ಜಾಮೀನು ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ..!

Published : Sep 12, 2024, 10:53 AM IST
ಜಾಮೀನು ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ..!

ಸಾರಾಂಶ

ಜಾಮೀನು ಷರತ್ತು ಮೀರಿದ ತಪ್ಪಿಗೆ ಕಳೆದ 8 ತಿಂಗಳ ಅವಧಿಯಲ್ಲಿ 13 ಮಂದಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಇನ್ನೂ 134 ಮಂದಿ ಮೇಲೆ ಜೈಲು ವಾಸದ ತೂಗುಗತ್ತಿ ಬಿದ್ದಿದೆ. ಹಳೇ ಪ್ರಕರಣಗಳಲ್ಲಿ ಆರೋಪಿಗಳ ಗೈರು ಹೆಚ್ಚಳ ಹಿನ್ನೆಲೆ ಜಾಮೀನು ಷರತ್ತು ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ 

ಬೆಂಗಳೂರು(ಸೆ.12): ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆದು ಬಳಿಕ ಕೋರ್ ವಿಚಾರಣೆಗೆ ಗೈರಾಗುವ ಆರೋಪಿಗಳಿಗೆ ಜೈಲೂಟ ಕಾಯಂಗೊಳಿಸುವ ಪ್ರಬಲ ಅಸ್ತ್ರವೊಂದನ್ನು ನಗರ ಪೊಲೀಸರು ಪ್ರಯೋಗಿಸುತ್ತಿದ್ದಾರೆ.
ಜಾಮೀನು ಷರತ್ತು ಮೀರಿದ ತಪ್ಪಿಗೆ ಕಳೆದ 8 ತಿಂಗಳ ಅವಧಿಯಲ್ಲಿ 13 ಮಂದಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಇನ್ನೂ 134 ಮಂದಿ ಮೇಲೆ ಜೈಲು ವಾಸದ ತೂಗುಗತ್ತಿ ಬಿದ್ದಿದೆ. ಹಳೇ ಪ್ರಕರಣಗಳಲ್ಲಿ ಆರೋಪಿಗಳ ಗೈರು ಹೆಚ್ಚಳ ಹಿನ್ನೆಲೆ ಜಾಮೀನು ಷರತ್ತು ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಜಾರಿಗೊಳಿಸಿದ್ದಾರೆ. 

ಹಳೇ ಪ್ರಕರಣಗಳಲ್ಲಿ ಜಾಮೀನು ಷರತ್ತುಗಳನ್ನು ಉಲ್ಲಂಘನೆ ಸಂಬಂಧ ಬಿಎನ್ಎಸ್ 220 (ಎ) ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾ ಗುತ್ತದೆ. ಬಳಿಕ ತ್ವರಿತವಾಗಿ ಆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಪೊಲೀ ಸರು ಆರೋಪ ಪಟ್ಟಿ ಸಲ್ಲಿಸುತ್ತಾರೆ. ಆಗ ಹಳೇ ಪ್ರಕರಣ ಇತ್ಯರ್ಥವಾ ಗುವ ಮುನ್ನವೇ ಜಾಮೀನು ಷರತ್ತು ಉಲ್ಲಂಘನೆ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಶೀಘ್ರ ವಿಚಾರಣೆ ಮುಗಿದು ತೀರ್ಪು ಪ್ರಕಟವಾಗುತ್ತಿದೆ. ಇದರಿಂದ ಹಳೇ ಪ್ರಕರಣದಲ್ಲಿ ತಪ್ಪಿದರೂ ಜಾಮೀನು ಷರತ್ತು ಪಾಲಿಸದ ಶಿಕ್ಷೆ ಅನುಭವಿಸಬೇಕಾಗುತ್ತದೆ. ಏಕೆ ಈ ಕಠಿಣ ಕ್ರಮ: ದರೋಡೆ, ಕೊಲೆ, ಸುಲಿಗೆ ಹಾಗೂ ವಂಚನೆ ಕೃತ್ಯಗಳು ಮಾತ್ರವಲ್ಲದೆ ಸಣ್ಣಪುಟ್ಟ ಗಲಾಟೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹ ಆರೋಪಿಗಳು ವಿಚಾರಣೆ ಗೈರಾಗುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯ ವಾರೆಂಟ್ ಜಾರಿ ಹಿನ್ನಲೆ ಹಳೇ ಆರೋಪಿಗಳ ಪತ್ತೆಗೆ ಪೊಲೀಸರು 13 ಜಾಮೀನು ಷರತು ವಿವರ ಹೀಗಿದೆ. ದಾಖಲಾದ ಪ್ರಕರಣ 188 ಏಕೆ ವಿಚಾರಣೆ ಹಂತ ತಪ್ಪಿಗೆ ಜೈಲು ಬೆವರು ಹರಿಸಬೇಕಿದೆ. 

ಬೆಂಗಳೂರು: ಕನ್ನಡ ಭಾಷೇಲಿ ಮಾತನಾಡಿ ಎಂದಿದ್ದಕ್ಕೆ ಹಿಂದಿ ಗ್ಯಾಂಗ್‌ನಿಂದ ಗೂಂಡಾಗಿರಿ..!

ಇನ್ನು 20-30 ಪ್ರಕರಣಗಳಲ್ಲಿ ವಾರೆಂಟ್ ಜಾರಿಗೊಳಿಸುವ ಸವಾಲು ವರ್ಷಗಳ ಪೊಲೀಸರು ಎದುರಿಸಬೇಕಾಗಿದೆ. ಆಪ ರಾಧ ಪ್ರಕರಣ ಗಳಲ್ಲಿ ಜಾಮೀನು ಮಂಜೂರಾತಿ ವೇಳೆ ವಿಚಾರಣೆಗೆ ಹಾಜರಾಗು ವಂತೆ ನ್ಯಾಯಾಲ ಯವು ಷರತ್ತು ವಿಧಿಸಿ ರುತ್ತದೆ. ಹೀಗಿದ್ದರೂ ಕೆಲವರು ಉದಾ ಸೀನತೆ ತೋರುತ್ತಾರೆ. ಈ ಹಿನ್ನಲೆ ಜಾಮೀ ನು ನಿಯಮ ಪಾಲಿಸ ದವರಿಗೆ 229 (ಎ)ರಡಿ ಪ್ರತ್ಯೇಕ ಪ್ರಕರಣ ದಾಖಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ. 

5 ತಿಂಗಳು ಜೈಲೂಟ: 

ಜಾಮೀನು ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದೊಡ್ಡನೆಕ್ಕುಂದಿಯ ವಿಶ್ವನಾಥ್ ರೆಡ್ಡಿ ಅಲಿ ಯಾಸ್ ವಿಶ್ವಾಸ್‌ಗೆ 5 ತಿಂಗಳ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ. ಇದೂ ಜಾಮೀನು ನಿಯಮ ಪಾಲಿಸದ ತಪ್ಪಿಗೆ ಶಿಕ್ಷೆಗೆ ಗುರಿಯಾದ ಪ್ರಥಮ ಪ್ರಕರಣವಾಗಿದೆ. 2012ರ ದರೋಡೆ ಪ್ರಕರಣದ ವಿಚಾರಣೆ ಗೈರಾದ ಕಾರಣಕ್ಕೆ ವಿಶ್ವಾಸ್‌ನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿ ಗೊಳಿಸಿತ್ತು. ಆಗ ಆತನನ್ನು ಬಂಧಿಸಿದ ಜೆ.ಬಿ.ನಗರ ಠಾಣೆ ಪೊಲೀಸರು, ವಿಶ್ವಾಸ್‌ನನ್ನು ವಿರುದ್ಧ ಬಿಎನ್ಎಸ್ 229 (ಎ) ರಡಿ ಪ್ರತ್ಯೇಕ ಪ್ರಕರಣ ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿ ಆತನಿಗೆ 5 ತಿಂಗಳು ಶಿಕ್ಷೆ ವಿಧಿಸಿ ನ್ಯಾಯಾ ಲಯವು ಆದೇಶಿದೆ. ಆದರೆ ಆತನ ಮೇಲೆ ಹಳೇ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರೆದಿದೆ. 

4 ದಿನ ಜೈಲಿಗೆ : 

12 ವರ್ಷಗಳ ಹಿಂದೆ ಜಾಮೀನು ಪಡೆದು ಎಚ್‌ಎಎಲ್ ರಾಜು ಹೊರಬಂದಿದ್ದ. ನಂತರ ಹಳೇ ಪ್ರಕರ ಣದ ವಿಚಾರಣೆಗೆ ಹಾಜರಾಗದೆ ಆತ ನಿರ್ಲಕ್ಷ್ಯತನ ತೋರಿದ್ದ. ಆಗ ಆತನ ಮೇಲೆ ನ್ಯಾಯಾಲಯವು ವಾರೆಂಟ್ ಜಾರಿ ಗೊಳಿಸಿತು. ಅಂತೆಯೇ ತನಿಖೆಗಿಳಿದ ಹಲಸೂರು ಪೊಲೀ ಸರು, ಕೊನೆಗೆ ರಾಜುನನ್ನು ಬಂಧಿಸಿದ ಪೊಲೀಸರು, ಜಾಮೀನು ನಿಯಮ ಉಲ್ಲಂಘನೆ ಸಂಬಂಧ ಆತನ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ರಾಜುಗೆ 4 ದಿನ ಜೈಲು ವಿಧಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ