
ಬೆಂಗಳೂರು (ಫೆ.2): ರಾತ್ರಿ ವೇಳೆ ಯುವತಿಯರ ರೂಂಗೆ ನುಗ್ಗಿ 'ನಾನು ಕ್ರೈಂ ಬ್ರಾಂಚ್ ಆಫೀಸರ್' ಎಂದು ಕಾಮುಕನೋರ್ವ ಯುವತಿಯರಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ.
ಸುರೇಶ್, ಬಂಧಿತ ಆರೋಪಿ. ವೃತ್ತಿಯಲ್ಲಿ ಹೋಂ ಗಾರ್ಡ್ ಆಗಿರುವ ಆರೋಪಿ ರಾತ್ರಿ ಆಗ್ತಿದ್ದಂತೆ ತಾನು ಪೊಲೀಸ್, ಕ್ರೈಂ ಬ್ರಾಂಚ್ ಆಫೀಸರ್ ಅಂತಾ ಹೇಳಿ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದನ್ನ ಕಾಯಕ ಮಾಡಿಕೊಂಡಿದ್ದ.ಕಳೆದ ಆರು ತಿಂಗಳಿಂದ ಇದೇ ರೀತಿ ಯುವತಿಯರಿಗೆ ಟಾರ್ಚರ್ ಕೊಡ್ತಿದ್ದ ಆರೋಪಿ. ಕಿರುಕುಳ ಕೊಡುತ್ತಿದ್ದ ವೇಳೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹೋಂ ಗಾರ್ಡ್ ಬಯಲಾಗಿದೆ. ಆರೋಪಿ ವಿರುದ್ಧ ಸಂತ್ರಸ್ತೆ ನೀಡಿದ ದೂರು ಸ್ವೀಕರಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹೆಸರಿಗೆ ಮೆಡಿಕಲ್ ಶಾಪ್, ಆಡಿದ್ದೆಲ್ಲ ಕಾಮದಾಟ, ಚನ್ನಗಿರಿಯ ವಿಕೃತಕಾಮಿ ಅರೆಸ್ಟ್
ದೂರಿನಲ್ಲಿ ಏನಿದೆ?
ಸಂತ್ರಸ್ತೆ ಯುವತಿ ಕೇರಳ ಮೂಲದವರಾಗಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ 2ನೇ ವರ್ಷದ ಬಿಎಸ್ ಸಿ ಓದುತ್ತಿದ್ದಾರೆ. ವಿದ್ಯಾರ್ಥಿನಿ ಜೊತೆ ಮೂವರು ಸ್ನೇಹಿತೆಯರ ಜೊತೆ ರೂಂ ಮಾಡಿಕೊಂಡಿದ್ದಾಳೆ. ಜನವರಿ 25ರಂದು ಊಟ ಮಾಡಿ ಮಲಗಿಕೊಂಡಿದ್ದಾಗ ರಾತ್ರಿ ಯಾರೋ ಕದ ತಟ್ತಾರೆ. ಯುವತಿ ಬಾಗಿಲು ತೆಗೆದಿದ್ದಾಳೆ. ಆಗ ಹೊರಗೆ ನಿಂತ ವ್ಯಕ್ತಿ ನಾನು ಪೊಲೀಸ್ ಅಂತಾ ಹೇಳಿಕೊಂಡಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆಂದು ತಿಳಿಸಿದ್ದಾಳೆ. ಅಷ್ಟರಲ್ಲೇ ಏಕಾಏಕಿ ರೂಮಿನಿ ಒಳಗೆ ನುಗ್ಗಿ ಡೋರ್ ಲಾಕ್ ಮಾಡಿ, ಎಲ್ಲರ ಮೊಬೈಲ್‌ಗಳನ್ನು ಹೆದರಿಸಿ ಕಸಿದುಕೊಂಡಿದ್ದಾನೆ.
ಇದನ್ನೂ ಓದಿ: ಮೈಸೂರಿನಲ್ಲಿ ಕೂತು ದುಬೈನಲ್ಲಿದೀವಿ ಅಂತಾ ವಂಚಿಸ್ತಿದ್ದ ಖದೀಮರ ಬಂಧನ ಹೇಗೆ ವಂಚಿಸುತ್ತಿದ್ದರು ಗೊತ್ತಾ?
ಯುವತಿ ಕೈನಲ್ಲಿದ್ದ ಹಾವಿನ ಟ್ಯಾಟೋ ನೋಡಿ, ನನ್ನ ಹಾವು ತೋರಿಸ್ತೇನೆಂದು ಅಶ್ಲೀಲವಾಗಿ ಮಾತಾನಾಡಿದ್ದಾನೆ. ಜೊತೆಗೆ ಯುವತಿ ಸ್ನೇಹಿತನಿಗೆ ಕರೆ ಮಾಡಿದ್ದಕ್ಕೆ ಆಕೆಯ ಸ್ನೇಹಿತೆಯರಿಗೂ ಕಿರುಕುಳ ನೀಡಿದ್ದಾನೆ. ಮೊಬೈಲ್ ವಶಕ್ಕೆ ಪಡೆದು ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್ ಕೊಟ್ಟಿರುವ ಆರೋಪಿ. ಇಲ್ಲಿಗೆ ಯಾಕೆ ಬಂದಿದ್ದು ಇಷ್ಟೊತ್ತಲ್ಲಿ? ತಡರಾತ್ರಿ 1.30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಬರ್ತಿದ್ದಂತೆ ವ್ಯಕ್ತಿಯ ಬಣ್ಣ ಬಯಲಾಗಿದೆ.
ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್ ಕೊಡುತ್ತಿದ್ದ ಆರೋಪಿ ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಜರುಗಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ