ಸಿಂಗೇನಗ್ರಹಾರ ದೀಪಹಳ್ಳಿಯ ನಿವಾಸಿ ಶ್ವೇತಾ ಅವರನ್ನು ಚೂರಿಯಿಂದ ಇರಿದು ಮನೆಯಲ್ಲಿದ್ದ ನಗದು, ಒಡವೆಗಳನ್ನು ದೋಚಿದ್ದ ಖದೀಮರು| ಹೊರಡುವ ಮುನ್ನ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕೊಡಲು ಕೇಳಿದ್ದ ಆರೋಪಿಗಳು| ಆಕೆ ಇದೊಂದನ್ನು ಬಿಡಿ ಎಂದು ಅಂಗಲಾಚಿಕೊಂಡರೂ ಕೊಲೆ ಮಾಡಿ ಸರ ಕಿತ್ತುಕೊಂಡು ಪರಾರಿ ಆಗಿದ್ದರು|
ಆನೇಕಲ್(ಸೆ.23): ಮನೆಗೆ ನುಗ್ಗಿ ಗೃಹಿಣಿಯನ್ನು ಇರಿದು ಕೊಂದು ಚಿನ್ನಾಭರಣ, ನಗದು, ಸರ ಕಿತ್ತುಕೊಂಡು ಪರಾರಿ ಆಗಿದ್ದ ಇಬ್ಬರು ನಟೋರಿಯಸ್ ಕ್ರಿಮಿನಲ್‌ಗಳನ್ನು ಹೆಬ್ಬಗೋಡಿ ಮತ್ತು ಬನ್ನೇರುಘಟ್ಟ ಠಾಣಾ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಚಿತ್ತೂರು ಸಮೀಪದ ಪುಂಗನೂರಿನ ಬಾಲಕೃಷ್ಣ ಅಲಿಯಾಸ್ ಬಾಲು(27), ತಮಿಳುನಾಡಿನ ವೇಲೂರಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಬುದ್ಧನಗರದ ಹಾಲಿ ನಿವಾಸಿ ವೇಲು ಅಲಿಯಾಸ್ ಸೈಕೋ ಬಂಧಿತರು. ಸೆ.10ರಂದು ತಾಲೂಕಿನ ಸಿಂಗೇನಗ್ರಹಾರ ದೀಪಹಳ್ಳಿಯ ನಿವಾಸಿ ಶ್ವೇತಾ ಅವರನ್ನು ಚೂರಿಯಿಂದ ಇರಿದು ಮನೆಯಲ್ಲಿದ್ದ ನಗದು, ಒಡವೆಗಳನ್ನು ದೋಚಿದ್ದರು. ಹೊರಡುವ ಮುನ್ನ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯದ ಸರವನ್ನು ಕೊಡಲು ಕೇಳಿದ್ದರು. ಆದರೆ ಆಕೆ ಇದೊಂದನ್ನು ಬಿಡಿ ಎಂದು ಅಂಗಲಾಚಿಕೊಂಡರೂ ಕೊಲೆ ಮಾಡಿ ಸರ ಕಿತ್ತುಕೊಂಡು ಪರಾರಿ ಆಗಿದ್ದರು.
undefined
ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!
ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಮಂಗಳವಾರ ಬೆಳಗ್ಗೆ 5ಕ್ಕೆ ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಗೌತಮ್ ಹಾಗೂ ಬನ್ನೇರುಘಟ್ಟಪಿಎಸ್‌ಐ ಗೋಂವಿದ್ ಅವರು ಆರೋಪಿಗಳನ್ನು ಗುಂಡು ಹಾರಿಸಿ ಬಂಧಿಸಿದ್ದಾರೆ. ಕಾರಾರಯಚರಣೆ ವೇಳೆ ಕಾನ್‌ಸ್ಟೇಬಲ್ ಶಿವಕುಮಾರ್‌ಗೆ ಆರೋಪಿ ಬಾಲು ಚೂರಿ ಇರಿದಿದ್ದಾನೆ ಎಂದು ಎಸ್ಪಿ ರವಿ ಡಿ.ಚನ್ನಣ್ಣನವರ್ ಹಾಗೂ ಅಡಿಷನಲ್ ಎಸ್ಪಿ ಲಕ್ಷ್ಮೇ ಗಣೇಶ್ ಸುದ್ದಿಗಾರರಿಗೆ ತಿಳಿಸಿದರು. ಆನೇಕಲ್ ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ ಇದ್ದರು.