ಬೆಂಗಳೂರು: ನಿಶ್ಚಯವಾದ ಮದುವೆಗೆ ಫೋಟೊ ಅಡ್ಡಿ: ಮಗಳ ವಿಚಾರಕ್ಕೆ ತಂದೆ ತಾಯಿ ಜಗಳ ಸಾವಿನಲ್ಲಿ ಅಂತ್ಯ

By Suvarna NewsFirst Published Sep 26, 2022, 11:20 PM IST
Highlights

Bengaluru Crime News: ನಿಶ್ಚಯವಾದ ಮದುವೆಗೆ ಫೋಟೊವೊಂದು ಕಿರಿಕ್ ತಂದಿದೆ.  ಫೋಟೊ ವಿಚಾರಕ್ಕೆ ಮಗಳ ತಂದೆ ತಾಯಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ

ಬೆಂಗಳೂರು (ಸೆ. 26): ನಿಶ್ಚಯವಾದ ಮದುವೆಗೆ ಫೋಟೊವೊಂದು ಕಿರಿಕ್ ತಂದಿದೆ.  ಫೋಟೊ ವಿಚಾರಕ್ಕೆ ಮಗಳ ತಂದೆ ತಾಯಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಾಹಿದಾ ಸಾವನಪ್ಪಿದ ಮಹಿಳೆ.  ಇದೇ ತಿಂಗಳ 21ರಂದು ಮೋದಿ ಮಸಿದಿ ರಸ್ತೆಯಲ್ಲಿಈ ಘಟನೆ ನಡೆದಿದೆ. ಶಾಹಿದಾಗೆ ಮುನಾವರ್ ಜೊತೆ ಮದುವೆಯಾಗಿ 19 ವರ್ಷವಾಗಿತ್ತು. ಬಳಿಕ ಹುಟ್ಟಿದ ಮಗಳಿಗೆ ಮದುವೆ ನಿಶ್ಚಯವಾಗಿತ್ತು.ಹುಡುಗನ ಜೊತೆ ಪೊಷಕರು ಮಗಳ ಎಂಗೆಜ್ಮೆಂಟ್ ಸಹ ಮಾಡಿದ್ದರು. 

ಆದರೇ ಈ ನಡುವೆ ಬೇರೊಬ್ಬನ ಜೊತೆ ಯುವತಿ ಇರುವ  ಫೋಟೊವೊಂದು ಹುಡುಗನ ಕಡೆಯವರಿಗೆ ಸಿಕ್ಕಿದೆ.  ಈ ಫೋಟೊ ಹಿಡಿದು ಯುವತಿ ತಂದೆ ಮುನಾವರ್‌ಗೆ ಹುಡುಗನ ತಂದೆ ಪ್ರಶ್ನಿಸಿದ್ದರು.  ಬಳಿಕ ಆ ಫೋಟೊ ವಿಚಾರವಾಗಿ ಮುನಾವರ್ ಹಾಗೂ ಪತ್ನಿ ಶಾಹಿದಾ ಜೊತೆ ಜಗಳ ನಡೆದಿದೆ.  ಈ ವೇಳೆ ತಳ್ಳಾಟದ ಸಂದರ್ಭ ಬಿದ್ದ ಶಾಹಿದಾ ಕೆಳಗಿ ಬಿದ್ದಿದ್ದಾರೆ. 

ಕೆಳಗೆ ಬಿದ್ದಾಗ ಚೂಪಾದ ವಸ್ತು ಶಾಹಿದಾ ಹೊಟ್ಟೆಗೆ ತಾಗಿದೆ. ಶಾಹಿದಾರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಿದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.  ಸದ್ಯ  ಡಿಜೆ ಹಳ್ಳಿ ಪೊಲೀಸರು ಮುನಾವರ್ ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.  

ರಬಕವಿ-ಬನಹಟ್ಟಿ: ತಂದೆ ಹತ್ಯೆ ಮಾಡಿ ಠಾಣೆಗೆ ಬಂದು ಶರಣಾದ ಮಗ: ತಂದೆಯನ್ನೇ ಕೊಂದು ತಾನಾಗಿಯೇ ಪೊಲೀಸ್‌ ಠಾಣೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಶ್ರಯ ಮನೆ ಕಟ್ಟಲು 1 ಗುಂಟೆ ಜಮೀನು ನೀಡುವಂತೆ ತಂದೆಯ ಹತ್ತಿರ ಕೇಳಿದಾಗ ಆತನ ತಂದೆ ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಪುತ್ರ ತಂದೆಯನ್ನು ಗುರುವಾರ ರಾತ್ರಿ ಹತ್ಯೆ ಮಾಡಿದ್ದಾನೆ.

ರಬಕವಿ-ಬನಹಟ್ಟಿತಾಲೂಕಿನ ಲಜಗದಾಳ ತೋಟದ ವಸತಿಯಲ್ಲಿ ಕಳೆದ ಮಾಳಪ್ಪ ಸಿದ್ದಪ್ಪ ಹಳ್ಳೂರ (65) ಹತ್ಯೆಯಾದ ತಂದೆ. ತುಕ್ಕಪ್ಪ (24) ಪೊಲೀಸರಿಗೆ ಶರಣಾದ ಹತ್ಯೆ ಆರೋಪಿ. ಮನೆ ಕಟ್ಟಲು ತಂದೆ-ಪುತ್ರನ ನಡುವೆ ಜಗಳವಾಗಿದೆ. ಇದೇ ಜಗಳ ನಂತರ ಇಡಿ ರಾತ್ರಿ ನಡೆದು ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬನಹಟ್ಟಿಕೆರೆ ಹತ್ತಿರವಿರುವ ಗಾಂವಟಾನ್‌ ಜಾಗದಲ್ಲಿನ ಶೆಡ್‌ನಲ್ಲಿ ಮಲಗಿಕೊಂಡಿದ್ದ ಮಾಳಪ್ಪನನ್ನು ಆತನ ಮಗ ತುಕ್ಕಪ್ಪನು ಕಟ್ಟಿಗೆಯ ಚೌಕಟ್ಟಿನ ತುಂಡಿನಿಂದ ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. 

ಈ ಏಟಿಗೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಆರೋಪಿ ನಂತರ ತಾನಾಗಿಯೇ ಬನಹಟ್ಟಿಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಕುರಿತು ಘಟನಾ ಸ್ಥಳಕ್ಕೆ ಆಗಮಿಸಿದ ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಐ.ಎಂ.ಮಠಪತಿ, ಪಿಎಸೈ ರಾಕೇಶ ಬಗಲಿ ತನಿಖೆ ಮುಂದುವರೆಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

click me!