನೋದು ಇನ್ನುವರೆಗೆ ಗೊತ್ತಾಗಿಲ್ಲ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಫರಾನ್ ಈಗ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದಿ ತಿಳಿದು ಜಿಲ್ಲಾಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ ಚಾಕು ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಘಟನೆಯ ಹಿಂದೆ ಪಿಎಫ್‌ಐ?
ಕನಕಗಿರಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಬ್ಯಾಂಕ್‌ಗೆ ಹೋಗಿ ಬರುತ್ತೇನೆಂದು ಬೈಕ್ ಪಡೆದ ಯುವಕನೊಬ್ಬ ಬೈಕ್ ಕೊಟ್ಟನಿಗೆ ಚಾಕು ಹಾಕಿದ ಘಟನೆ ಪಟ್ಟಣದ ಮೇಲುಗಡೆ ಅಗಸಿಯ ಕಲಗಂಬದ ಬಳಿ ಮಂಗಳವಾರ ನಡೆದಿದೆ. ರವೀಂದ್ರ ದೋಟಿಹಾಳ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಮುತ್ತು ಹಡಪದ ಎಂಬ ಯುವಕ ಬ್ಯಾಂಕ್‌ನಲ್ಲಿ ಅರ್ಜೆಂಟ್ ಕೆಲಸವಿದ್ದು, ಬೇಗ ಮುಗುಸಿಕೊಂಡು ಬರುತ್ತೇನೆ ಬೈಕ್ ಕೊಡುವಂತೆ ಕೇಳಿಕೊಂಡಾಗ ಶಾಮಿಯಾನ ಮಾಲೀಕ ರವೀಂದ್ರ ದೋಟಿಹಾಳ ಬೈಕ್ ನೀಡಿದ್ದಾರೆ.
ಮಧ್ಯಾಹ್ನ 1.10ಕ್ಕೆ ಬೈಕ್ ಪಡೆದಿರುವ ಯುವಕ ಸಂಜೆ 4 ಗಂಟೆಗೆ ಬೈಕ್ ತಂದು ಕೊಟ್ಟಿದ್ದರಿಂದ ಶಾಮಿಯಾನ ಮಾಲೀಕ ಸಿಟ್ಟಿಗೆದ್ದು ಎರಡು ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕ ಮುತ್ತು ಮದ್ಯ ಸೇವಿಸಿ ಬಂದು ರವೀಂದ್ರನಿಗೆ ಚಾಕುವಿನಿಂದ ಇರಿದಿದ್ದಾನೆ. ಸ್ಥಳದಲ್ಲಿದ್ದ ಜನರು ಜಗಳವನ್ನು ಬಿಡಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತಸ್ರಾವ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ ಮುತ್ತು ಪರಾರಿಯಾಗಿದ್ದಾನೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ.