ಚಿಕ್ಕಬಳ್ಳಾಪುರ: ಅಂಗಡಿ ಮುಂದೆ ಎಂಜಲು ಉಗಿದ ಯುವಕ ಕೊಲೆಯಾದ!

By madhusoodhan A  |  First Published Sep 23, 2020, 2:44 PM IST

ಕ್ಷುಲ್ಲಕ ಕಾರಣಕ್ಕೆ ಯುವಕಮನ ಹತ್ಯೆ/ ಅಂಗಡಿ ಮುಂದೆ ಎಂಜಲು ಉಗಿದಿದ್ದೆ ತಪ್ಪಾಯಿತು/ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣ/ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ


ಚಿಕ್ಕಬಳ್ಳಾಪುರ(ಸೆ. 23)  ಅಂಗಡಿ ಮುಂದೆ ಎಂಜಲು ಉಗಿದ ಎಂಬಕಾರಣಕ್ಕೆ ಯುವಕನ ಕೊಲೆಯೇ ಆಗಿಹೋಗಿದೆ. ತನ್ನ ಅಂಗಡಿ ಮುಂದೆ ಎಂಜಲು  ಉಗಿದ  ಯುವಕನನ್ನು ಅಂಗಡಿ ಮಾಲೀಕ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಪ್ರಕರಣ ನಡೆದಿದೆ. ಕೊಲೆಗೀಡಾದ ಯುವಕನನ್ನು ಗ್ರಾಮದ ಮುನಿಕೃಷ್ಣ ಎಂದು ಗುರುತಿಸಲಾಗಿದ್ದು ಕೊಲೆ ಆರೋಪಿ ಅದೇ ಗ್ರಾಮದ ಚೇತನ್.

Tap to resize

Latest Videos

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಬೆಳಗ್ಗೆ ಚೇತನ್ ಅಂಗಡಿ ಮುಂದೆ ಮುನಿಕೃಷ್ಣ ಬಂದಾಗ ಎಂಜಲು ಉಗಿದಿದ್ದು ಆಗ ಚೇತನ್ ಮುನಿಕೃಷ್ಣಗೆ ಬೈದಿದ್ದಾನೆ. ಆಗ ಇಬ್ಬರ ನಡುವೆ ಮಾತಿನಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೇತನ್ ಮುನಿಕೃಷ್ಣರನ್ನು ಕೊಲೆ ಮಾಡಿದ್ದಾನೆ. ಗಾಯಗೊಂಡಿದ್ದ ಮುನಿಕೃಷ್ಣರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾನೆ.

ಘಟನೆಯ ಸಂಬಂದ ಚಿಂತಾಮಣಿ ಗ್ರಾಮಾಂತರ ಠಾಣೆ ಸಿಪಿಐ ಕೆ.ಎಂ.ಶ್ರೀನಿವಾಸಪ್ಪ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಆರೋಪಿ ಚೇತನ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೀಡಾದ ಹಾಗೂ ಕೊಲೆ ಮಾಡಿದ ಇಬ್ಬರು ಯುವಕರು ಒಂದೇ ಸಮುದಾಯಕ್ಕೆ ಸೇರಿದವರೆಂದು ಹೇಳಲಾಗಿದೆ.

click me!