ಆನ್‌ಲೈನ್ ಕ್ರೆಡಿಟ್ ಆಪ್ ಸಾಲ ತೀರಿಸಲಾಗದೆ ನೇಣಿಗೆ ಶರಣಾದ ಯುವತಿ

By Suvarna News  |  First Published Nov 5, 2020, 12:32 AM IST

ಆನ್ ಲೈನ್ ಕ್ರೆಡಿಟ್ ಅಪ್ಲಿಕೇಶನ್ ಗಳಲ್ಲಿ ಸಾಲ ಮಾಡುವ ಮುನ್ನ ಎಚ್ಚರ/ ಸಾಲ ತೀರಿಸಲಾಗದೆ ನೇಣು  ಹಾಕೊಕೊಂಡ ಯುವತಿ/ ಎಂಬಿಎ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದರು


ವಿಶಾಖಪಟ್ಟಣ(ನ 05) ಆನ್ ಲೈನ್ ಕ್ರೆಡಿಟ್ ಅಪ್ಲಿಕೇಶನ್ ಗಳ ಮೂಲಕ ಸಾಲ ಪಡೆದುಕೊಂಡಿದ್ದ ಯುವತಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಹ್ಲಾದಾ ಎನ್ನುವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಶಾಖಪಟ್ಟಣ ಗಜುವಾಕಾದ ಸಿಂದರಯ್ಯ ಕಾಳನಿಯ ನಿವಾಸಿ ಯುವತಿ ಎಂಬಿಎ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದರು.  ಮನೆಯ ಅಗತ್ಯ ವಸ್ತು ಕೊಳಳಲು ಸ್ನೇಹಿತರ ಬಳಿ ಸಾಲ ಮಾಡಿದ್ದಳು. ಆ ಸಾಲ ತೀರಿಸಲು ಆನ್ ಲೈನ್ ಕ್ರೆಡಿಟ್ ಅಪ್ಲಿಕೇಶನ್ ಬಳಿ ಲೋನ್ ಮಾಡಿದ್ದಳು.

Tap to resize

Latest Videos

ಶಿವಮೊಗ್ಗ;  ಅಪ್ಪನೊಂದಿಗೆ ಕಾಮದಾಟದಲ್ಲಿದ್ದ ಪತ್ನಿ, ಹೆಂಡತಿ ಹತ್ಯೆ ಮಾಡಿದ ಗಂಡ!

ಕ್ರೆಡಿಟ್ ಅಪ್ಲಿಕೇಶನ್ ನವರು ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದು ಬೇಸತ್ತ ಯುವತಿ ಸ್ನಾನಕ್ಕೆಂದು ಹೋದಾಘ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಯಿ ಉಷಾರಾಣಿ ಪದೇ ಪದೇ ಮಗಳಿಗೆ ಕರೆ ಮಾಡಿದ್ದಾರೆ. ಆದರೆ ಮಗಳು ರಿಸೀವ್ ಮಾಡಿಲ್ಲ. ಅನುಮಾನಗೊಂಡು ಪುತ್ರನ ಬಳಿ ಏನಾಗಿದೆ  ನೋಡು ಎಂದಾಗ ಬಾಥ್ ರೂಂ ನಲ್ಲಿ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ಪೊಲೀಸರು ಎಲ್ಲ ಮಾಹಿತಿ ಕಲೆ ಹಾಕಿದಾಗ ವಿವಿಧ ಅಪ್ಲಿಕೇಶನ್ ಮುಖೇನ  25  ಸಾವಿರ ರೂ. ಸಾಲ ಪಡೆದ ಅಂಶ ಗೊತ್ತಾಗಿದೆ. ಆಪ್ ನವರು ಯುವತಿಯ ಪಾಲಕರಿಗೂ ಕರೆ ಮಾಡಿದ್ದರು. 

click me!