ಆನ್‌ಲೈನ್‌ನಲ್ಲಿ ಪರಿಚಯ: ಲಕ್ಷಾಂತರ ರೂ. ಪಡೆದು ಟೆಕ್ಕಿಗೆ ವಂಚಿಸಿದ ಯುವತಿ

By Kannadaprabha News  |  First Published Sep 21, 2020, 8:37 AM IST

7.60 ಲಕ್ಷ ಪಡೆದು ಟೆಕ್ಕಿಗೆ ವಂಚಿಸಿದ ಯುವತಿ| ಮದುವೆ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಕನ್ಯೆಗಾಗಿ ಹುಡುಕಾಟ ನಡೆಸಿದ್ದ ಟೆಕ್ಕಿ| ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದ ಮೇಯ್‌ಬೆಲ್‌ ಎಡ್ವರ್ಡ್‌ ಎಂಬ ಯುವತಿ| ಹಣ ಪಡೆದ ನಂತರ ಸಂಪರ್ಕಕ್ಕೆ ಸಿಗದೇ ವಂಚಿಸಿದ ಯುವತಿ| 


ಬೆಂಗಳೂರು(ಸೆ.21): ಮದುವೆ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದ ಟೆಕ್ಕಿಗೆ ಪರಿಚಯವಾಗಿದ್ದ ಯುವತಿ 7.60 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಾರತ್ತಹಳ್ಳಿಯ ವಿನಾಯಕ್‌ ಲೇಔಟ್‌ ನಿವಾಸಿ 30 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ವಂಚನೆಗೊಳಗಾದವರು. ಯುವತಿ ಮೇಯ್‌ಬೆಲ್‌ ಎಡ್ವರ್ಡ್‌ ವಿರುದ್ಧ ವೈಟ್‌ಫೀಲ್ಡ್‌ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tap to resize

Latest Videos

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ ಮದುವೆ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಕನ್ಯೆಗಾಗಿ ಹುಡುಕಾಟ ನಡೆಸಿದ್ದರು. ಮೇಯ್‌ಬೆಲ್‌ ಎಡ್ವರ್ಡ್‌ ಎಂಬ ಯುವತಿ ಪರಿಚಯವಾಗಿದ್ದಳು. ಬಳಿಕ ಇಬ್ಬರು ಪರಸ್ಪರ ಫೋನ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು.

ಉಡುಪಿ: ಇನ್ಟಾಗ್ರಾಮ್‌ ಮೂಲಕ 58800 ರು. ಪಂಗನಾಮ

ಟೆಕ್ಕಿ ಮದುವೆಯಾಗುವ ವಿಚಾರವನ್ನು ಯುವತಿಯ ಮುಂದಿಟ್ಟಿದ್ದು, ಇದಕ್ಕೆ ಆಕೆ ಒಪ್ಪಿಗೆ ಸೂಚಿಸಿದ್ದಳು. ಕೆಲವು ದಿನಗಳ ಬಳಿಕ ನಗರದಲ್ಲಿ ಮನೆ ಖರೀದಿಸಲು ನಿರ್ಧರಿಸಿದ್ದೇನೆ. ಹಣ ಕಡಿಮೆ ಆಗಿದೆ. ಆಪ್ತರೊಬ್ಬರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ನೀನು ಕೂಡ ಹಣ ಹೊಂದಿಸಿದರೆ ಅನುಕೂಲವಾಗುತ್ತದೆ ಎಂದಿದ್ದಳು. ಆಕೆಯ ಮಾತನ್ನು ನಂಬಿದ ಟೆಕ್ಕಿ ಸಹಾಯ ಮಾಡುವುದಾಗಿ ಹೇಳಿದ್ದರು.

ಆ.8ರಂದು ಮಹದೇವಪುರದ ಫಿನಿಕ್ಸ್‌ ಶಾಪಿಂಗ್‌ ಮಾಲ್‌ ಬಳಿ ಬರುವಂತೆ ಸೂಚಿಸಿದ್ದಳು. ಅಲ್ಲಿಗೆ ಹೋಗಿದ್ದ ಟೆಕ್ಕಿ, ಕ್ರಿಸ್‌ ಜೆಫ್‌ ಎಂಬಾತನಿಗೆ 95 ಸಾವಿರ ಕೊಟ್ಟಿದ್ದ. ಇದಾದ ನಂತರವೂ ಹಂತಹಂತವಾಗಿ 6.70 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದರು. ಹಣ ಪಡೆದ ನಂತರ ಸಂಪರ್ಕಕ್ಕೆ ಸಿಗದೇ ಇದ್ದಾಗ ಮೋಸ ಆಗಿರುವುದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಟೆಕ್ಕಿ ದೂರು ಕೊಟ್ಟಿದ್ದಾರೆ. ಈ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!