ಭರ್ಜರಿ ಕಾರ್ಯಾಚರಣೆ;  200 ಕೋಟಿ ಮೌಲ್ಯದ ಡ್ರಗ್ಸ್ ವಶ!

By Suvarna NewsFirst Published Nov 4, 2020, 10:45 PM IST
Highlights

ಅತಿದೊಡ್ಡ ಮಾದಕ ದೃವ್ಯ ಜಾಲ ಪತ್ತೆ ಹಚ್ಚಿದ ವಿಶೇಷ ಕಾರ್ಯಪಡೆ/ ಸುಮಾರು ಎರಡು ನೂರು ಕೋಟಿ ರೂ. ಮೌಲ್ಯದ ಮಾದಕ ದೃವ್ಯ ವಶ/ ಪಂಜಾಬ್ ನಲ್ಲಿ ಭರ್ಜರಿ ಕಾರ್ಯಾಚರಣೆ

ಲೂಧಿಯಾನ (ನ. 04)   ಪಂಜಾಬ್‌ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)  ಬಹುದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದೆ.

 ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 200 ಕೋಟಿ ರೂ. ಮೌಲ್ಯದ 34 ಕಿಲೋಗ್ರಾಂಗಳಷ್ಟು  ಮಾದಕ ದೃವ್ಯ ವಶಕ್ಕೆ ಪಡೆಯಲಾಗಿದೆ. ಲೂಧಿಯಾನದಲ್ಲಿ ಮೂವರು ಕಳ್ಳಸಾಗಾಣಿಕೆದಾರರನ್ನು ಎಸ್‌ಟಿಎಫ್ ಬಂಧಿಸಿದೆ.

ವಶಪಡಿಸಿಕೊಂಡ ಡ್ರಗ್ಸ್ ನಲ್ಲಿ 28 ಕೆಜಿ ಹೆರಾಯಿನ್ ಮತ್ತು 6 ಕೆಜಿ ಐಸ್  ಡ್ರಗ್ಸ್ ಸೇರಿದೆ.  ಹೆರಾಯಿನ್ ಬೆಲೆ 140 ಕೋಟಿ ರೂ.,  ಐಸ್ ಡ್ರಗ್ಸ್ ಮೊತ್ತ  6 ಕೋಟಿ ರೂ.  ಆಗಲಿದೆ. ಆರೋಪಿಗಳು ದೇಶದ ವಿವಿಧ ಭಾಗಗಳಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದರು ಎಂಬ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ.

ಇದೊಂದು ಕಾರಣಕ್ಕೆ ಸಂಜನಾ-ರಾಗಿಣಿಗೆ ಬೇಲ್ ಸಿಗಲಿಲ್ಲ

ಬಂಧಿತ ಆರೋಪಿಗಳನ್ನು 30 ವರ್ಷದ ಮಣಿತ್ ಸಿಂಗ್ ಮನ್ನಾ (ಜೋಧೇವಾಲ್‌ನ ಹೊಸ ಬಗವಾನ್ ನಗರ), 20 ವರ್ಷದ ವಿಶಾಲ್ (ಬಟಲಾ, ಗುರುದಾಸ್‌ಪುರ) ಮತ್ತು 40 ವರ್ಷದ ಅಂಗ್ರೆಜ್ ಸಿಂಗ್ (ಪಟಿಯಾಲ) ಎಂದು ಗುರುತಿಸಲಾಗಿದೆ.  ಇನ್ನುಳಿದ ಆರೋಪಿಗಳಾದ ರಾಜನ್ ಶರ್ಮಾ, ಹ್ಯಾಪಿ ರಾಂಧವ ಹರ್ಮಿಂದರ್ ಸಿಂಗ್, ಸನ್ನಿ ಮತ್ತು ತನ್ವೀರ್ ಬೇಡಿ ಬಂಧನಕ್ಕೆ ಬಲೆ ಬೀಸಲಾಗಿದೆ.

ಎಸ್‌ಯುವಿ ವಾಹನದಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಆಧರಿಸಿದ ಪೊಲೀಸರು ದಾಳಿ ಮಾಡಿದ್ದಾರೆ.  ವಾಹನದಲ್ಲಿ  18 ಕೆಜಿ ಹೆರಾಯಿನ್ ಮತ್ತು 6 ಕೆಜಿ ಐಸ್ ಡ್ರಗ್ಸ್ ಸಿಕ್ಕಿದೆ.  ಇಲ್ಲಿ ಸೆರೆ ಸಿಕ್ಕ ಮಂಜಿತ್ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಾರ್ ಪಾರ್ಕಿಂಗ್ ನಿರ್ವಹಣೆ ಕೆಲಸ ಮಾಡಿಕೊಂಡು ಇದ್ದರು. 

click me!