
ಬೆಳಗಾವಿ(ಅ.02): ಚೀನಾಗೆ ಎಕ್ಸ್‌ಪೋರ್ಟ್ ಮಾಡುವ ಚಿಪ್ಪು ಹಂದಿ ಕಳ್ಳರ ಗ್ಯಾಂಗ್ ಅರಣ್ಯ ಇಲಾಖೆ ಬಂಧಿಸಿದ ಘಟನೆ ಜಿಲ್ಲೆಯ ಖಾನಾಪುರದಲ್ಲಿ ಇಂದು(ಬುಧವಾರ) ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳುಚಿಪ್ಪು ಹಂದಿಯ ಅಂತಾರಾಜ್ಯ ಕಳ್ಳರ ಖೆಡ್ಡಾಕ್ಕೆ ಕೆಡವಿದ್ದಾರೆ.
ಖಾನಾಪುರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನೆರೆ ರಾಷ್ಟ್ರ ಚೀನಾದಲ್ಲಿ ಔಷಧಿ ಉತ್ಪಾದನೆಗೆಗೆ ಅತಿಹೆಚ್ಚು ಚಿಪ್ಪು ಹಂದಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಖದೀಮರ ಗ್ಯಾಂಗ್ ಚೀನಾಗೆ ಚಿಪ್ಪು ಹಂದಿ ಕಳ್ಳ ಸಾಗಣೆ ಮೂಲಕ ರಫ್ತು ಮಾಡುತ್ತಿದ್ದರು.
ಹಾವೇರಿ: ಕಾಮದಾಹಕ್ಕೆ ತಾಳಿ ಕಟ್ಟಿದ ಗಂಡನನ್ನೇ ಕೊಂದ ಐನಾತಿ ಹೆಂಡ್ತಿ!
ಖಾನಾಪುರದ ಅರಣ್ಯ ಪ್ರದೇಶದಲ್ಲಿ ಚಿಪ್ಪುಹಂದಿ ಬೇಟೆಯಾಡಿ ಚೀನಾಗೆ ಸಾಗಿಸುತ್ತಿದ್ದ ಜಾಲವೊಂದನ್ನ ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳ ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.
ಈ ಗ್ಯಾಂಗ್ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಈ ವೇಳೆ ದಾಳಿ ನಡೆಸಿ ಚಿಪ್ಪು ಹಂದಿ ರಕ್ಷಿಸಿ, ಇಬ್ಬರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಪರಾರಿ ಆಗಿರುವ ಮತ್ತಿಬ್ಬರು ಆರೋಪಿಗಳಿಗೆ ವಿಶೇಷ ತಂಡ ರಚಿಸಿ ಶೋಧಕಾರ್ಯ ಅರಂಭಿಸಿದ್ದಾರೆ. ಲೋಂಡಾ ಆರ್‌ಎಫ್ಓ ವೈ.ಪಿ ತೇಜ್, ಖಾನಾಪುರ ಆರ್‌ಎಫ್‌ಓ ಶ್ರೀಕಾಂತ್ ಪಾಟೀಲ ಕಾರ್ಯಾಚರಣೆಗೆ ಸಾಥ್ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ