ಶೌಚಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವು !

By Ravi Janekal  |  First Published Sep 12, 2024, 2:27 PM IST

ಶೌಚಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ. ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತ ದುರ್ದೈವಿ


ಚಿಕ್ಕೋಡಿ (ಸೆ.12): ಶೌಚಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತ ದುರ್ದೈವಿ. ಹಲ್ಯಾಳ ಕರಿಮಸುತಿ ಏತ ನೀರಾವರಿ ಕಾಲುವೆಯಲ್ಲಿ ಬಳಿ ಇಬ್ಬರು ಸ್ನೇಹಿತರ ಜೊತೆಗೆ ಮುಂಜಾನೆ ಶೌಚಕ್ಕೆ ತೆರಳಿದ್ದ ಮೃತ ಯುವಕ. ಕಾಲುವೆ ಮೇಲೆ ಶೌಚ ಬಳಿಕ ಕಾಲುವೆಗೆ ಇಳಿದು ನೀರು ತಲು ಮುಂದಾಗಿದ್ದ ಯುವಕ. ಈ ವೇಳೆ ಕಾಲು ಜಾರಿ ಕಾಲುವೆ ಬಿದ್ದಿದ್ದಾನೆ. ಈಜು ಬಾರದ ಶಿವರಾಯ ಕಾಲುವೆ ಬಿಳುತ್ತಿದ್ದಂತೆ ರಭಸವಾಗಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಹೋಗಿದ್ದಾನೆ.  

Tap to resize

Latest Videos

undefined

ಸಾಂತ್ವನ ಹೇಳಲು ಬಂದಿದ್ದ ಸಚಿವಗೆ ಹಿಂದೂ-ಮುಸ್ಲಿಂ ಮಹಿಳೆಯರಿಂದ ಹಿಗ್ಗಾಮುಗ್ಗಾ ತರಾಟೆ!

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಥಣಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯದ ಬಳಿಕ ಘಟನೆ ನಡೆದ ಸ್ಥಳದಿಂದ ಒಂದು ಕಿಮೀ ಅಂತರದಲ್ಲಿ ಪತ್ತೆಯಾದ ಮೃತದೇಹ. ಮೃತದೇಹ ಪತ್ತೆಯಾಗುತ್ತಿದ್ದಂತೆ ಪೋಷಕರ ಅಕ್ರಂದನ ಮುಗಿಲು ಮುಟ್ಟಿತು. ಸದ್ಯ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!